
ಕೋಲ್ಕತ್ತಾ(ಅ.03): ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ(Bhabanipur Buypoll) ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಬರೋಬ್ಬರಿ 58,832 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಅವರಿಗೆ ಬಿಜೆಪಿಯ(BJP) ಪ್ರಿಯಾಂಕಾ ಟಿಬ್ರೆವಾಲ್(Priyanka Tibrewal) ತೀವ್ರ ಸ್ಪರ್ಧೆ ನೀಡಿದ್ದರು. ಈ ಚುನಾವಣೆಯಲ್ಲಿ ಸೋತರೆ ಬೇರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದ ಕಾರಣ ಭವಾನಿಪುರ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಇಡೀ ದೇಶದ ಗಮನಸೆಳೆದಿತ್ತು.
"
ಇನ್ನು ಗೆಲುವು ಖಚಿತಗೊಮಡ ಬೆನ್ನಲ್ಲೇ ತಮ್ಮ ನಿವಾಸದ ಬಳಿ ನೆರೆದಿದ್ದ ಕಾರ್ಯಕರ್ತರು ಹಾಗೂ ತನಗೆ ಮತ ನೀಡಿ ಗೆಲುವು ತಂದುಕೊಟ್ಟ ಮತದಾರರಿಗೆ ಸಿಎಂ ಮಮತಾ ಬ್ಯಾನರ್ಜಿ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
ಗೆಲುವಿನ ಸಂಭ್ರಮ ಬೇಡ: ದೀದಿಗೆ ಚು. ಆಯೋಗದ ಪತ್ರ
ಉಪಚುನಾವಣೆಯ ಎಣಿಕೆಯ ಸಮಯದಲ್ಲಿ ಅಥವಾ ಫಲಿತಾಂಶ ಬಂದ ಬಳಿಕ ಯಾವುದೇ ವಿಜಯೋತ್ಸವ/ಮೆರವಣಿಗೆಗಳು ನಡೆಯದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ(Election Commission) ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದಿದೆ. ಅಲ್ಲದೇ ಆಯೋಗವು ಚುನಾವಣೆಯ ನಂತರ ಯಾವುದೇ ಹಿಂಸಾಚಾರ ನಡೆಯದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಭವಾನಿಪುರದಲ್ಲಿ 21 ಸುತ್ತುಗಳಲ್ಲಿ ಎಣಿಕೆ
ದೀದಿ ಹಣೆಬರಹ ನಿರ್ಧರಿಸಲಿದೆ ಎಂದೇ ಹೇಳಲಾಗುತ್ತಿದ್ದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ 21 ಸುತ್ತಿನ ಮತ ಎಣಿಕೆಯ ನಂತರ ಹೊರಬಿದ್ದಿದೆ. ಇನ್ನು ಅತ್ತ ಸಂಸರ್‌ಗಂಜ್ ಮತ ಎಣಿಕೆ 26 ಸುತ್ತುಗಳಲ್ಲಿ ಹೊರಬಿದ್ದರೆ, ಇತ್ತ ಜಂಗೀಪುರದಲ್ಲಿ 24 ಸುತ್ತಿನ ಮತ ಎಣಿಕೆ ಬಳಿಕ ಫಲಿತಾಂಶ ಹೊರಬಿದ್ದಿದೆ. ಭವಾನಿಪುರದಲ್ಲಿ ಶೇ .57.09, ಸಂಸರ್‌ಗಂಜ್‌ನಲ್ಲಿ ಶೇ. 79.92 ಮತ್ತು ಜಂಗೀಪುರದಲ್ಲಿ ಶೇ .77.63 ಮತದಾನವಾಗಿತ್ತು ಎಂಬುವುದು ಉಲ್ಲೇಖನೀಯ.
ಸುವೇಂದು ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ
ಈ ಮೊದಲು ನಡೆದಿದ್ದ ಚುನಾವಣೆಯಲ್ಲಿ ಮಮತಾ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ಈ ಹಿನ್ನೆಲೆಯಲ್ಲಿ ಅವರು ಭವಾನಿಪುರ ಕ್ಷೇತ್ರದಲ್ಲಿ ಗೆದ್ದಿದ್ದ ತಮ್ಮ ಆಪ್ತನ ರಾಜೀನಾಮೆ ಪಡೆದು ಅಲ್ಲಿ ಉಪಚುನಾವಣೆ ಮೂಲಕ ಕಣಕ್ಕೆ ಇಳಿದಿದ್ದರು.
2011ರಲ್ಲಿ ಈ ಕ್ಷೇತ್ರ ರಚನೆಯಾದಾಗಿನಿಂದಲೂ ಭವಾನಿಪುರದಲ್ಲಿ ಟಿಎಂಸಿ ಬಲವಾದ ಹಿಡಿತ ಹೊಂದಿದೆ. ಈ ಹಿಂದೆ ಇಲ್ಲಿ ಮಮತಾ ಒಮ್ಮೆ ಗೆದ್ದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ