ತಿರುಪತಿ ತುಪ್ಪದಲ್ಲಿ ಬಾತ್‌ರೂಮಲ್ಲಿ ಬಳಸುವ ಕೆಮಿಕಲ್‌ : ನಾಯ್ಡು

Kannadaprabha News   | Kannada Prabha
Published : Feb 07, 2026, 05:43 AM IST
Chandrababu Naidu

ಸಾರಾಂಶ

ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ ಬಾತ್‌ರೂಮ್‌ ಸ್ವಚ್ಛಮಾಡುವ ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸಿದ್ದ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಕಲುಗೋಟ್ಲ (ಆಂಧ್ರಪ್ರದೇಶ) : ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ ಬಾತ್‌ರೂಮ್‌ ಸ್ವಚ್ಛಮಾಡುವ ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸಿದ್ದ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಕರ್ನೂಲ್‌ ಜಿಲ್ಲೆಯ ಗ್ರಾಮದಲ್ಲಿ ನಡೆದ ಸಭೆ

ಕರ್ನೂಲ್‌ ಜಿಲ್ಲೆಯ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಪತಿ ವೆಂಕಟೇಶ್ವರ ಸ್ವಾಮಿಯ ಗೌರವಕ್ಕೆ ಚ್ಯುತಿ ತಂದಿದೆ. ತಿರುಪತಿ ಮಾತ್ರವಲ್ಲದೆ ಹಿಂದೂಗಳ ಮತ್ತೊಂದು ಪ್ರಮುಖ ಶ್ರದ್ಧಾಕೇಂದ್ರವಾದ ಶ್ರೀಶೈಲಂ ದೇಗುಲಕ್ಕೂ ಕಲಬೆರಕೆ ತುಪ್ಪ ಪೂರೈಕೆಯಾಗಿದೆ ಎಂದು ಆರೋಪಿಸಿದರು.

ಸುಮಾರು ಐದು ವರ್ಷಗಳ ಕಾಲ ಈ ರೀತಿ ಕಲಬೆರಕೆಯ ಹಾಗೂ ರಾಸಾಯನಿಕಯುಕ್ತ ತುಪ್ಪ ಬಳಸಿ ತಿರುಪತಿ ಲಡ್ಡು ತಯಾರಿಸಲಾಗಿದೆ ಎಂದು ನಾಯ್ಡು ಕಿಡಿಕಾರಿದರು.

ಜಗನ್‌ ನಕಾರ:

‘ಕಲಬೆರಕೆ ತುಪ್ಪ ಪ್ರಕರಣದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಟಿಡಿಡಿ ಅಧ್ಯಕ್ಷರಾಗಿದ್ದ ವೈ.ವಿ. ಸುಬ್ಬಾರೆಡ್ಡಿ ಮತ್ತು ಬಿ. ಕರುಣಾಕರ ರೆಡ್ಡಿ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ವಿನಾಕಾರಣ ಚಂದ್ರಬಾಬು ಆರೋಪ ಮಾಡುತ್ತಿದ್ದಾರೆ’ ಎಂದು ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೊಬೈಲ್‌ ಹುಚ್ಚು ಬಿಡಿ, ಸದ್ಬಳಕೆ ಮಾಡಿಕೊಳ್ಳಿ: ಮೋದಿ
ಶ್ರೀಶೈಲ ದೇಗುಲ ಪ್ರಸಾದಕ್ಕೂ ತಿರುಪತಿ ರೀತಿ ಕಲಬೆರಕೆ ತುಪ್ಪ!