ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!

By Suvarna News  |  First Published Mar 15, 2020, 4:56 PM IST

ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!| ಕೊರೋನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಮುಖಗಳ ವಸ್ತುಗಳು ಹಾಗೂ ಔಷಧಿ


ಜೆರುಸಲೆಂ[ಮಾ.15]: ಕೊರೋನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಮುಖ ವಸ್ತುಗಳು ಹಾಗೂ ಔಷಧಿ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ರಫ್ತು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಮನವಿ ಮಾಡಿದ್ದಾರೆ. ‘

ಕೊರೋನಾ ಸವಾಲು ಎದುರಿಸಲು ನಾವು ಸಿದ್ಧರಾಗಿದ್ದೇವೆ. ಔಷಧ ಕಚ್ಚಾವಸ್ತುಗಳ ಪೂರೈಕೆ ಸಂಬಂಧ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಮಾತನಾಡಿದ್ದೇನೆ. ಈ ಕೋರಿಕೆಗೆ ಮೋದಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನೆತನ್ಯಾಹು ತಿಳಿಸಿದ್ದಾರೆ.

Tap to resize

Latest Videos

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇಶದಲ್ಲಿ ಕೊರೋನಾ ಹರಡದಂತೆ ತಡೆಯಲು ಮುಖಗಳ ವಸ್ತುಗಳು ಹಾಗೂ ಔಷಧಿಗಳ ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾವಸ್ತುಗಳ ಕೊರತೆಯಾಗದಂತೆ ತಡೆಯಲು ಈ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡದೇ ಇರಲು ಭಾರತ ಸರ್ಕಾರ ನಿರ್ಧರಿಸಿತ್ತು.

click me!