ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಂದೆ-ಸಹೋದರನಿಗೆ  'ವೈ +' ಭದ್ರತೆ

By Suvarna NewsFirst Published May 22, 2021, 7:46 PM IST
Highlights

* ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆೇಂದು ಅಧಿಕಾರಿಯ ತಂದೆ ಮತ್ತು ಸಹೋದರಿಗೆ ಭದ್ರತೆ
* 'ವೈ +' ಭದ್ರತೆ ನೀಡಿದ ಕೇಂದ್ರ ಗೃಹ ಸಚಿವಾಲಯ
* ಸಹೋದರ ಮತ್ತು ತಂದೆ ಇಬ್ಬರು ಬೇರೆ ಬೇರೆ ಪಕ್ಷದ ಸಂಸದರು

ನವದೆಹಲಿ(ಮೇ 22) ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ತಂದೆ ಮತ್ತು ಸಹೋದರ ಇಬ್ಬರಿಗೂ ಕೇಂದ್ರ ಗೃಹ ಸಚಿವಾಲಯ ಅವರಿಗೆ ಕೇಂದ್ರ ರಕ್ಷಣಾ ಪಡೆಗಳಿಂದ 'ವೈ +' ಭದ್ರತೆ ನೀಡಿದೆ.  ಅಧಿಕಾರಿ ಸಹೋದರ ಮತ್ತೆ ತಂದೆ ಇಬ್ಬರು ಸಂಸತ್ ಸದಸ್ಯರಾಗಿದ್ದಾರೆ.

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೆಂದು ಅಧಿಕಾರಿಗೆ ಜೀವ ಬೆದರಿಕೆ ಇರುವ ವರದಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಹೆಚ್ಚಿನ ಭದ್ರತೆ ನೀಡಿದೆ.

ಸಿಸಿರ್ ಕುಮಾರ್ ಅಧಿಕಾರಿ ಅವರು ಕಾಂತಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, ದಿಬ್ಯೆಂದು ಅಧಿಕಾರಿ ರಾಜ್ಯದ ತಮ್ಲುಕ್‌ ಕ್ಷೇತ್ರದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದರಾಗಿದ್ದಾರೆ.  ಕಳೆದ ವಿಧಾನಸಭೆ ಚುನಾವಣೆ ವೇಳೆ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಮಮತಾ

ಪಶ್ಚಿಮ  ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಾಗ ಟಿಎಂಸಿ ಬಹುಮತ ಸಾಧಿಸಿತ್ತು. ಬಿಜೆಪಿ ಮತ್ತು ಟಿಎಂಸಿ ಈ ಬಾರಿ ಮುಖಾಮುಖಿ ಕಾದಾಟ ನಡೆಸಿದ್ದವು. ಆದರೆ  ಸರ್ಕಾರ ರಚನೆ ನಂತರ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗಿದ್ದವು. 

ಏನಿದು ವೈ ಪ್ಲಸ್ ಭದ್ರತೆ: ಈ ಭದ್ರತೆ  ನೀಡಿದ ವ್ಯಕ್ತಿಯ ಜತೆ ಒಬ್ಬ ವೈಯಕ್ತಿಕ ಭದ್ರತಾ ಅಧಿಕಾರಿ ಇರುತ್ತಾರೆ. ಜತೆಗೆ  ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್ಯ  ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ ಪೊಲೀಸರು ಸದಾ ರಕ್ಷಣೆಗೆ ನಿರತರಾಗಿರುತ್ತಾರೆ.

click me!