Latest Videos

ಕೈಲಾಸದಲ್ಲಿ ಕನ್ನಡದ ಜೋಗಯ್ಯ ಹಾಡು, ಡ್ರಮ್ಸ್ ಮೂಲಕ ಮಿಂಚಿದ ನಿತ್ಯಾನಂದ ವಿಡಿಯೋ ವೈರಲ್!

By Suvarna NewsFirst Published Aug 13, 2023, 11:21 PM IST
Highlights

ಬಿಡದಿಯಿಂದ ಪರಾರಿಯಾಗಿ ಕೈಲಾಸ ಅನ್ನೋ ದೇಶವನ್ನು ಹುಟ್ಟುಹಾಕಿರುವ ಸ್ವಯಂಘೋಷಿತ ದೇವಮಾನವ ಹಲವು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೈಲಾಸ ದೇಶದ ಪ್ರಧಾನಿ, ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿ ಸೇರಿದಂತೆ ಹಲವು ಕಾರಣಗಳಿಂದ ನಿತ್ಯಾನಂದ ತಲ್ಲಣ ಸೃಷ್ಟಿಸಿದ್ದಾರೆ. ಇದೀಗ ನಿತ್ಯಾನಂದನ ಕೈಲಾಸ ದೇಶದಲ್ಲಿ ಶಿವರಾಜ್ ಕುಮಾರ್ ಅಭಿನಯದ ಜೋಗಯ್ಯ ಚಿತ್ರದ ಹಾಡು ಭಾರಿ ಸದ್ದು ಮಾಡಿದೆ. ಜೋಗಯ್ಯ ಹಾಡಿಗೆ ಖುದ್ದು ನಿತ್ಯಾನಂದ ಡ್ರಮ್ಸ್ ಬಾರಿಸಿ ವೈರಲ್ ಆಗಿದ್ದಾರೆ.

ಬೆಂಗಳೂರು(ಆ.13) ಬಿಡದಿಯಿಂದ ನಾಪತ್ತೆಯಾದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಬಳಿಕ ಕೈಲಾಸ ಅನ್ನೋ ಹೊಸ ದೇಶ ಹುಟ್ಟು ಹಾಕಿ ಪ್ರತ್ಯಕ್ಷನಾಗಿದ್ದ. ದ್ವೀಪವನ್ನು ಖರೀದಿಸಿ ಕೈಲಾಸ ದೇಶ ಮಾಡಿ ಭಾರತಕ್ಕೆ ಅಚ್ಚರಿ ನೀಡಿದ್ದ. ಬಳಿಕ ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಗಳ ಕಳುಹಿಸಿ ಮತ್ತೆ ಸಂಚಲನ ಸೃಷ್ಟಿಸಿದ್ದ. ಇತ್ತೀಚೆಗೆ ನಿತ್ಯಾನಂದನ ಕೈಲಾಸದಲ್ಲಿ ನಟಿ ರಂಜಿತಾ ಪ್ರಧಾನಿ ಅನ್ನೋ ಘೋಷಣೆಯನ್ನು ಮಾಡಿದ್ದ. ಇವೆಲ್ಲಾ ಬೆಳವಣಿಗೆ ಬಳಿಕ ಇದೀಗ ನಿತ್ಯಾನಂದ ಮತ್ತೆ ಭಾರಿ ಸಂಚಲನ ಸೃಷ್ಟಿಸಿದ್ದಾನೆ. ಕೈಲಾಸ ದೇಶದಲ್ಲಿ ಶಿವರಾಜ್ ಕುಮಾರ್ ಅಭಿಯನದ ಕನ್ನಡ ಜೋಗಯ್ಯ ಹಾಡು ಸದ್ದು ಮಾಡಿದೆ. ಖುದ್ದು ನಿತ್ಯಾನಂದ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸುವ ಮೂಲಕ ಗಮನಸೆಳೆದಿದ್ದಾರೆ. ಈ ವಿಡಿಯೋ ಬಾರಿ ವೈರಲ್ ಆಗಿದೆ.

ಸ್ಯಾಂಡಲ್‍‌ವುಡ್‌ನ ಜೋಗಯ್ಯ ಚಿತ್ರದ ಯಾರೋ ಅವನ್ಯಾರೋ ಜೋಗಯ್ಯ ಜೋಗಯ್ಯ ಹಾಡು ಕೈಲಸಾದಲ್ಲಿ ಭಾರಿ ಸದ್ದು ಮಾಡಿದೆ. ಕೈಲಾಸದಲ್ಲಿ ನಿತ್ಯಾನಂದ ದೇವರ ಹಾಡಿನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಬೃಹತ್ ಕಾರ್ಯಕ್ರಮದಲ್ಲಿ ಖುದ್ದು ನಿತ್ಯಾನಂದ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸಿದ್ದಾರೆ. ನಿತ್ಯಾನಂದ ಡ್ರಮ್ಸ್ ಭಾರಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಭಕ್ತರ ಚಪ್ಪಾಳೆ, ಶಿಳ್ಳೆ ಜೋರಾಗಿತ್ತು.

ನಿತ್ಯಾನಂದನ ಕೈಲಾಸದಲ್ಲಿ ರಾಜಕೀಯ ಬೆಳವಣಿಗೆ: ನಿತ್ಯನ ಸರ್ವಾಧಿಕಾರ, ರಂಜಿತಾ ಮಂತ್ರಿಮಂಡಲ.. ಏನಿದು ಕತೆ.?

ತಾಳಕ್ಕೆ ತಕ್ಕಂತೆ ಡ್ರಮ್ಸ್ ಬಾರಿಸಿದ ನಿತ್ಯಾನಂದ ಜೋಗಯ್ಯ ಹಾಡನ್ನು ಕೈಲಾಸದಲ್ಲೂ ಸೂಪರ್ ಹಿಟ್ ಮಾಡಿದ್ದಾರೆ. ಇನ್ನು  ನಿತ್ಯಾನಂದ ಇತರ ಕೆಲ ಹಾಡುಗಳಿಗೂ ಡ್ರಮ್ಸ್ ಬಾರಿಸಿದ್ದಾರೆ. ಆದರೆ ಕೈಲಾಸದ ನಿತ್ಯಾನಂದನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

 

🤘🥁🎶 Get ready to groove to the rhythm of divine beats as the SPH takes the stage on the drums! 🥁

pic.twitter.com/8EbqrHOwN6

— KAILASA's SPH Nithyananda Paramashivam (@SriNithyananda)

 

ಕಳೆದ ವರ್ಷ ನಿತ್ಯಾನಂದ, ತನ್ನ ಹೊಸ ದೇಶ ಕೈಲಾಸದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ ನೀಡುವ ಮಾತುಗಳನ್ನು ಆಡಿದ್ದ. ಅಂತಾರಾಷ್ಟ್ರೀಯ ವಲಸೆ ದಿನಾಚರಣೆ ಸಂದರ್ಭದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿತ್ಯಾನಂದ ‘ಕೈಲಾಸ ದೇಶಕ್ಕೆ ಮುಂದಿನ ದಿನಗಳಲ್ಲಿ ಕನಿಷ್ಠ 1 ಲಕ್ಷ ಜನರನ್ನಾದರೂ ಆಕರ್ಷಿಸಲು ಯೋಜಿಸುತ್ತಿದ್ದೇನೆ’ ಎಂದು ಹೇಳಿದ್ದಾನೆ.ದಕ್ಷಿಣ ಅಮೆರಿಕದ ದೇಶ ಈಕ್ವೇಡರ್‌ ಬಳಿ ದ್ವೀಪ ಪ್ರದೇಶವೊಂದನ್ನು ಖರೀದಿಸಿರುವ ನಿತ್ಯಾನಂದ ಶ್ರೀ, ಅದನ್ನೇ ‘ಕೈಲಾಸ’ ದೇಶವನ್ನಾಗಿ ಸೃಷ್ಟಿಸಿದ್ದಾನೆ. ಅಲ್ಲದೆ ರಿಸವ್‌ರ್‍ ಬ್ಯಾಂಕ್‌, ಪಾಸ್‌ಪೋರ್ಟ್‌, ಧ್ವಜ, ಚಿಹ್ನೆ ಮತ್ತು ವೆಬ್‌ಸೈಟ್‌ ಸಹ ಇದೆ. ಅಲ್ಲದೆ ಈಗಾಗಲೇ ಕೈಲಾಸ ಪ್ರವಾಸ ಕೈಗೊಳ್ಳುವವರಿಗೆ ವೀಸಾ ವಿತರಣೆಯನ್ನು ಸಹ ಆರಂಭಿಸಲಾಗಿದೆ.

 

ನಿತ್ಯಾನಂದನ ಕೈಲಾಸ ದೇಶದ ರಹಸ್ಯ, ವಿಶ್ವಸಂಸ್ಥೆಯ ಮಾನ್ಯತೆ ಪಡೆದಿದೆಯಾ USK?

ನಿತ್ಯಾನಂದ ಸ್ಥಾಪಿಸಿರುವುದಾಗಿ ಹೇಳಿರುವ ಕೈಲಾಸ ದೇಶ ಕೇವಲ ಕಾಲ್ಪನಿಕ, ಅಂಥದ್ದೊಂದು ದೇಶದ ವಿಶ್ವದಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂದು ಇತ್ತೀಚೆಗೆ ವಿಶ್ವ ಸಂಸ್ಥೆ ಹೇಳಿತ್ತು. ನಿತ್ಯಾನಂದನ ಆಪ್ತರು ಒಂದು ಸ್ವಯಂಸೇವಾ ಸಂಸ್ಥೆಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.‘ಅದು ಸಾರ್ವಜನಿಕ ಸಭೆ ಆಗಿತ್ತು. ಎಲ್ಲರೂ ಪಾಲ್ಗೊಳ್ಳಲು ಅವಕಾಶವಿತ್ತು. ಆ ಸಭೆಯಲ್ಲಿನ ಚರ್ಚಾ ವಿಷಯಗಳು ಕೇವಲ ಚರ್ಚೆಗೆ ಸೀಮಿತ. ಮೇಲಾಗಿ ನಿತ್ಯಾನಂದನ ಕಡೆಯವರು ಅಪ್ರಸ್ತುತ ವಿಷಯ ಮಂಡಿಸಿದ್ದು, ಅವನ್ನು ಪರಿಗಣಿಸುವುದಿಲ್ಲ’ ಎಂದು ವಿಶ್ವ ಸಂಸ್ಥೆ ಸ್ಪಷ್ಟಪಡಿಸಿತ್ತು. 
 

click me!