ಭಯೋತ್ಪದನಾ ಕೃತ್ಯಕ್ಕೆ ನೆರವು, ಆರ್ಥಿಕ ಸಹಾಯ ಮಾಡಿದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಪಿಎಫ್ಐ ಪ್ರತೀಕಾರಕ್ಕಾಗಿ ಕಾಯುತ್ತಿದೆ. ಪ್ರತೀಕಾರದ ಭಾಗವಾಗಿ ಇದೀಗ ಬೆದರಿಕೆ ಪತ್ರವೊಂದು ಬಹಿರಂಗವಾಗಿದೆ. ಬಿಜೆಪಿ ನಾಯಕನಿಗೆ ಈ ಪತ್ರ ಕಳುಹಿಸಲಾಗಿದ್ದು, ಆಯೋಧ್ಯೆ, ಮಥುರಾ ಮೇಲೆ ಆತ್ಮಾಹುತಿ ದಾಳಿ ಎಚ್ಚರಿಕೆ ನೀಡಿದ್ದರೆ, ಮೋದಿಗೆ ಸರ್ ತನ್ ಸೆ ಜುದಾ ಎಚ್ಚರಿಕೆ ನೀಡಲಾಗಿದೆ.
ಮುಂಬೈ(ಅ.08): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅಂದರ ಅಂಗ ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದೇಶದ್ರೋಹಿ ಕೃತ್ಯ ಎಸಗುತ್ತಿದ್ದ ಪಿಎಫ್ಐ ಸಂಘಟನೆಯ ಸೊಕ್ಕು ಮುರಿಯಲಾಗಿದೆ. ಆದರೆ ಈ ನಿರ್ಧಾರದಿಂದ ಪಿಎಫ್ಐ ಕೊತ ಕೊತ ಕುದಿಯುತ್ತಿದೆ. ಪ್ರತೀಕಾರಕ್ಕಾಗಿ ಕಾಯುತ್ತಿದೆ. ಇದೀಗ ಪಿಎಪ್ಐ ಸಂಘಟನೆ ಪ್ರತೀಕಾರದ ಪತ್ರವೊಂದನ್ನು ರವಾನಿಸಿದೆ. ಈ ಪತ್ರದಲ್ಲಿ ಆಯೋಧ್ಯೆ ರಾಮ ಮಂದಿರ, ಮಥುರಾ ಕೃಷ್ಣ ಮಂದಿರದ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಎಚ್ಚರಿಸಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ ನೀಡುವುದಾಗಿ ಎಚ್ಚರಿಸಲಾಗಿದೆ. ಇಷ್ಟೇ ಅಲ್ಲ ನಿಷೇಧಕ್ಕೆ ದೊಡ್ಡ ಮಟ್ಟದಲ್ಲಿ ಪ್ರತೀಕಾರಾ ತೀರಿಸುವುದಾಗಿ ಎಚ್ಚರಿಸಿದೆ.
ಮಹಾರಾಷ್ಟ್ರ ಬಿಜೆಪಿ ಶಾಸಕ ವಿಜಯ್ ಕುಮಾರ್ ದೇಶ್‌ಮುಖ್ ಅವರಿಗೆ ಈ ಪತ್ರ ಕಳುಹಿಸಲಾಗಿದೆ. ಪಿಎಫ್ಐ ನಾಯಕ ಮೊಹಮ್ಮದ್ ಶಫಿ ಬಿರಾಜ್‌ದಾರ್ ಹೆಸರಿನಲ್ಲಿ ಈ ಪತ್ರ ಬಂದಿದೆ. ಈ ಕುರಿತು ವಿಜಯ್ ಕುಮಾರ್ ದೇಶ್‌ಮುಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯ್ ಕುಮಾರ್‌ಗೂ ಎಚ್ಚರಿಕೆ ನೀಡಲಾಗಿದೆ.
ಪಿಎಫ್‌ಐ ಕುಕೃತ್ಯ ಹಿಂದೆ ಸರ್ವೀಸ್ ತಂಡದ ಕೈವಾಡ: ಸಂಘಟನೆಯ ಮುಖಂಡರ ಭದ್ರತೆಗೆಂದು ಸ್ಥಾಪನೆ
ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು, ಪಿಎಫ್ಐ ಸಂಘಟನೆ ನಿಷೇಧಕ್ಕೆ(PFI Ban) ಸೇಡು ತೀರಿಸಿಕೊಳ್ಳುವುದು ಪಕ್ಕಾ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಗಳ(Hindu) ಪವಿತ್ರ ಕ್ಷೇತ್ರ ಆಯೋಧ್ಯೆ(Ayodhya)ಹಾಗೂ ಮಥುರಾದ(Mathura) ಮೇಲೆ ಆತ್ಮಾಹುತಿ ದಾಳಿ ಮೂಲಕ ಮಂದಿರ ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.
ನಿಷೇಧಿತ ಪಿಎಫ್‌ಐ ಜೊತೆಗೆ 873 ಕೇರಳ ಪೊಲೀಸರ ನಂಟು?
ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡಿದ ಕಾರಣಕ್ಕಾಗಿ ಇತ್ತೀಚೆಗೆ ನಿಷೇಧಕ್ಕೆ ಒಳಪಟ್ಟಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆಗೆ ಕೇರಳದ 873 ಪೊಲೀಸ್ ಸಿಬ್ಬಂದಿಗೆ ನಂಟಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಆದರೆ ಮಾಧ್ಯಮಗಳ ವರದಿಯನ್ನು ಕೇರಳ ಪೊಲೀಸರು ತಳ್ಳಿಹಾಕಿದ್ದಾರೆ.
ಹಿಂದು ಹತ್ಯೆ ಸಂಚಿನ ಗುಟ್ಟು ಬಿಚ್ಚಿಡುತ್ತಿಲ್ಲ ಪಿಎಫ್‌ಐ
ವಿಶೇಷ ಶಾಖೆ, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳಿಗೆ ಸೇರಿದ ಪೊಲೀಸ್ ಸಿಬ್ಬಂದಿ, ಉನ್ನತ ಪೊಲೀಸ್ ಅಧಿಕಾರಿಗಳ ಕಚೇರಿಯ ಕೆಲಸಗಾರರು ಪಿಎಫ್‌ಐ ಜೊತೆ ನಂಟು ಹೊಂದಿದ್ದಾರೆ. ಇವರಲ್ಲಿ ಎಸ್‌ಐ, ಎಸ್‌ಎಚ್‌ಒ ಮತ್ತು ಇತರೆ ದರ್ಜೆ ಅಧಿಕಾರಿಗಳು ಸೇರಿದ್ದಾರೆ. ಹೀಗಾಗಿ ಇವರ ಹಣಕಾಸಿನ ವಹಿವಾಟಿನ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ತನ್ನ ಮಾಹಿತಿಯಲ್ಲಿ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಪಿಎಫ್‌ಐ ನಿಷೇಧಕ್ಕೂ ಪೂರ್ವದಲ್ಲಿ ಎನ್‌ಐಎ ಒಂದೇ ವಾರದಲ್ಲಿ 15 ರಾಜ್ಯಗಳಲ್ಲಿ ಒಟ್ಟು 93 ಕರೆ ದಾಳಿ ನಡೆಸಿ 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರು ಹಾಗೂ ನಾಯಕರನ್ನು ಬಂಧಿಸಿತ್ತು. ಇದಾದ ಬೆನ್ನಲ್ಲೇ 873 ಕೇರಳ ಪೊಲೀಸರು ಪಿಎಫ್‌ಐ ನಂಟು ಹೊಂದಿದ್ದಾರೆ ಎಂದು ಹಲವಾರು ಮಾಧ್ಯಮಗಳು ಪ್ರಕಟಿಸಿದ್ದವು.