
ಕೋಲ್ಕತಾ: ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್*ಪ್‌ಗೆ ಆಕೆ ಮತ್ತು ಆಕೆ ಓದುತ್ತಿದ್ದ ಖಾಸಗಿ ವೈದ್ಯಕೀಯ ಕಾಲೇಜನ್ನೇ ಹೊಣೆ ಮಾಡುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಟೀಕೆಗೆ ತುತ್ತಾಗಿದ್ದಾರೆ.
ಅತ್ಯಾ*ರದ ಘಟನೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಮಮತಾ,‘ಘಟನೆಯನ್ನು ನಾನು ಖಂಡಿಸುತ್ತೇನೆ. ಇದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ನೋಡಿಕೊಳ್ಳಲಿದೆ. ಆದರೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ರಾತ್ರಿ 12.30ಕ್ಕೆ ಹೊರಬರಲು ಹೇಗೆ ಸಾಧ್ಯ? ಶಿಕ್ಷಣ ಸಂಸ್ಥೆಗಳೇ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು.
ಅವರಿಗೆ ರಾತ್ರಿಯ ಸಮಯದಲ್ಲಿ ಹೊರಗೆ ಹೋಗಲು ಬಿಡಬಾರದು. ಪೊಲೀಸರು ಪ್ರತಿ ಮನೆಯ ಮುಂದೆ ನಿಂತು ಪ್ರತಿಯೊಬ್ಬರ ಮೇಲೆ ಕಣ್ಣಿಡಲು ಆಗದು. ವಿದ್ಯಾರ್ಥಿನಿಯರಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಗೊತ್ತಿರಬೇಕು. ಹೊರರಾಜ್ಯಗಳಿಂದ ಬಂದವರು ಹಾಸ್ಟೆಲ್ ನಿಯಮಗಳ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ‘ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು ಇತರರಿಗಾಗಿ ಶೋಧ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರನ್ನೂ ಬಿಡುವುದಿಲ್ಲ’ ಎಂದು ಬ್ಯಾನರ್ಜಿ ಭರವಸೆ ನೀಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತನೊಡನೆ ಶುಕ್ರವಾರ ರಾತ್ರಿ ಊಟಕ್ಕೆ ಕಾಲೇಜು ಹಾಸ್ಟೆಲ್‌ನಿಂದ ಹೊರಗೆ ತೆರಳಿದಾಗ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದಳು.
ಆಕೆ ರಾತ್ರಿ 12ಕ್ಕೆ ಹಾಸ್ಟೆಲ್‌ನಿಂದ ಹೊರಬಂದಿದ್ದೇಕೆ
ಪ್ರತಿ ಮನೆಯ ಮುಂದೆ ಪೊಲೀಸರಿಗೆ ನಿಲ್ಲಲಾಗದು
ಸ್ತ್ರೀಯರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಗೊತ್ತಿರಬೇಕು
ಅಮಿತ್ ಶಾ ಮೀರ್ ಜಾಫರ್ ಇದ್ದಂತೆ..' ಮೋದಿಗೆ ಎಚ್ಚರಿಕೆಯಿಂದ ಇರಿ ಎಂದ ಮಮತಾ ಬ್ಯಾನರ್ಜಿ!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲವು ಎಚ್ಚರಿಕೆಯ ಸಲಹೆಗಳನ್ನು ನೀಡಿದ್ದಾರೆ. 1757ರಲ್ಲಿ ಮೀರ್ ಜಾಫರ್ ಮಾಡಿದ ದ್ರೋಹ ಪ್ರಕರಣ ಭಾರತದ ಇತಿಹಾಶದಲ್ಲಿ ಶಾಶ್ವತವಾಗಿ ದಾಖಲಾಗಿರುವಾಗ ಅದೇ ರೀತಿಯ ಪರಿಸ್ಥಿತಿ ನಿಮಗಾಗಬಹುದು ಎಂದು ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ನಂ.2 ಎಂದೇ ಕಾಣಿಸಿಕೊಂಡಿರುವ ಅಮಿತ್ ಶಾ, ಅವರು ಹಂಗಾಮಿ ಪ್ರಧಾನಮಂತ್ರಿ ರೀತಿಯಲ್ಲೇ ವರ್ತನೆ ತೋರುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮಿತ್ ಶಾ ಮೇಲೆ ಹೆಚ್ಚು ನಂಬಿಕೆ ಇಡಬೇಡಿ ಎಂದು ಹೇಳಲು ಬಯಸುತ್ತೇನೆ. ಅವರು ಒಂದು ದಿನ ಅವರ ಮೀರ್ ಜಾಫರ್ ಆಗಬಹುದು" ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಪ್ರವಾಹದಿಂದ ಪೀಡಿತ ಉತ್ತರ ಬಂಗಾಳದಿಂದ ಹಿಂದಿರುಗಿದ ನಂತರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹೇಳಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ