
ತಿರುಪತಿ (ಫೆ.03) ತಿರುಪತಿ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ದಿನ ಅತೀ ಹೆಚ್ಚು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಭಕ್ತರ ದೇವರ ದರ್ಶನ ಸರಾಗವಾಗಿ ನಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆಗಳಿವೆ. ದೇವಸ್ಥಾನಕ್ಕೆ ಆಗಮಿಸುವಾಗಲು ನೀಚ ಬುದ್ದಿ ತೋರಿದ ಘಟನೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆದಿದೆ. ದೇವರ ದರ್ಶನಕ್ಕೆ ಕ್ಯೂ ನಿಂತಿದ್ದ ವೇಳೆ ಇಬ್ಬರು ಭಕ್ತರ ನಡುವೆ ವಾಗ್ವಾದ ನಡೆದಿದೆ. ಪರಿಣಾಮ ಓರ್ವ ತನ್ನ ಬೆಲ್ಟ್ ಬಿಚ್ಚಿ ಮತ್ತೊಬ್ಬ ಭಕ್ತನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
ಕೃಷ್ಣತೇಜ ಅತಿಥಿ ಗೃಹದ ಬಳಿಕಯ ದೇವರ ದರ್ಶನ ಸಾಲಿನಲ್ಲಿ ಈ ಘಟನೆ ನಡೆದಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಭಕ್ತರು ತುಂಬಿದ್ದ ಸಾಲಿನಲ್ಲೇ ಇಬ್ಬರು ಮಕ್ಕಳು ವಾಗ್ವಾದ ನಡೆಸಿದ ಜಗಳವಾಡಿದ್ದಾರೆ. ವಾಗ್ವಾದ ತೀವ್ರಗೊಂಡ ಬೆನ್ನಲ್ಲೇ ಬೆಲ್ಟ್ ಬಿಚ್ಚಿ ಹೊಡೆದಿದ್ದಾನೆ. ಎರಡು ಗುಂಪಿನ ಸದಸ್ಯರು ವಾಗ್ವಾದ ತೀವ್ರಗೊಂಡಿದೆ. ದಾಳಿ ಬೆನ್ನಲ್ಲೇ ಪರಿಣಾಮ ವಿಕೋಪಕ್ಕೆ ತಿರುಗಿದೆ.
ಭಕ್ತರು ಕಿತ್ತಾಡಿಕೊಂಡ ಮಾಹಿತಿ ಸಿಗುತ್ತಿದ್ದಂತೆ ತಿರುಪತಿ ತಿರುಮಲ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಇಬ್ಬರು ಭಕ್ತರು ಹಾಗೂ ಅವರ ಗುಂಪುಗಳನ್ನು ಬೇರೆ ಬೇರೆ ಸರದಿ ಸಾಲಿನಲ್ಲಿ ಹಾಕಿದ್ದಾರೆ. ಈ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ.
ಇಬ್ಬರು ಭಕ್ತರು ಹೊಡೆದಾಡಿಕೊಂಡ ಕಾರಣ ಇತರ ಭಕ್ತರ ದರ್ಶನಕ್ಕೆ ಸಮಸ್ಯೆಯಾಗಿದೆ. ವಾಗ್ವಾದ ಆರಂಭಗೊಳ್ಳುತ್ತಿದ್ದಂತೆ ಭಕ್ತರ ಸರದಿ ಸಾಲು ಸ್ಥಗಿತಗೊಂಡಿದೆ. ಜಗಳವಾಡುತ್ತಿದ್ದ ಭಕ್ತರ ಹಿಂಬದಿಯಲ್ಲಿದ್ದ ಇತರ ಭಕ್ತರಿಗೆ ದೇವರ ದರ್ಶನ ಮಾಡಲು ತೆರಳಲು ಸಾಧ್ಯವಾಗಿಲ್ಲ. ಹಲವು ಭಕ್ತರು ಮನವಿ ಮಾಡಿದರೂ ಕೇಳಿಲ್ಲ. ಹೀಗಾಗಿ ಕೆಲ ಕಾಲ ಭಕ್ತರ ಸರದಿ ಸಾಲು ಸ್ಥಗಿತಗೊಂಡಿತ್ತು.
ಘಟನೆ ಬೆನ್ನಲ್ಲೆ ಟಿಟಿಡಿ ಭಕ್ತರಲ್ಲಿ ವಿಶೇಷ ಮನವಿ ಮಾಡಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದೇವರ ದರ್ಶನ ಹಾಗೂ ಧಾರ್ಮಿಕ ಶ್ರದ್ಧಾ ಭಕ್ತಿಗೆ ಪಾತ್ರರಾಗಬೇಕು. ಭಕ್ತರು ತಾಳ್ಮೆಯಿಂದ ವರ್ತಿಸಬೇಕು. ದೇವಸ್ಥಾನ ಆವರಣದಲ್ಲಿ ಪಾಲಿಸಬೇಕಾದ ಕನಿಷ್ಠ ನಿಯಮಗಳನ್ನು ಪಾಲಿಸುವುದು ಮಾತ್ರವಲ್ಲ, ಗೌರವ ಉಳಿಸಬೇಕು ಎಂದು ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ