ಬೆಂಗಳೂರಿನ ವಿಭೂತಿಪುರ ಮತ್ತು ದೊಡ್ಡನೆಕ್ಕುಂದಿ ಕೆರೆಗಳಲ್ಲಿನ ರಾಜಕಾಲುವೆ ಮತ್ತು ಕೆರೆಗಳ ಅತಿಕ್ರಮಣದ ಬಗ್ಗೆ ಲೋಕಾಯುಕ್ತ ವರದಿಯನ್ನು ಗಮನಿಸಿ ಎನ್‌ಜಿಟಿ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ಕೆರೆಯ ನೀರಿನ ಮಟ್ಟ ಕಡಿಮೆಯಾಗುವುದು, ಹೊರಹರಿವಿನ ಮಾರ್ಗ ನಿರ್ಬಂಧಿಸುವುದು ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣದಂತಹ ಸಮಸ್ಯೆಗಳನ್ನು ವರದಿ ಎತ್ತಿ ತೋರಿಸಿದೆ.
ನವದೆಹಲಿ (ಅ.14): ಬೆಂಗಳೂರಿನ ಎರಡು ಕೆರೆಗಳಲ್ಲಿ ಮುಚ್ಚಿಹೋಗಿರುವ ರಾಜಕಾಲುವೆ ಮತ್ತು ಕೆರೆಗಳ ಅತಿಕ್ರಮಣವನ್ನು ಪ್ರಮುಖ ಸಮಸ್ಯೆ ಎಂದು ಹೇಳಿದ್ದ ಲೋಕಾಯುಕ್ತ ವರದಿಯ ಬಗ್ಗೆ ಬಂದ ಮಾಧ್ಯಮ ವರದಿಯ ಗಮನಿಸಿ ಸುಮೊಟೋ ಕೇಸ್ ದಾಖಲು ಮಾಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು ಮತ್ತು ಇತರ ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿ ಎನ್‌ಜಿಟಿ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ವಿಭೂತಿಪುರ ಮತ್ತು ದೊಡ್ಡನೆಕ್ಕುಂದಿ ಕೆರೆಗಳಲ್ಲಿನ ಹಲವು ಸಮಸ್ಯೆಗಳ ಕುರಿತು ಲೋಕಾಯುಕ್ತ ತನಿಖೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಇದನ್ನು ಗಮನಿಸಿ ಸ್ವಯಂಪ್ರೇರಿದ ದೂರು ಸ್ವೀಕಾರ ಮಾಡಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಚಾರಣೆ ನಡೆಸುತ್ತಿದೆ.
ಇತ್ತೀಚಿನ ಆದೇಶದಲ್ಲಿ, ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರ ಪೀಠ, "ವಿಭೂತಿಪುರ ಸರೋವರದಲ್ಲಿ ಅಧಿಕಾರಿಗಳು ಪ್ರವೇಶ ದ್ವಾರವನ್ನು ವಿರೂಪಗೊಳಿಸಿದ್ದಾರೆ, ಬೇಲಿಗಳನ್ನು ಧ್ವಂಸಗೊಳಿಸಿರುವುದು ಮತ್ತು ಆವರಣದೊಳಗೆ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ವರದಿ ಇದರಲ್ಲಿದೆ' ಎಂದು ತಿಳಿಸಿದ್ದಾರೆ. "ಮಳೆಗಾಲದಲ್ಲಿಯೂ ಸಹ ಕೆರೆಯ ನೀರಿನ ಮಟ್ಟವು ಆತಂಕಕಾರಿಯಾಗಿ ಕಡಿಮೆಯಾಗಿದೆ, ಹೊರಹರಿವಿನ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಅತಿಕ್ರಮಣ ಮತ್ತು ಸೌಲಭ್ಯಗಳ ದುರುಪಯೋಗವನ್ನು ಸಹ ಗಮನಿಸಲಾಗಿದೆ. ಇದಲ್ಲದೆ, ದೊಡ್ಡನೆಕ್ಕುಂದಿ ಕೆರೆಯು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
undefined
ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠವು, “ಈ ಸುದ್ದಿಯು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ ಮತ್ತು ಪರಿಸರ (ರಕ್ಷಣೆ) ಕಾಯಿದೆಯ ನಿಬಂಧನೆಗಳ ಅನುಸರಣೆಗೆ ಸಂಬಂಧಿಸಿದಂತೆ ಗಣನೀಯ ಸಮಸ್ಯೆಗಳನ್ನು ತೋರಿಸಿದೆ' ಎಂದಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರಿನ ಜಿಲ್ಲಾಧಿಕಾರಿ (ಡಿಎಂ) ಅವರನ್ನು ಪ್ರತಿವಾದಿಗಳು ಮತ್ತು ಕಕ್ಷಿದಾರರನ್ನಾಗಿ ಹಸಿರು ಮಂಡಳಿಯು ಸೂಚಿಸಿದೆ. ಡಿಎಂ ಅವರ ವಕೀಲರು ನೋಟಿಸ್ ಸ್ವೀಕರಿಸಿದರು ಮತ್ತು ಉತ್ತರವನ್ನು ಸಲ್ಲಿಸಲು ಸಮಯ ಕೇಳಿದರು ಎಂದು ನ್ಯಾಯಪೀಠ ತಿಳಿಸಿದೆ.
ಬೆಂಗಳೂರಿಗಿದ್ದ ಸಿಲಿಕಾನ್ ಸಿಟಿ ಹೆಸರನ್ನು ಗಟ್ಟಿಗೊಳಿಸಿದ ರತನ್ ಟಾಟಾ!
ಮುಂದಿನ ವಿಚಾರಣೆಯ ದಿನಾಂಕಕ್ಕೆ (ನವೆಂಬರ್ 5 ರಂದು) ಕನಿಷ್ಠ ಒಂದು ವಾರ ಮೊದಲು ಚೆನ್ನೈನಲ್ಲಿರುವ ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠದ ಮುಂದೆ ತಮ್ಮ ಪ್ರತಿಕ್ರಿಯೆ/ಪ್ರತ್ಯುತ್ತರವನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಇತರ ಪ್ರತಿವಾದಿಗಳಿಗೆ ನೋಟಿಸ್ ನೀಡಲಿ,'' ಎಂದು ನ್ಯಾಯಪೀಠ ಹೇಳಿದೆ.
ದೀಪಾವಳಿ ಹಬ್ಬಕ್ಕೂ ವಿಶೇಷ ರೈಲುಗಳನ್ನು ಬಿಟ್ಟ ರೈಲ್ವೆ ಇಲಾಖೆ: ಇಲ್ಲಿದೆ ನೋಡಿ ಮಾಹಿತಿ
ಬಿಲ್ಡರ್/ಗುತ್ತಿಗೆದಾರರ ಕುಟುಂಬಕ್ಕೆ ಸೇವೆ ಮಾಡುವ ಸರ್ಕಾರ: ಈ ಬಗ್ಗೆ ಸರ್ಕಾರವನ್ನು ಟೀಕೆ ಮಾಡಿರುವ ಬಿಜೆಪಿ ಮಾಜಿ ಸಂಸದ ರಾಜೀವ್ ಚಂದ್ರಶೇಖರ್, 'ಪ್ರತಿ ಬಾರಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ಇದೇ ಕೆಲವನ್ನು ಮಾಡುತ್ತದೆ. ಮೊದಲಿಗೆ ತಮ್ಮ ಕುಟುಂಬದವರಿಗಾಗಿ ಭೂಮಿಯನ್ನು ಅತಿಕ್ರಮಣ ಮಾಡುತ್ತದೆ. ಆ ನಂತರ ತನ್ನ ಸ್ನೇಹಿತ ಬಿಲ್ಡರ್‌ಗಳಿಗೆ ಬೆಂಗಳೂರಿನ ಪ್ರಮುಖ ಸರೋವರಗಳ ಜಾಗವನ್ನು ಅತಿಕ್ರಮಣ ಮಾಡಲು ಬಿಡುತ್ತದೆ. ಇದೇ ಕೆರೆಗಳನ್ನು ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಂರಕ್ಷಣೆ ಮಾಡಲಾಗಿತ್ತು. ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕೆಟ್ಟ ಸ್ವಭಾವ - ನಾಚಿಕೆಯಿಲ್ಲದ, ಲಜ್ಜೆಗೆಟ್ಟ ಸರ್ಕಾರ. ಅವರು ಬಡವರ ಹೆಸರಿನಲ್ಲಿ ಅಧಿಕಾರ ಹಿಡಿಯುತ್ತಾರೆ, ಆದರೆ ಅವರ ಕುಟುಂಬಗಳು ಮತ್ತು ಬಿಲ್ಡರ್‌ಗಳು/ಗುತ್ತಿಗೆದಾರರಿಗೆ ಮಾತ್ರ ಸೇವೆ ಸಲ್ಲಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ.
This is a pattern whnever Cong comes into govt in Karnataka - first thing they do is grab land for the families and at same time allow "friendly" builders to encroach precious lakes of Bengaluru - which had been protected n revived by
n govts
This is the… https://t.co/hI5yvmbB45