ಹದಿಹರೆಯದವರ ನಡುವಿನ ಒಮ್ಮತದ ಲೈಂಗಿಕತೆಯನ್ನು ಅಪರಾಧ ಪಟ್ಟಿಯಿಂದ ತೆಗೆದುಹಾಕುವುದನ್ನು ರೋಮಿಯೋ-ಜೂಲಿಯೆಟ್ ಕಾನೂನು ಎಂದು ವ್ಯಾಖ್ಯಾನಿಸಲಾಗುತ್ತದೆ. ಈ ಕಾನೂನನ್ನು ಹಲವು ದೇಶಗಳು ಅಳವಡಿಸಿಕೊಡಿದೆ.
ನವದೆಹಲಿ (ಆಗಸ್ಟ್ 19, 2023): 18 ವರ್ಷದೊಳಗಿನ ಹುಡುಗಿಯರು ಮತ್ತು 18 ಕ್ಕೂ ಹೆಚ್ಚು ವಯಸ್ಸಿನ ಲಕ್ಷಾಂತರ ಹುಡುಗರು ಸಮ್ಮತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಹಾಗೂ, ಹೆಣ್ಣು ಗರ್ಭಿಣಿಯಾದರೆ ಮತ್ತು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರೆ ಅತ್ಯಾಚಾರ ಅಂತ ಹುಡುಗನನ್ನು ಬಂಧಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರೋ ಪಿಐಎಲ್ ಹೇಳುತ್ತದೆ. ಈ ಹಿನ್ನೆಲೆ, ಒಮ್ಮತದ ಹದಿಹರೆಯದ ಲೈಂಗಿಕತೆಯನ್ನು ಅಪರಾಧ ಪಟ್ಟಿಯಿಂದ ತೆಗೆದುಹಾಕಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿದೆ,
ಒಮ್ಮತದ ಲೈಂಗಿಕತೆಯನ್ನು ಅಪರಾಧ ಪಟ್ಟಿಯಿಂದ ತೆಗೆದುಹಾಕುವುದನ್ನು ರೋಮಿಯೋ-ಜೂಲಿಯೆಟ್ ಕಾನೂನು ಎಂದು ವ್ಯಾಖ್ಯಾನಿಸಲಾಗುತ್ತದೆ. ಈ ಕಾನೂನನ್ನು ಹಲವು ದೇಶಗಳು ಅಳವಡಿಸಿಕೊಡಿದೆ. ಈ ಹಿನ್ನೆಲೆ ಭಾರತಕ್ಕೆ ರೋಮಿಯೋ-ಜೂಲಿಯೆಟ್ ಕಾನೂನಿನ ಅನ್ವಯದ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಕೇಳಿದೆ.
ಇದನ್ನು ಓದಿ: ಲೈಂಗಿಕ ಸಂಬಂಧ ಹೊಂದಿ ಮಾತು ತಪ್ಪಿದರೆ ರೇಪ್ ಎನ್ನಲಾಗದು: ಹೈಕೋರ್ಟ್ ತೀರ್ಪು
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 ರ ಅಡಿಯಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಒಪ್ಪಿಗೆಯು ಅಪ್ರಸ್ತುತವಾಗಿದೆ ಮತ್ತು ಅಂತಹ ಅಪ್ರಾಪ್ತ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆಯನ್ನು ಪ್ರಯತ್ನಿಸುವ ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿತಸ್ಥನಾಗುತ್ತಾನೆ. ಹಾಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗಿನ ಲೈಂಗಿಕತೆ ಅವಳು ಒಪ್ಪಿಗೆ ನೀಡಿದರೂ ಸಹ ಅದು ಅತ್ಯಾಚಾರ ಎನಿಸಿಕೊಳ್ಳುತ್ತದೆ.
ಹದಿಹರೆಯದ ಲೈಂಗಿಕತೆಯ ಪ್ರಕರಣಗಳಲ್ಲಿ ಶಾಸನಬದ್ಧ ಅತ್ಯಾಚಾರ ಆರೋಪಗಳು ಹುಡುಗ ವಯಸ್ಕನಾಗಿದ್ದರೆ ಮಾತ್ರ ಅನ್ವಯಿಸುತ್ತವೆ. 2007 ರಿಂದ, ಅನೇಕ ದೇಶಗಳು ರೋಮಿಯೋ-ಜೂಲಿಯೆಟ್ ಕಾನೂನನ್ನು ಅಳವಡಿಸಿಕೊಂಡಿದ್ದು, ಇದರ ಪ್ರಕಾರ ವಯಸ್ಕರಲ್ಲದ ಹುಡುಗಿಯ ವಯಸ್ಸಿಗಿಂತ ನಾಲ್ಕು ವರ್ಷಕ್ಕಿಂತ ಹೆಚ್ಚಿಲ್ಲದಿದ್ದರೆ ಹುಡುಗನನ್ನು ಬಂಧಿಸುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್
ಆದರೆ, ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಹುಡುಗರನ್ನು 16-18 ವಯೋಮಾನದ ಹುಡುಗಿಯರೊಂದಿಗೆ ಸಮ್ಮತಿಯ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ಕಳಂಕಕ್ಕೆ ಗುರಿಯಾಗಿದ್ದಾರೆ ಎಂದು ಸಿಜೆಐ ಡಿ ವೈ. ಚಂದ್ರಚೂಡ್ ನೇತೃತ್ವದ ಪೀಠದ ಎದುರು ಅರ್ಜಿದಾರ-ವಕೀಲ ಹರ್ಷ ವಿಭೋರ್ ಸಿಂಘಾಲ್ ಹೇಳಿದರು. ಈ ಹಿನ್ನೆಲೆ, 16 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 16-20 ವರ್ಷ ವಯಸ್ಸಿನ ಹುಡುಗರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ಪರಿಗಣಿಸುವಂತೆ ಅವರು ಮನವಿ ಮಾಡಿದರು.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್