
ಭೋಪಾಲ್(ಸೆ.14): ಹೆಣ್ಣುಮಗು ಜನಿಸಿದ ಸಂತೋಷಕ್ಕೆ ಬೀದಿ ಬದಿ ವ್ಯಾಪಾರಿಯೊಬ್ಬ ಗ್ರಾಹಕರಿಗೆ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಲಿಂಗಭೇದ ಮಾಡಬಾರದು ಎಂಬ ಸಂದೇಶವನ್ನು ಸಾರಿದ್ದಾರೆ.
ಭೋಪಾಲ್‌ನ ಕೋಲಾರ್‌ನಲ್ಲಿ ಪಾನಿಪುರಿ ಮಾರಾಟ ಮಾಡುವ ಅಂಚಲ್ ಗುಪ್ತಾ ಎನ್ನುವ ವ್ಯಕ್ತಿ ಇಡೀ ದಿನ ಸುಮಾರು 35 ಸಾವಿರ ರು. ಬೆಲೆಯ ಪಾನಿಪುರಿಯನ್ನು ಉಚಿತವಾಗಿ ಹಂಚಿದ್ದಾರೆ.
‘ಮಗಳೊಂದಿಗೆ ಭವಿಷ್ಯ ಇರುತ್ತದೆ ಎಂದು ಹೇಳುವ ಅಂಚಲ್ ಸಂತೋಷವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ‘ಮದುವೆಯಾದಾಗಿನಿಂದಲು ಹೆಣ್ಣುಮಗು ಬೇಕು ಎಂದು ನಾವು ಬಯಸಿದ್ದೆವು.
ಈಗ ಆ ಕನಸು ನನಸಾಗಿದೆ. ಈ ಸಂಭ್ರಮವನ್ನು ಪಾನಿಪುರಿ ಹಂಚುವ ಮೂಲಕ ಆಚರಿಸಬೇಕು ಎಂದು ತೀರ್ಮಾನಿಸಿದೆ’ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ