ಕುಂಭಮೇಳ ಎಫೆಕ್ಟ್: ಬೆಂಗ್ಳೂರು-ಪ್ರಯಾಗ್‌ರಾಜ್‌ ವಿಮಾನ ದರ ಶೇ.89 ಏರಿಕೆ!

By Kannadaprabha News  |  First Published Jan 16, 2025, 7:59 AM IST

ರೈಲುಗಳ ಬುಕ್ಕಿಂಗ್‌ನಲ್ಲಿಯೂ ಹೆಚ್ಚಳವಾಗಿದೆ. ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ಬುಕ್ಕಿಂಗ್‌ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂಕಿ ಅಂಶದ ಪ್ರಕಾರ, ಬೆಂಗಳೂರು ಮತ್ತು ಪ್ರಯಾಗ್‌ರಾಜ್ ನಡುವಿನ ದರದಲ್ಲಿ ಶೇ.89ರಷ್ಟು ಹೆಚ್ಚಳವಾಗಿದ್ದು, 11,158 ರು. ಆಗಿದೆ. ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನದ ದರದಲ್ಲಿ ಶೇ.21ರಷ್ಟು ಏರಿಕೆಯಾಗಿ 5,748ರು.ಕ್ಕೆ ತಲುಪಿದೆ. 

ನವದೆಹಲಿ(ಡಿ.16):  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿ ಗೊಮ್ಮೆ ನಡೆಯುವ ಮಹಾ ಕುಂಭ ಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾಕುಂಭನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಪ್ರಮುಖ ನಗರಗಳಿಂದ ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ದರದಲ್ಲಿ ಹಲವು ಪಟ್ಟು ಏರಿಕೆಯಾಗಿದೆ. 

ರೈಲುಗಳ ಬುಕ್ಕಿಂಗ್‌ನಲ್ಲಿಯೂ ಹೆಚ್ಚಳವಾಗಿದೆ. ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ಬುಕ್ಕಿಂಗ್‌ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂಕಿ ಅಂಶದ ಪ್ರಕಾರ, ಬೆಂಗಳೂರು ಮತ್ತು ಪ್ರಯಾಗ್‌ರಾಜ್ ನಡುವಿನ ದರದಲ್ಲಿ ಶೇ.89ರಷ್ಟು ಹೆಚ್ಚಳವಾಗಿದ್ದು, 11,158 ರು. ಆಗಿದೆ. ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನದ ದರದಲ್ಲಿ ಶೇ.21ರಷ್ಟು ಏರಿಕೆಯಾಗಿ 5,748ರು.ಕ್ಕೆ ತಲುಪಿದೆ. 

Tap to resize

Latest Videos

ಸಾವಿಗೂ ಮುನ್ನ ಸ್ಟೀವ್ ಜಾಬ್ಸ್ ಕುಂಭಮೇಳಾಗೆ ಹೋಗುವ ಆಸೆ ವ್ಯಕ್ತಪಡಿಸಿದ್ದ ಪತ್ರ ₹4.32 ಕೋಟಿಗೆ ಮಾರಾಟ!

ಮುಂಬೈ ಪ್ರಯಾಗ್‌ರಾಜ್ ನಡುವಿನ ವಿಮಾನ ದರ ಶೇ.13ರಷ್ಟು ಏರಿಕೆಯಾಗಿದ್ದು, 6,381ರು.ಗೆ ತಲುಪಿದೆ. ಈ ಹಿಂದೆ ಭೋಪಾಲ್ ಮತ್ತು ಪ್ರಯಾಗ್‌ರಾಜ್ 2,977 ರು. ಇತ್ತು. ಸದ್ಯದ ದರ 17,796 ರು. ಇದೆ. 

ಇನ್ನು ಅಹಮದಾಬಾದ್- ಪ್ರಯಾಗ್‌ರಾಜ್ ನಡುವಿನ ದರ ಶೇ.41ರಷ್ಟು ಏರಿಕೆಯೊಂದಿಗೆ 10,364 ರು.ಗೆ ತಲುಪಿದೆ. ಮಾತ್ರವಲ್ಲದೇ ಮಹಾಕುಂಭ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ಸಮೀಪದಲ್ಲಿರುವ ಲಖನೌ, ವಾರಾಣಾಸಿಗೆ ವಿಮಾನ ಪ್ರಯಾಣ ಶೇ.3ರಿಂದ 21ರಷ್ಟು ಏರಿಕೆಯಾಗಿದೆ. ಈ ನಡುವೆ ಫೆ.26ರವರೆಗೆ ಪ್ರಯಾಗ್‌ರಾಜ್ ರೈಲುಗಳ ಬುಕ್ಕಿಂಗ್‌ನಲ್ಲಿ ಜಿಗಿತ ಕಂಡಿದೆ.

click me!