
ಭಾರತದ ವಿವಿಧ ಪ್ರಮುಖ ನಗರಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಬೆಂಗಳೂರನ್ನು ಮಹಿಳೆಯರಿಗೆ ಕೆಲಸಮಾಡಲು ಹಾಗೂ ಜೀವನ ಮಾಡುವುದಕ್ಕೆ ಅತ್ಯುತ್ತಮ ನಗರವೆಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ ಒದಗಿಸಲಾಗುವ ಸೇವೆಗಳು, ಸುರಕ್ಷತೆ, ಉದ್ಯೋಗ ಅವಕಾಶಗಳು ಹಾಗೂ ಜೀವನಶೈಲಿಯ ಗುಣಮಟ್ಟವನ್ನು ಮತ್ತೊಮ್ಮೆ ತೋರಿಸಿದೆ.
ಬೆಂಗಳೂರು ತನ್ನ ಬಹುಭಾಷಾ, ಬಹುಸಾಂಸ್ಕೃತಿಕ ಪರಿಸರದಿಂದ ಎಲ್ಲ ರಾಜ್ಯದ ಜನರನ್ನು ಸ್ವಾಗತಿಸುತ್ತಾ ಬಂದಿದೆ. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡವಾಗಿದ್ದರೂ, ಇತರೆ ಭಾಷೆಗಳಿಗೂ ಗೌರವ ನೀಡುವ ಸಂಸ್ಕೃತಿ ಇಲ್ಲಿ ತುಂಬಿರುವುದು ಗಮನಾರ್ಹ. ಮಹಿಳೆಯರಿಗೆ ಇಲ್ಲಿನ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ, ನೈಟ್ಲೈಫ್‌ನಲ್ಲಿ ಹೆಚ್ಚಿನ ಸುರಕ್ಷತೆ, ತಂತ್ರಜ್ಞಾನ ಕಂಪನಿಗಳಲ್ಲಿ ಅವಕಾಶಗಳ ಲಭ್ಯತೆ ಮತ್ತು ಸಮಾನತೆ ನೀಡುವ ಕೆಲಸದ ಪರಿಸರ ಈ ಶ್ರೇಣಿಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಬೇರೆ ರಾಜ್ಯಗಳಿಂದ ಬಂದ ಮಹಿಳೆಯರು ಸಹ ಬೆಂಗಳೂರಿನಲ್ಲಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಭಾಷಾ ವೈವಿಧ್ಯವನ್ನು ಇಲ್ಲಿ ಎಲ್ಲರೂ ಮನ್ನಣೆ ನೀಡುತ್ತಿದ್ದಾರೆ. ತಮ್ಮ ಭಾಷೆಯ ಜೊತೆಗೆ ಇಲ್ಲಿನ ಸ್ಥಳೀಯ ಪ್ರಾದೇಶಿಕ ಕನ್ನಡ ಭಾಷೆಗೆ ಗೌರವ ತೋರುತ್ತಿದ್ದರೆ, ಬೆಂಗಳೂರಿನಲ್ಲಿ ಎಲ್ಲರಿಗೂ ಸ್ಥಳವಿದೆ. ಇನ್ನು ಭದ್ರತೆಯು ಎಲ್ಲಾ ನಾಗರಿಕರ ಹಕ್ಕು ಮತ್ತು ಕರ್ತವ್ಯವಾಗಿದೆ. ನಾವು ಸಮಾಜದ ಒಂದು ಭಾಗವೆಂಬಂತೆ ಇಲ್ಲಿ ಜೀವನ ಮಾಡಿದರೆ ಯಾವುದೇ ನಗರವು ಮಹಿಳೆಯರಿಗೂ ಮುಕ್ತ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.
ಬೆಂಗಳೂರು ತಂತ್ರಜ್ಞಾನ ಕೇಂದ್ರವಲ್ಲದೇ ಸಮಾನತೆಯ ನೆಲೆಯೂ ಆಗಿದೆ. ಇಲ್ಲಿನ ಉದ್ಯೋಗದ ಅವಕಾಶಗಳು, ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು, ಪೋಷಕ ವಾತಾವರಣ ಮತ್ತು ಮಹಿಳೆಯರಿಗೆ ಭದ್ರತೆಯ ದೃಷ್ಟಿಯಿಂದ ಏರ್ಪಡಿಸಿರುವ ವ್ಯವಸ್ಥೆಗಳು ಈ ಸ್ಥಾನ ಪಡೆಯಲು ಕಾರಣವಾಗಿವೆ. ಬಹುಸಂಸ್ಕೃತ ಸಮಾಜ, ಪ್ರಾದೇಶಿಕ ಭಾಷೆಯ ಗೌರವ ಹಾಗೂ ಸಹಿಷ್ಣುತೆ ಇಲ್ಲಿನ ಇನ್ನೊಂದು ವಿಶೇಷತೆ ಆಗಿದೆ.
ಮಹಿಳೆಯರು ಇಲ್ಲಿ IT, ಶಿಕ್ಷಣ, ಆರೋಗ್ಯ, ವಾಣಿಜ್ಯ, ಸ್ಟಾರ್ಟಪ್‌ಗಳು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ನಗರದಲ್ಲಿ ಮಹಿಳೆಯರಿಗೆ ಬದಲಾವಣೆಗೆ ಅವಕಾಶ, ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಸ್ವಾತಂತ್ರ್ಯ ಹಾಗೂ ಸಹಕಾರ ದೊರೆಯುತ್ತದೆ. ಇದು ಉದ್ಯೋಗದ ಜೊತೆಗೆ ಸಮತೋಲನಯುತ ವೈಯಕ್ತಿಕ ಬದುಕನ್ನು ಕೂಡ ರೂಪಿಸುವಲ್ಲಿ ಸಹಾಯ ಮಾಡುತ್ತದೆ. ಈ ಪಟ್ಟಿಯು ಭಾರತದ ಇತರೆ ನಗರಗಳು ಮಹಿಳಾ ಸ್ನೇಹಿಯಾಗುವ ದಿಸೆಯಲ್ಲಿ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಸಂದೇಶವನ್ನೂ ನೀಡುತ್ತದೆ.
ಮಹಿಳೆಯರು ಕೆಲಸ ಮಾಡಲು ಮತ್ತು ವಾಸಿಸಲು ಟಾಪ್ 10 ಯೋಗ್ಯ ನಗರಗಳು:
1. ಬೆಂಗಳೂರು
2. ಚೆನ್ನೈ
3. ಮುಂಬೈ
4. ಹೈದರಾಬಾದ್
5. ಪುಣೆ
6. ಕೋಲ್ಕತ್ತಾ
7. ಅಹಮದಾಬಾದ್
8. ದೆಹಲಿ
9. ಗುರುಗ್ರಾಮ್
10. ಕೊಯಮತ್ತೂರು
ಇದನ್ನೂ ಓದಿ: ಸಿ ಸೆಕ್ಷನ್ ನಂತರ ಬೆನ್ನು ಸೊಂಟ ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ