ಏಷ್ಯಾ ಖಂಡದಲ್ಲಿ ಬೆಂಗಳೂರೇ ನಂಬರ್ ಒನ್; ಚೀನಾ, ಜಪಾನ್ ಸಿಟಿಗಳನ್ನು ಹಿಂದಿಕ್ಕಿದ ಸಿಲಿಕಾನ್ ಸಿಟಿ

Published : Feb 04, 2024, 12:32 PM ISTUpdated : Feb 04, 2024, 12:33 PM IST
ಏಷ್ಯಾ ಖಂಡದಲ್ಲಿ ಬೆಂಗಳೂರೇ ನಂಬರ್ ಒನ್; ಚೀನಾ, ಜಪಾನ್ ಸಿಟಿಗಳನ್ನು ಹಿಂದಿಕ್ಕಿದ ಸಿಲಿಕಾನ್ ಸಿಟಿ

ಸಾರಾಂಶ

ವಿಶ್ವದ ಮಟ್ಟದಲ್ಲಿ 2ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿರುವ ಬೆಂಗಳೂರು, ಏಷ್ಯಾದಲ್ಲಿನ ಚೀನಾ ಹಾಗೂ ಜಪಾನ್‌ ದೇಶಗಳ ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಗಳಿಸಿದೆ.

ಬೆಂಗಳೂರು (ಫೆ.04): ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ಅತಿಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ನಗರ ಎಂಬ ಕುಖ್ಯಾತಿಯನ್ನು ಗಳಿಸಿದೆ. ಇಲ್ಲಿ ವಾಹನ ಸವಾರರು ಪ್ರತಿ 10 ಕಿ.ಮೀ. ಸಂಚಾರಕ್ಕೆ ಬರೋಬ್ಬರಿ 28 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಟ್ರಾಫಿಕ್‌ ಜಾಮ್ ಸಿಟಿಗಳಲ್ಲಿ ಇಡೀ ಏಷ್ಯಾ ಖಂಡಕ್ಕೆ ಬೆಂಗಳೂರೇ ಮೊದಲ ಸ್ಥಾನದಲ್ಲಿದೆ.

ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಲಂಡನ್‌ ಮೂಲದ 'ಟಾಮ್ ಟಾಮ್' ಸಂಸ್ಥೆಯು 2023ನೇ ಸಾಲಿನ ವರದಿಯನ್ನು ಬಿಡುಗಡೆ ಮಾಡಿದೆ. 2023ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿದ್ದ ಏಷ್ಯಾ ಖಂಡದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವಿಶ್ವದ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಕಳೆದ 2022ಕ್ಕೆ ಹೋಲಿಕೆ ಮಾಡಿದಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಕೇವಲ ಶೇ.1 ಪರ್ಸೆಂಟ್ ಮಾತ್ರ ಟ್ರಾಫಿಕ್ ಜಾಮ್ ಉಂಟಾಗುವ ಪ್ರಮಾಣ ತಗ್ಗಿದೆ. ಆದರೆ, ಈ ಪ್ರಮಾಣದಿಂದ ವಾಹನ ಸವಾರರಿಗೆ ಅಂತಹ ಬದಲಾವಣೆಯೇನೂ ಕಂಡುಬಂದಿಲ್ಲ.

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿ ಸಂತೋಷ್‌ ರಾವ್‌ಗೆ ಹೈಕೋರ್ಟ್ ನೋಟಿಸ್

ಬೆಂಗಳೂರಿನ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಇತರೆ ಪ್ರದೇಶಗಳಲ್ಲೂ ಅತಿ ಹೆಚ್ಚು ದಟ್ಟಣೆ ಉಂಟಾಗಿದ್ದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪುಣೆ, ನವದೆಹಲಿ, ಮುಂಬೈ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ವಿಶ್ವದ ನಗರಗಳ ಪಟ್ಟಿಯ ಸಿಬಿಡಿ ವಿಭಾಗದಲ್ಲಿ ಬೆಂಗಳೂರು 6ನೇ ಸ್ಥಾನವನ್ನು ಪಡೆದುಕೊಂಡಿದೆ. 2023ರ ಸಂಚಾರ ದಟ್ಟಣೆ ಕುರಿತು ಗ್ಲೋಬಲ್ ಇಂಡೆಕ್ಸ್ ವರದಿಯಲ್ಲಿ ಬೆಂಗಳೂರಿನಲ್ಲಿ ಸರಾಸರಿ 10 ಕಿಮೀ ಮಾರ್ಗವನ್ನು ದಾಟುವುದಕ್ಕೆ 28 ನಿಮಿಷ 10 ಸೆಕೆಂಡ್ ಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ 2ರಿಂದ 6ನೇ ಸ್ಥಾನಕ್ಕೆ ಕುಸಿತ: ಟಾಮ್‌ಟಾಮ್ ಸಂಸ್ಥೆಯ  ಪ್ರತಿನಿಧಿಗಳು 55 ದೇಶಗಳ 387 ನಗರಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಈ ಪೈಕಿ ಇಂಗ್ಲೆಂಡಿನ ಲಂಡನ್, ಐರ್ಲೆಂಡಿನ ಡಬ್ಲಿನ್ ಹಾಗೂ ಕೆನಡಾದ ಟೊರ‍ಂಟೊ, ಇಟಲಿಯ ಮಿಲನ್ ಹಾಗೂ ಪೆರು ದೇಶದ ಲಿಮಾ ನಗರಗಲು ಕ್ರಮವಾಗಿ ಪ್ರಥಮ, ದ್ವಿತೀಯ, ಮೂರನೇ, ನಾಲ್ಕನೇ ಹಾಗೂ ಐದನೇ ಸ್ಥಾನಗಳನ್ನು ಗಳಿಸಿವೆ. ಟಾಮ್ ಟಾಮ್ ಸಂಸ್ಥೆಯ ವರದಿಯಲ್ಲಿ 2022ರಲ್ಲಿ ವಿಶ್ವದ ನಗರಗಳ ಸಿಬಿಡಿ ವಿಭಾಗದ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿತ್ತು. ಈ ಬಾರಿ 6ನೇ ಸ್ಥಾನಕ್ಕೆ ಬಂದಿದೆ. ಜೊತೆಗೆ, 2022ಕ್ಕೆ ಹೋಲಿಸಿದರೆ 2023ರಲ್ಲಿ ದಟ್ಟಣೆ ಸಂದರ್ಭದ ಪ್ರಯಾಣದ ಅವಧಿ 1 ನಿಮಿಷ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು: ರೈಲ್ವೆ ನಿಲ್ದಾಣಗಳಲ್ಲಿ ಏರ್‌ಪೋರ್ಟ್‌ಮಾದರಿ ಭದ್ರತೆಗೆ ಪೊಲೀಸ್‌ ಸರ್ವೆ

ಕಳೆದ ವರ್ಷಕ್ಕಿಂತ 1 ಪರ್ಸೆಂಟ್ ತಗ್ಗಿದ ಟ್ರಾಫಿಕ್ ಜಾಮ್:
ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಕೈಗೊಂಡ ಕೆಲವು ಸುಧಾರಣೆಗಳಿಂದಾಗಿ ಕೊಂಚ ಮಟ್ಟಿಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಿದೆ. ಇನ್ನು ಬೆಂಗಳೂರು ನಗರ ಟ್ರಾಫಿಕ್‌ ಪೊಲೀಸರು ಕೂಡ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಲೇ ಬಂದಿದ್ದಾರೆ. ನಗರದಲ್ಲಿ ಸಿಗ್ನಲ್ ಫ್ರೀ, ರಸ್ತೆ ಮಧ್ಯದ ಬಲ ತಿರುವುಗಳ ಬಂದ್, ರಸ್ತೆ ಗುಣಮಟ್ಟ ಸುಧಾರಣೆ, ಸಂಚಾರಿ ಪೊಲೀಸರ ಹೆಚ್ಚುವರಿ ಕರ್ತವ್ಯ, ಬೆಳ್ಳಂಬೆಳಗ್ಗೆ ಪ್ರಮುಖ ಜಂಕ್ಷನ್ ಗಳಲ್ಲಿ ಪೊಲೀಸರ ನಿಯೋಜನೆ, ಹೀಗೆ ಹಲವು ಕ್ರಮಗಳ ಮೂಲಕ ನಗರದ ಸಂಚಾರ ದಟ್ಟಣೆಯನ್ನು ಕೇವಲ ಶೇ.1 ಪರ್ಸೆಂಟ್ ತಗ್ಗಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ