ನಡುರಸ್ತೆಯಲ್ಲೇ ಎಂಥಾ ಪ್ರೇಮ..! ಪ್ರೇಮಿ ಜೊತೆಗಿನ ಗಲಾಟೆಯನ್ನೂ Instagram ರೀಲ್‌ ಆಗಿ ಪೋಸ್ಟ್‌ ಮಾಡಿದ್ಲು!

Published : Oct 08, 2022, 04:14 PM IST
ನಡುರಸ್ತೆಯಲ್ಲೇ ಎಂಥಾ ಪ್ರೇಮ..! ಪ್ರೇಮಿ ಜೊತೆಗಿನ ಗಲಾಟೆಯನ್ನೂ Instagram ರೀಲ್‌ ಆಗಿ ಪೋಸ್ಟ್‌ ಮಾಡಿದ್ಲು!

ಸಾರಾಂಶ

ಸಿಟಿ ಸಿಒ ಸತೀಶ್ ವರ್ಮಾ ಪ್ರಕಾರ, ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಂಜು ಖಾಟಿಕ್ ಎಂಬ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಫತೇಪುರ್ ಸಿಕ್ರಿಗೆ ಭೇಟಿ ನೀಡಲು ಹೋಗಿದ್ದರು. ರಾತ್ರಿ ಹಿಂದಿರುಗುವಾಗ ಇಬ್ಬರೂ ಯಾವುದೋ ವಿಷಯಕ್ಕೆ ಜಗಳವಾಡಿಕೊಂಡಿದ್ದಾರೆ.  

ಜೈಪುರ (ಅ.8): ಸೋಶಿಯಲ್‌ ಮೀಡಿಯಾ ಇಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ವೈಯಕ್ತಿಕ ಜೀವನದಲ್ಲಿ ಏನೇ ಆಗ್ಲಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ, ಸಿಂಪಥಿ ಗಿಟ್ಟಿಸುವುದೇ ದೊಡ್ಡ ವಿಚಾರವಾಗಿದೆ. ರಾಜಸ್ಥಾನದ ಭರತ್‌ಪುರದಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಪ್ರೇಮಿಯ ಜೊತೆಗೆ ಯಾವುದೋ ವಿಚಾರಕ್ಕೆ ಗೆಳತಿಯೊಬ್ಬಳು ಗಲಾಟೆ ಮಾಡಿಕೊಂಡಿದ್ದಾಳೆ. ಈ ವೇಳೆ ಸಿಟ್ಟಾದ ಗೆಳತಿ ತನ್ನ ಕೈಯಿಂದಲೇ ಕಾರಿನ ಗಾಜನ್ನು ಪುಡಿ ಮಾಡಿದ್ದಾಳೆ. ಇದರಿಂದ ಆಕೆಯ ಕೈಗಳು ಹಾಗೂ ಇಡೀ ಕಾರು ಪೂರ್ತಿ ರಕ್ತಮಯವಾಗಿತ್ತು. ಇಂಥ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಬದಲು, ಇನ್ಸ್‌ಟಾಗ್ರಾಮ್‌ನಲ್ಲಿ ದೊಡ್ಡ ದೊಡ್ಡ 'ಪ್ರೇಮ'ದ ಡೈಲಾಗ್‌ಗಳನ್ನು ಹೊಡೆದು ರೀಲ್ಸ್‌ ಪೋಸ್ಟ್‌ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ವೇಳೆ ಕಾರ್‌ ಹಾಗೂ ಕಾರಿನ ಗಾಜು ಒಡೆದ ಹುಡುಗಿ ಇಬ್ಬರೂ ಸಿಕ್ಕಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಗೆಳೆಯ ಮಾತ್ರ ಆಕೆಯನ್ನು ಅಲ್ಲಿಯೇ ಬಿಟ್ಟು ಹೊರಡು ಹೋಗಿದ್ದಾನೆ. ಪೊಲೀಸರು ಆತನ ವಿರುದ್ಧ ಕೇಸ್‌ ದಾಖಲಿಸಲು ಮುಂದಾದರೂ, ಆಕೆ ಮಾತ್ರ ಆತನನ್ನು ಬಿಟ್ಟುಬಿಡಿ ಎಂದು ಪೊಲೀಸರಲ್ಲಿ ಅಂಗಲಾಚಿದ್ದಾಳೆ.

ರಾಜಸ್ಥಾನದ ಭರತ್‌ಪುರದಲ್ಲಿ (Bharatpur in Rajasthan) ನಡೆದ ಘಟನೆ ಇದಾಗಿದೆ. ಕಾರಿನ ಗಾಜಿಗೆ ಆಕೆ ಗುದ್ದಿದ್ದರಿಂದ ಆಕೆಯ ಕೈಗಳು ಸಂಪೂರ್ಣವಾಗಿ  ರಕ್ತಮಯವಾಗಿದೆ (Blood). ಇದರ ಬೆನ್ನಲ್ಲೇ, ಹಿಂದಿ ಚಿತ್ರದ ಡೈಲಾಗ್‌ ಹೊಡೆದು, ರಕ್ತಮಯವಾದ ಕೈಗಳನ್ನು ರೀಲ್ಸ್‌ನಲ್ಲಿ ತೋರಿಸಿದ್ದಾರೆ. ಈ ರೀಲ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದರೆ, ಕೆಲ ವ್ಯಕ್ತಿಗಳು ಈ ಕುರಿಯಾಗಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಭರತ್‌ಪುರ ಪೊಲೀಸರು (Police) ಸ್ಥಳಕ್ಕೆ ಆಗಮಿಸಿದರೂ, ಹೆಚ್ಚಿನ ಕ್ರಮ ಕೈಗೊಳ್ಳಲಿಲ್ಲ. ಯುವತಿಗೆ ಕೆಲ ಹೊತ್ತು ತಿಳಿಹೇಳಿದ ಬಳಿಕ, ಪೊಲೀಸರು ಆಕೆಯನ್ನು ಮನೆಗೆ ತಲುಪಿಸಿದ್ದಾರೆ.  ಆದರೆ ನಡುರಸ್ತೆಯಲ್ಲಿ ನಡೆದ ಈ ಘಟನೆಯಿಂದ ಜನರು ಪರದಾಡಿದರು. ಪ್ರಕರಣವು  ಗೋಪಾಲ್‌ಗಢ್ ಪ್ರದೇಶದಲ್ಲಿ ನಡೆದಿದರು. ಪೊಲೀಶರು ಸ್ಥಳಕ್ಕೆ ಅಗಮಿಸುವ ವೇಳೆ ಕಾರಿನಲ್ಲಿದ್ದ ಸಂಜು ಹಾಗೂ ಆತನ ಗೆಳತಿ ಮೀನಾ ನಡುವೆ ದೊಡ್ಡ ಮಟ್ಟದ ಜಗಳ ನಡೆದುಹೋಗಿತ್ತು.

ಫತೇಪುರ ಸಿಕ್ರಿಯ (Fatehpur Sikri) ಹೋಟೆಲ್‌ವೊಂದರಲ್ಲಿ ಗುರುವಾರ ರಾತ್ರಿಯ ಭೋಜನಕ್ಕೆ ಸಂಜು (Sanju) ಹಾಗೂ ಮೀನಾ (Meena) ತೆರಳಿದ್ದರು. ಊಟದ ಬಳಿಕ ಕೆಲ ಹೊತ್ತು ವಾಕ್‌ ಮಾಡಿ, ಕಾರ್‌ನ ಬಳಿ ಬಂದಿದ್ದಾರೆ. ಮಥುರಾ ಗೇಟ್‌ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿರುವ ಮೀನಾ ಅವರ ಮನೆಗೆ ಬಿಟ್ಟುಬರಲು ಸಂಜು ಸಿದ್ಧವಾದ ವೇಳೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ಆರಂಭವಾಗಿದೆ.

Bengaluru: ಯಾರದ್ದೋ ಲವ್‌ ಸ್ಟೋರಿ, ಅಪರಿಚಿತನಿಗೆ ಮಚ್ಚಿನೇಟು!

ಇದಕ್ಕೂ ಮುನ್ನ ಪಾರ್ಕಿಂಗ್‌ ಪ್ರದೇಶದಲ್ಲಿ ನಿಂತಿದ್ದ ಕಾರ್‌ನಲ್ಲಿಯೇ ಇಬ್ಬರೂ ರೊಮಾನ್ಸ್ (Romance) ಆರಂಭಿಸಿದ್ದಾರೆ. ಆ ನಂತರ ಕಾರಿನಿಂದ ಹೊರಬಂದ ಇಬ್ಬರೂ ಮತ್ತೆ ಪರಸ್ಪರ ಪ್ರೀತಿ ಮಾಡಲು ಆರಂಭಿಸಿದ್ದಾರೆ. ಜನರು ಪ್ರತಿಭಟಿಸಿದಾಗ, ಇಬ್ಬರೂ ಜನರತ್ತ ಗಮನ ನೀಡಿರಲಿಲ್ಲ. ನಂತರ ಮಾರ್ಗಮಧ್ಯದಲ್ಲಿ ಸಂಜು ಮತ್ತು ಮೀನಾ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಜಗಳದಲ್ಲಿ ಮೀನಾ, ಸಂಜು ಕುರಿತಾಗಿ ಕಿರುಚಾಡಲು ಆರಂಭಿಸಿದ್ದಾಳೆ.

BBK9 ಐಶ್ವರ್ಯ ಪಿಸ್ಸೆ ದಯವಿಟ್ಟು ನನ್ನ ಪ್ರೀತ್ಸೆ ಎಂದ ಪ್ರಪೋಸ್ ಮಾಡಿದ ನವಾಜ್!

ಬಳಿಕ ಕಾರಿನ ಗಾಜಿಗೆ ಬಲವಾಗಿ ಗುದ್ದಿ ಗಾಜು ಒಡೆದಿದ್ದಾರೆ. ಅವಳ ಈ ರೂಪ ನೋಡಿ ಸಂಜು ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ, ಮೀನಾಳ ಕೈಯಿಂದ ರಕ್ತ ಸೋರಿಕೆಯಾಗುತ್ತಲೇ ಇತ್ತು ಮತ್ತು ಅವಳು ರೀಲ್ಸ್ ಮಾಡುವುದನ್ನು ಮುಂದುವರೆಸಿದಳು. ಪ್ರೇಮಿಯನ್ನು ವಿಶ್ವಾಸದ್ರೋಹಿ ಎಂದು ಕರೆಯುತ್ತಲೇ ಇದ್ದಳು. ಪೊಲೀಸರು ಅಲ್ಲಿಗೆ ಬಂದು ಹೇಗೋ ಆಕೆಯನ್ನು ಸಮಾಧಾನ ಮಾಡಿ ಮನೆಗೆ ಕಳಿಸಿದ್ದಾರೆ. ಈ ನಾಟಕ ನೋಡಲು ನಡುರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!