
ಬೆಂಗಳೂರು (ಆ.19): ದುಬೈನಿಂದ ಹೇಗಾದರೂ ಮಾಡಿ ತೆರಿಗೆರಹಿತವಾಗಿ ಹಾಗೂ ಅಕ್ರಮವಾಗಿ ಬೆಂಗಳೂರಿಗೆ ಚಿನ್ನವನ್ನು ತೆಗೆದುಕೊಂಡು ಬರಬೇಕು ಎಂದು ಖತರ್ನಾಕ್ ಕಳ್ಳ ಮಾಡಿದ ಐಡಿಯಾ ನೋಡಿ ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿದ್ದಾರೆ.
ದೇಶ, ವಿದೇಶಗಳಿಂದ ಬರುವಾಗ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆಂದು ವಿವಿಧ ಮಾರ್ಗದಲ್ಲಿ ಚಿನ್ನವನ್ನು ತಂದವರು ಇದ್ದಾರೆ. ಆದರ, ಇಲ್ಲೊಬ್ಬ ವ್ಯಕ್ತಿ ದುಬೈನಿಂದ ತಂದ ಟ್ರಾಲಿ ಬ್ಯಾಗ್‌ಗೆ ಚಿನ್ನದ ನಟ್ಟು, ಬೋಲ್ಟ್ ಹಾಗೂ ಸ್ಕ್ರೂಗಳನ್ನು ಅಳವಡಿಕೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಬೆಂಗಳೂರಿಗೆ ಬರುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳನ್ನು ನೋಡಿ ಶೇಕ್ ಆಗಿದ್ದು, ಆತನ ಬ್ಯಾಗ್ ಪರಿಶೀಲನೆ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ.
ಭಾರತಕ್ಕಿಂತ ಕಡಿಮೆ ಬೆಲೆಗೆ ಸಿಗುವ ಚಿನ್ನ: ಜಾಗತಿಕವಾಗಿ ಚಿನ್ನಕ್ಕೆ ಭಾರಿ ಬೆಲೆಯಿದೆ. ದುಬೈ, ಸೌತ್ ಆಫ್ರಿಕಾ ಸೇರಿ ಕೆಲವು ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಇನ್ನು ದುಬೈನಿಂದ ಬರುತ್ತಿದ್ದ ವ್ಯಕ್ತಿಯೊಬ್ಬ ಚಿನ್ನವನ್ನು ತರಲು ಭಾರಿ ಖತರ್ನಾಕ್ ಐಡಿಯಾ ಉಪಯೋಗಿಸಿದ್ದಾನೆ. ತಾನು ಖರೀದಿ ಮಾಡಿದ ಚಿನ್ನವನ್ನು ತೆರಿಗೆರಹಿತವಾಗಿ ದೇಶಕ್ಕೆ ತರುವ ಉದ್ದೇಶದಿಂದ ತನ್ನ ಎಲ್ಲ ಚಿನ್ನವನ್ನು ಕರಗಿಸಿ ತನ್ನ ಟ್ರಾಲಿ ಬ್ಯಾಗ್‌ನ ಸ್ಕ್ರೂಗಳ ರೀತಿಯಲ್ಲಿಯೇ ಡಿಸೈನ್ ಮಾಡಿಸಿದ್ದಾನೆ. ನಂತರ, ಆ ಟ್ರಾಲಿ ಬ್ಯಾಗ್‌ಗೆ ಹಾಕಿದ್ದ ಎಲ್ಲ ಸ್ಕ್ರೂಗಳನ್ನು ಬಿಚ್ಚಿ ಬಂಗಾರದ ಟ್ರಾಲಿ ಬ್ಯಾಗ್‌ಗೆ ಅಳವಡಿಕೆ ಮಾಡಿದ್ದಾನೆ.
ರಾಜಕೀಯ ನನಗೆ ಅನಿವಾರ್ಯವಲ್ಲ, ಆಕಸ್ಮಿಕ: ಲೋಕಸಭೆಗೂ ಮುನ್ನ ಟ್ವಿಸ್ಟ್ ಕೊಟ್ಟ ಸುಮಲತಾ ಅಂಬರೀಶ್
ಕಸ್ಟಮ್ಸ್ ಅಧಿಕಾರಿಗಳನ್ನು ನೋಡಿ ಆತಂಕ: ಇನ್ನು ದುಬೈನಿಂದ ಬರುವಾಗ ಅಧಿಕಾರಿಗಳ ಕಣ್ಣು ತಪ್ಪಿಸಿ ಟ್ರಾಲಿ ಬ್ಯಾಗ್ ತಂದಿದ್ದಾನೆ. ಇನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವಾಗ ಕಸ್ಟಮ್ಸ್ ಅಧಿಕಾರಿಗಳನ್ನು ನೋಡಿ ಆತಂಕಗೊಂಡಿದ್ದಾನೆ. ನಂತರ, ಆತನ ಬ್ಯಾಗ್ ಪರಿಶೀಲನೆ ಮಾಡಿದಾದ ಚಿನ್ನ ಹಾಗೂ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿಲ್ಲ. ಇನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದಾಗ ಟ್ರಾಲಿ ಬ್ಯಾಗ್‌ನಲ್ಲಿನ ಎಲ್ಲ ಸ್ಕ್ರೂಗಳು ಕೂಡ ಚಿನ್ನದಿಂದ ಮಾಡಿದ್ದಯ ಎಂಬುದು ತಿಳಿದಿಬಂದಿದೆ. ಎಲ್ಲ ಸ್ಕ್ರೂಗಳನ್ನು ಬಿಚ್ಚಿಕೊಂಡು ತೂಕ ಮಾಡಲಾಗಿದ್ದು, 267 ಗ್ರಾಂ ತೂಕವಾಗಿದೆ.
ಮಹಿಳೆಯರಿಗೆ ಮತ್ತೆ ನಿರಾಸೆ: 2000 ರೂ. ಕೊಡುವ ಗೃಹಲಕ್ಷ್ಮಿ ಯೋಜನೆ ಮುಂದೂಡಿಕೆ
267 ಗ್ರಾಂ ಚಿನ್ನವನ್ನು ಸ್ಕ್ರೂ ಮಾಡಿದ್ದ: ಖತರ್ನಾಕ್ ಐಡಿಯಾ ಉಪಯೋಗಿಸಿ ಚಿನ್ನ ಸಾಗಾಣೆ ಮಾಡುತ್ತಿದ್ದವನನ್ನು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಂದಾಗಿ ಪೊಲೀಸರು ಬಂಧಿಸಿದ್ದಾರೆ. ದುಬೈ ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನಿಂದ ಅಕ್ರಮ ಚಿನ್ನ ಸಾಗಣೆ ಮಾಡಿದ್ದಾನೆ. ಬ್ಯಾಗನಲ್ಲಿ ನೆಟ್ಟು ಬೋಲ್ಟ್ ಗಳ ರೂಪದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದಾನೆ ಎಂಬ ಆರೋಪದಡಿ ಬಂಧಿಸಲಾಗಿದೆ. 267 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ