ಭೋಜಶಾಲ ಮಸೀದಿ ಅಲ್ಲ ಸರಸ್ವತಿ ದೇವಸ್ಥಾನ, ತೀರ್ಪು ಬೆನ್ನಲ್ಲೇ ಹಿಂದೂಗಳು ಸುಪ್ರೀಂ ಕದ ತಟ್ಟಿದ್ದೇಕೆ?

Published : May 16, 2026, 01:02 PM IST
supreme court bhojshala vasant panchami namaz hindu muslim order

ಸಾರಾಂಶ

ವಿವಾಧಿತ ಭೋಜಶಾಲ ಸಂಕೀರ್ಣ ವಾಗ್ದೇವಿ ಸರಸ್ವತಿ ದೇವಸ್ಥಾನ ಎಂದು ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ದ ಮುಸ್ಲಿಮಂ ಮುಖಂಡರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮೊದಲೇ ಹಿಂದೂಗಳು ಸುಪ್ರೀಂ ಕದ ತಟ್ಟಿದ್ದೇಕೆ?

ಇಂದೋರ್ (ಮೇ.16) ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಸ್ಥಳ ಭೋಜಶಾಲ ಸಂಕೀರ್ಣ ಕುರಿತು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಭೋಜಶಾಲ ಸಂಕೀರ್ಣ ಹಿಂದೂಗಳ ಸರಸ್ವತಿ ದೇವಿ ದೇವಸ್ಥಾನ. ಇದಕ್ಕೆ ಹಲವು ಪುರಾವಣೆಗಳಿವೆ. ಇದು ಕಮಲ್ ಮೌಲಾ ಮಸೀದಿ ಎಂದು ಮುಸ್ಲಿಮರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಷ್ಟೇ ಅಲ್ಲ 2003ರ ಆದೇಶವನ್ನು ರದ್ದುಪಡಿಸಿದೆ. ಹಿಂದೂಗಳ ಪರವಾಗಿ ತೀರ್ಪು ಹೊರಬೀಳುತ್ತಿದ್ದಂತೆ ಮುಸ್ಲಿಂ ಮುಖಂಡರು, ಸಂಘಟನೆಗಳು ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದಾರೆ. ಆದರೆ ಇದಕ್ಕೂ ಮೊದಲೇ ಹಿಂದೂಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.

ಮುಸ್ಲಿಮರ ಮೇಲ್ಮನವಿಗೂ ಮೊದಲೇ ಹಿಂದೂಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಭೋಜಶಾಲ ಸಂಕೀರ್ಣ ಕುರಿತು ಮಧ್ಯಪ್ರದೇಶ ಹೈಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ, ವೈಜ್ಞಾನಿಕ ಆಧಾರ, ಇತಿಹಾಸ ಉಲ್ಲೇಖಗಳನ್ನು ದಾಖಲಿಸಿ ತೀರ್ಪು ನೀಡಿದೆ. ಈ ತೀರ್ಪು ಹಿಂದೂಗಳ ಪರವಾಗಿ ಬಂದಿದೆ. ಇದು ವಾಗ್ದೇವಿ ಸರಸ್ವತಿ ದೇವಸ್ಥಾನ, ಇಲ್ಲಿ ನಮಾಜ್ ಮಾಡುವುದು ನಿಲ್ಲಿಸಿ ಎಂದು ಹೈಕೋರ್ಟ್ ಆದೇಶದಲ್ಲಿ ಸೂಚಿಸಿತ್ತು. ಇದರ ಬೆನ್ನಲ್ಲೇ ಮುಸ್ಲಿಂರು ಸಹಜವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಇದಕ್ಕೂ ಮೊದಲೇ ಹಿಂದೂಗಳು ಸುಪ್ರೀಂ ಕೋರ್ಟ್‌ನಲ್ಲಿ ಕ್ಯಾವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಮುಸ್ಲಿಮರು ಮೇಲ್ಮನವಿ ಸಲ್ಲಿಸಿದರೆ ಹೈಕೋರ್ಟ್ ಆದೇಶಕ್ಕ ಮಧ್ಯಂತರ ತಡೆ ನೀಡುವ ಮೊದಲು ನಮ್ಮ ವಾದ ಆಲಿಸಬೇಕು ಎಂದು ಕ್ಯಾವಿಯೆಟ್ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಇದೀಗ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದೆ.

ಹಿಂದೂ ಪರ ಅರ್ಜಿದಾರರಾದ ಅಶಿಶ್ ಗೊಯೆಲ್ ಸೇರಿದಂತೆ ಇತರರು ಸುಪ್ರೀಂ ಕೋರ್ಟ್‌ನಲ್ಲಿ ಕ್ಯಾವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಮುಸ್ಲಿಮರು ಮಧ್ಯಪ್ರದೇಶ ಹೈಕೋರ್ಟ್ ಅರ್ಜಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೆ ಸುಪ್ರೀಂ ಕೋರ್ಟ್ ಹಿಂದೂ ಪಕ್ಷದ ವಾದವನ್ನು ಆಲಿಸಬೇಕು. ಹಿಂದೂ ಪಕ್ಷದ ವಾದ ಆಲಿಸದೆ ಮಧ್ಯಂತರ ತಡೆಯಾಜ್ಞೆ ನೀಡಬಾರದು ಎಂದು ಕ್ಯಾವಿಯೆಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್ ಇದೀಗ ತಡೆಯಾಜ್ಞೆ ನೀಡುವ ಮೊದಲು ಹಿಂದೂಪರ ವಾದ ಆಲಿಸುವ ಸಾಧ್ಯತೆ ಇದೆ.

2003ರ ಆದೇಶ ರದ್ದು, ನಮಾಜ್‌ಗೆ ಅವಕಾಶವಿಲ್ಲ

ಭೋಜಶಾಲ ಸಂಕೀರ್ಣ ಹಿಂದೂ ದೇವಸ್ಥಾನ ಸಂಕೀರ್ಣವಾಗಿದೆ. ಭೋಜ ಅರಸ ಇಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರವನ್ನಾಡಿ ಮಾಡಿದ್ದ. ಇದೇ ಸಂಕೀರ್ಣದಲ್ಲಿ ವಾಗ್ದೇವಿ ಸರಸ್ವತಿ ದೇವಸ್ಥಾನವಿತ್ತು. ಇದು ಹಿಂದೂಗಳ ದೇವಸ್ಥಾನದ ಸಂಕೀರ್ಣ ಎಂದು ತೀರ್ಪು ನೀಡಿದೆ. ಇದೇ ವೇಳೆ 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಂಗಳವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು, ಶುಕ್ರವಾರ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹಿಂದೂಗಳಿಂದ ಇಂದು ವಿಶೇಷ ಪೂಜೆ

ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಭೋಜಶಾಲ ಸಂಕೀರ್ಣ ಬಳಿ ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇಂದೂ ಭಾರಿ ಭದ್ರತೆಯೊಂದಿಗೆ ಹಿಂದೂಗಳು ಇಲ್ಲಿ ಸ್ವಚ್ಚಗೊಳಿಸಿ ಪೂಜೆ ಸಲ್ಲಿಸಿದ್ದಾರೆ. ರಂಗೋಲಿ, ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೀಟ್ ವಿವಾದದ ಬೆನ್ನಲ್ಲೇ ಲಕ್ನೋದಲ್ಲಿ ಮತ್ತೊಂದು ಶಾಕ್, ವಿದ್ಯಾರ್ಥಿನಿಗೆ ಕಿರುಕುಳ, ಪೇಪರ್ ಲೀಕ್, ಪ್ರೊಫೆಸರ್ ಅರೆಸ್ಟ್!
ಮಮತಾ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್! ಬಿಹಾರ ಸಚಿವನ ಹೇಳಿಕೆ ವೈರಲ್!