Breaking: ಭಜನ್‌ಲಾಲ್‌ ಶರ್ಮ ರಾಜಸ್ಥಾನದ ಮುಂದಿನ ಸಿಎಂ

By Santosh Naik  |  First Published Dec 12, 2023, 4:23 PM IST

ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮ ಮಾಡಲಾಗಿದೆ.


ಜೈಪುರ (ಡಿ.12): ಕೊನೆಗೂ ರಾಜಸ್ಥಾನಕ್ಕೆ ಸಿಎಂ ಘೋಷಣೆಯಾಗಿದೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದ ಭಜನ್‌ ಲಾಲ್‌ ಶರ್ಮ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್‌ ಮಂಗಳವಾರ ಘೋಷಣೆ ಮಾಡಿದೆ. ಇದೇ ಮೊದಲ ಬಾರಿ ಶಾಸಕರಾಗಿದ್ದ ಭಜನ್‌ಲಾಲ್‌ ಶರ್ಮ, ರಾಜಸ್ಥಾನದ ಸಂಗಾನೇರ್‌ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿ ಆಯ್ಕೆಯಾದ ಮೊದಲ ಬಾರಿಯೇ ಸಿಎಂ ಆಗಿಯೂ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ ಬಳಿಕ ರಾಜಸ್ಥಾನಕ್ಕೂ ಬಿಜೆಪಿ ಹೊಸ ಮುಖವನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಬ್ರಾಹ್ಮಣ ಸಮುದಾಯದ ಭಜನ್‌ಲಾಲ್‌ ಶರ್ಮ, ಭರತ್‌ಪುರ ಮೂಲದವರಾಗಿದ್ದಾರೆ. ನಾಲ್ಕು ಬಾರಿ ರಾಜಸ್ಥಾನದ ಬಿಜೆಪಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.  ದೆಹಲಿಯ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯ ನಂತರ ಭಜನ್‌ಲಾಲ್ ಶರ್ಮಾ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಭರತ್‌ಪುರದ ನಿವಾಸಿ ಭಜನ್‌ಲಾಲ್ ಶರ್ಮಾ ಬಹಳ ವರ್ಷಗಳಿಂದ ಬಿಜೆಪಿಯ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಅವರಲ್ಲಿದೆ ಬಿಜೆಪಿ ಅವರನ್ನು ಜೈಪುರದ ಸಂಗನೇರ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ತಿಳಿಸಿತ್ತು. ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅಶೋಕ್‌ ಲಾಹೋಟಿಗೆ ಟಿಕೆಟ್‌ ಕಡಿತ ಮಾಡಿ ಭಜನ್‌ ಲಾಲ್‌ ಶರ್ಮ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಸಂಗನೇರ್‌ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಹಾಗಾಗಿ ಈ ಕ್ಷೇತ್ರದ್ಲಿ ಭಜನ್‌ ಲಾಲ್ ಗೆಲುವು ಕಷ್ಟವಾಗಿರಲಿಲ್ಲ. ಸಂಘಟನೆಯಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ.

Tap to resize

Latest Videos

undefined

Breaking: ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಸಿಎಂ ಆಗಿ ಘೋಷಣೆ!

ಮೇಲ್ವಿಚಾರಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ" ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ವಿನೋದ್ ತಾವ್ಡೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ನೇಮಕ ಮಾಡಿತ್ತು. ಇಂದು ಮಧ್ಯಾಹ್ನ ಮೂವರು ನಾಯಕರು ಜೈಪುರ ತಲುಪಿ ಶಾಸಕರೊಂದಿಗೆ ಸಭೆ ನಡೆಸಿದರು. ಇಂದು ಮಧ್ಯಾಹ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ವಸುಂಧರಾ ರಾಜೇ ಅವರನ್ನು ಭೇಟಿ ಮಾಡಿದರು. ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜನಾಥ್ ಸಿಂಗ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ನೂತನ ಸಿಎಂ; ಶಿವರಾಜ್ ಸಿಂಗ್ ಬದಲು ಹೊಸಬರಿಗೆ ಮಣೆಹಾಕಿದ ಬಿಜೆಪಿ!

ಇಬ್ಬರು ಉಪಮುಖ್ಯಮಂತ್ರಿ: ಮುಖ್ಯಮಂತ್ರಿ ರೇಸ್‌ನಲ್ಲಿ ರಾಜ ಕುಟುಂಬದ ದಿಯಾ ಕುಮಾರಿ ಹಾಗೂ ಪ್ರೇಮ್‌ಚಂದ್‌ ಬರ್ಜ್ವಾ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ.

ಮೂರು ರಾಜ್ಯಕ್ಕೆ ಮೂರು ಹೊಸ ಸಿಎಂ: ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಭಾರಿ ಗೆಲುವು ದಾಖಲು ಮಾಡಿದ್ದ ಬಿಜೆಪಿ ಈ ಮೂರೂ ರಾಜ್ಯಗಳಲ್ಲಿ ಹೊಸಬರನ್ನು ಸಿಎಂ ಆಗಿ ಮಾಡಿದೆ. ಛತ್ತೀಸ್‌ಗಢಕ್ಕೆ ಬುಡಕಟ್ಟು ನಾಯಕ ವಿಷ್ಣುದೇವ್‌ ಸಾಯಿ ಅವರನ್ನು ಸಿಎಂ ಆಗಿ ಘೋಷಣೆ ಮಾಡಿದ್ದರೆ, ಮಧ್ಯಪ್ರದೇಶಕ್ಕೆ ಮೋಹನ್‌ ಯಾದವ್‌ ಅವರನ್ನು ಸಿಎಂ ಆಗಿ ಈಗಾಗಲೇ ಘೋಷಣೆ ಮಾಡಿದೆ.

click me!