ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!

By Suvarna News  |  First Published Sep 14, 2021, 9:13 AM IST

* ಕೋವಿಡ್‌-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 

* ಕೋವಿಡ್‌ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ

* ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ


ನವದೆಹಲಿ(ಸೆ.14): ಕೋವಿಡ್‌-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ನೀಡಲಾಗುವ ಮರಣ ಪ್ರಮಾಣ ಪತ್ರಗಳಲ್ಲಿ ಕೋವಿಡ್‌ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ. ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಸಲಹೆ ನೀಡಿದೆ. ನ್ಯಾ

ಎಂ.ಆರ್‌. ಶಾ ಮತ್ತು ನ್ಯಾ| ಎ.ಎಸ್‌.ಬೋಪಣ್ಣ ಅವರನ್ನು ಒಳಗೊಂಡ ಪೀಠವು ‘ಕೋವಿಡ್‌ ಸೋಂಕಿತ ಆತ್ಮಹತ್ಯೆ ಮಾಡಿಕೊಂಡರೆ ಮರಣ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಇದನ್ನು ಮರುಪರಿಶೀಲಿಸುವ ಅಗತ್ಯವಿದೆ. ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡಬೇಕು. ಆತ್ಮಹತ್ಯೆ ಎನ್ನುವ ಕಾರಣಕ್ಕೆ ಪರಿಹಾರ ನೀಡದಿರುವುದು ಅಸಮಂಜಸ’ ಎಂದು ಕೋರ್ಟ್‌ ಹೇಳಿದೆ.

Latest Videos

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡಬೇಕು ಆದರೆ ಕೇಂದ್ರ ಸರ್ಕಾರ ತಾರತಮು ಧೋರಣೆ ಅನುಸರಿಸುತ್ತಿದೆ ಎಂದು ವಕೀಲರಾದ ದೀಪಕ್‌ ಕನ್ಸಲ್‌ ಮತ್ತು ಗೌರವ್‌ ಕುಮಾರ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

click me!