ದಕ್ಷಿಣ ಭಾರತ ಪ್ರತ್ಯೇಕ ದೇಶ ಬೇಡಿಕೆಯನ್ನು ಪ್ರಸ್ತಾಪಿಸಿದ ಸಂಸದ ಡಿ.ಕೆ. ಸುರೇಶ್

By Sathish Kumar KHFirst Published Feb 1, 2024, 3:51 PM IST
Highlights

ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಬೆಂಗಳೂರು (ಫೆ.01): ದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಹೇಳುವ ಮೂಲಕ ಸಂಸದ ಡಿ.ಕೆ. ಸುರೇಶ್ ಅವರು ಪ್ರತ್ಯೇಕ ದೇಶದ ಕೂಗನ್ನು ಮುಂದಿಟ್ಟಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು, ಈ ಬಜೆಟ್ ನಲ್ಲಿ ನಾಮಫಲಕ ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನ ಇಡಲಾಗಿದೆ. ಎಕನಾಮಿಕ್ ಸರ್ವೆ ಅವರು ಇಟ್ಟಿದ್ದಿದ್ರೆ ಇವರ ಪರಿಸ್ಥಿತಿ ಏನಿದೆ. ಯಾವ್ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಅನ್ನೊ ಅನುಮಾನಗಳು ಪ್ರಾರಂಭವಾಗಿದೆ. ಈ ಬಜೆಟ್‌ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳು, ಒಂದಷ್ಟು ಹೇಳಿಕೆಗಳಿಂದ ಕೂಡಿದೆ. ಇವರು ಮೂಗಿಗೆ ತುಪ್ಪ ವರೆಸುವ  ಕೆಲಸ ಮಾಡಿದ್ದಾರೆ ಎಂದರು.

Latest Videos

ಶಾಸಕ ಬಾಲಕೃಷ್ಣ ಅವರ ಕಾಂಗ್ರೆಸ್ ಗ್ಯಾರಂಟಿ ರದ್ದತಿ ಬೆದರಿಕೆಗೆ ಸಿಎಂ, ಡಿಸಿಎಂ ಬೆಂಬಲವಿದೆ: ನಿಖಿಲ್ ಕುಮಾರಸ್ವಾಮಿ

ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಇವತ್ತು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಹೇಳಿದ್ದಾರೆ.

ಸಂಸದ ಡಿ.ಕೆ. ಸುರೇಶ್ ಅವರ ಪ್ರತ್ಯೇಕ ದೇಶದ ಕೂಗಿನ ಹೇಳಿಕೆಯನ್ನು ಸಚಿವ ಹೆಚ್.ಕೆ. ಪಾಟೀಲ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸದಾ ಅನ್ಯಾಯ ಆಗ್ತಿದೆ. ಬರಗಾಲ ಇದ್ದರೂ ನಮಗೆ ಬಿಡಿಗಾಸು ನೆರವು ಕೊಟ್ಟಿಲ್ಲ. ಎಲ್ಲ ದಕ್ಷಿಣ ರಾಜ್ಯಗಳು ಇದನ್ನು ಖಂಡಿಸುತ್ತವೆ. ಹೆಚ್ಚು ಆದಾಯ ಬರುವ ರಾಜ್ಯಗಳಿಗೆ ಕೇಂದ್ರದಿಂದ ನ್ಯಾಯಯುತ ಪಾಲು ಸಿಗಬೇಕು. ಇದರಲ್ಲಿ ರಾಜಕೀಯ ಆಗಬಾರದು. ನೆರವು ಕೊಡದಿದ್ದಾಗ ಹೀಗೆ ಕೇಳಬೇಕಾಗುತ್ತದೆ ಎಂದು ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಒಬ್ಬ ಮಂತ್ರಿಯಾಗಿ ಇಷ್ಟು ವರ್ಷ ರಾಜಕಾರಣದಲ್ಲಿ ಇರುವವನಾಗಿ ಯಾವುದೇ ರಾಜ್ಯಕ್ಕೆ ಗದಾ ಪ್ರಹಾರ ಮಾಡುವ ನೀತಿ ಖಂಡನೀಯ. ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಪ್ರಮಾಣದ ಕಡಿಮೆ ಹಣ ಕೊಡ್ತೀರಿ? ಬಿಡುಗಡೆ ಯಾವಾಗ ಮಾಡ್ತೀರಿ? ಇಷ್ಟು ದೊಡ್ಡ ಪ್ರಮಾಣದ ಬರ ಇದ್ದಾಗಲೂ ನಯಾ ಪೈಸೆ ಪರಿಹಾರ ಕೊಡಲಿಲ್ಲ. ಇದು ಯಾವ ಧೋರಣೆ? ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಕುದುರಬೇಕೇ ಹೊರತು ವಿಶ್ವಾಸ ಕುಂದಬಾರದು. ಎಲ್ಲಿ ಹೆಚ್ಚು ಶ್ರಮ ಇದೆಯೋ, ಆ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಬೇಕು. ಆರ್ಥಿಕತೆಯ ವಿಚಾರದಲ್ಲೂ ರಾಜಕೀಯವೇ ಮಾಡುವುದಾದರೆ ಯಾವ ರೀತಿಯಿಂದ ರಾಜ್ಯಗಳ ವಿಶ್ವಾಸಾರ್ಹತೆ ಕುದುರಿಸಿಕೊಳ್ಳುತ್ತೀರಿ? ಎಂದು ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳುವ ಮೂಲಕ ಸಂಸದ ಡಿ.ಕೆ. ಸುರೇಶ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಬಿಬಿಎಂಪಿ ಮೆಡಿಕಲ್ ಕಾಲೇಜು: ಬಜೆಟ್‌ನಲ್ಲಿ 500 ಕೋಟಿ ಮೀಸಲು

ಬೆಂಗಳೂರಿನ ಅಭಿವೃದ್ಧಿಗೆ ಪೂರಕ ಬಜೆಟ್: ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಎರಡನೇ ಅವಧಿಯ 10ನೇ ಬಜೆಟ್ ಅನ್ನು ವಿತ್ತ ಸಚಿವರು ಮಂಡನೆ ಮಾಡಿದ್ದಾರೆ. ಮಧ್ಯಂತರ ಬಜೆಟ್ ಆಗಿರೋದ್ರಿಂದ ವಿಸ್ತಾರವಾದ ಯೋಜನೆಗಳಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅನ್ನೋದು ಗೊತ್ತಾಗಿದೆ. ದೇಶದ ಎಲ್ಲಾ ಕಡೆ ಹೊಸ ರಸ್ತೆ, ಏರ್ಪೋರ್ಟ್, ಪೋರ್ಟ್, ಡಬ್ಲಿಂಗ್ ಕೆಲಸ ಆಗ್ತಿದೆ. ಬಡತನ ನಿರ್ಮೂಲನೆಗೆ ಈ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. 11 ಲಕ್ಷ ಕೋಟಿ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗಿದೆ. ಸಂಶೊಧನೆಗಾಗಿ 1 ಲಕ್ಷ ಕೋಟಿ ರೂ. ಬಡ್ಡಿ ರಹಿತ ಅನುದಾನವನ್ನು ಮೀಸಲು ಇಡಲಾಗಿದೆ. ವಿಜ್ಞಾನ ತಂತ್ರಜ್ಞಾನಕ್ಕೆ ಇದು ಬಳಕೆಯಾಗಲಿದೆ. ಯಾವ ಸರ್ಕಾರವೂ ಕೂಡ ಇದುವರೆಗೆ ಮೀಸಲು ಇಟ್ಟಿಲ್ಲ. ಇದರಿಂದ ಬೆಂಗಳೂರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಹೇಳಿದರು.

ಸಂಸದ ಸುರೇಶ್ ಜನರ ಭಾವನೆ ಹೇಳಿದ್ದಾರೆ:
ನಾನು ಅಖಂಡ ಭಾರತದವನು. ಸಂಸದ ಸುರೇಶ್ ಜನರ ಅಭಿಪ್ರಾಯ ಹೇಳಿದ್ದಾರೆ. ಜನರ ಭಾವನೆಗೆ ಅನ್ಯಾಯ ಆಗಿದೆ. ನಾವೆಲ್ಲ ಅಖಂಡ ಭಾರತದವರು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲವೂ ಒಂದೇ. ಉತ್ತರ ಭಾರತಕ್ಕೆ ಸಿಕ್ಕಿರುವುದು ನಮಗೂ ಸಿಗಬೇಕು ಎಂಬುದು ಜನರ ಭಾವನೆಯಾಗಿದೆ. 27 ಜನ ಸಂಸದರು ರಾಜ್ಯಕ್ಕೆ ಏನು ತಂದಿದ್ದಾರೆ. ಎಲ್ಲ ಸಂಸದರು ಧರಣಿ ಮಾಡಿ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸಲಿ.
- ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

click me!