₹9000 ಕೋಟಿ ಪರಮಾಣು ರಿಯಾಕ್ಟರ್ ಯೋಜನೆಗೆ ಅದಾನಿ, ರಿಲಯನ್ಸ್, ಎನ್‌ಟಿಪಿಸಿ ಜತೆ ಭಾಭಾ ರಿಸರ್ಚ್ ಸೆಂಟರ್ ಬೃಹತ್ ಡೀಲ್!

Published : Sep 17, 2026, 12:43 PM IST
Nuclear plant

ಸಾರಾಂಶ

ಭಾರತವು ಶುದ್ಧ ಇಂಧನ ಯೋಜನೆಗಾಗಿ 'ಭಾರತ್ ಸಣ್ಣ ಮಾಡ್ಯುಲರ್ ರಿಯಾಕ್ಟರ್' (BSMR-300) ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಲು ಮುಂದಾಗಿದೆ. ಇದಕ್ಕಾಗಿ ರಿಲಯನ್ಸ್, ಅದಾನಿ ಮತ್ತು ಎಲ್&ಟಿ ಯಂತಹ ಖಾಸಗಿ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ನವದೆಹಲಿ: ಭಾರತವು ತನ್ನ ಶುದ್ಧ ಇಂಧನ ಪರಿವರ್ತನೆ ಯೋಜನೆಯ ಭಾಗವಾಗಿ ಪರಮಾಣು ವಿದ್ಯುತ್ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿದೆ. ಇದರ ಮುನ್ನುಡಿಯಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 300 ಮೆಗಾವ್ಯಾಟ್ ಸಾಮರ್ಥ್ಯದ 'ಭಾರತ್ ಸಣ್ಣ ಮಾಡ್ಯುಲರ್ ರಿಯಾಕ್ಟರ್' (BSMR-300) ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಲು ಸರ್ಕಾರಿ ಸ್ವಾಮ್ಯದ ಭಾಭಾ ಪರಮಾಣು ಸಂಶೋಧನಾ ಕೇಂದ್ರ (BARC) ನಿರ್ಧರಿಸಿದೆ. ಈ ಯೋಜನೆಗಾಗಿ ದೇಶದ ದೈತ್ಯ ಕಂಪನಿಗಳಾದ ಎನ್‌ಟಿಪಿಸಿ , ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಗ್ರೂಪ್ ಹಾಗೂ ಲಾರ್ಸೆನ್ & ಟೂಬ್ರೊ ಜೊತೆ ಸರ್ಕಾರಿ ಮಟ್ಟದಲ್ಲಿ ಉನ್ನತ ಮಾತುಕತೆಗಳು ಶುರುವಾಗಿದೆ.

ಖಾಸಗಿ ಭಾಗಿ ಮತ್ತು ಬಂಡವಾಳ ಹೂಡಿಕೆ

ಈ ಪ್ರಸ್ತಾವಿತ ಯೋಜನೆಯ ಪ್ರಕಾರ, ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುವ ವಿಶೇಷ ಉದ್ದೇಶದ ವಾಹನ (SPV) ಸಂಸ್ಥೆಯೊಂದನ್ನು ಸ್ಥಾಪಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಸಂಸ್ಥೆಯಲ್ಲಿ ಖಾಸಗಿ ಕಂಪನಿಗಳು ಈಕ್ವಿಟಿ ಹೂಡಿಕೆ ಮಾಡಲಿವೆ. ಬಿಎಸ್ಎಮ್‌ಆರ್-300 ರಿಯಾಕ್ಟರ್ ನಿರ್ಮಾಣಕ್ಕೆ ಪ್ರತಿ ಮೆಗಾವ್ಯಾಟ್‌ಗೆ ಅಂದಾಜು ₹30 ಕೋಟಿ ವೆಚ್ಚವಾಗಲಿದ್ದು, 300 ಮೆಗಾವ್ಯಾಟ್‌ನ ಒಂದು ಘಟಕಕ್ಕೆ ಸುಮಾರು ₹9,000 ಕೋಟಿ ಯೋಜನಾ ವೆಚ್ಚವಾಗಲಿದೆ. ಹೂಡಿಕೆ ಮಾದರಿಯನ್ನು ಔಪಚಾರಿಕಗೊಳಿಸಲು ಶೀಘ್ರದಲ್ಲೇ 'ಪ್ರಸ್ತಾಪದ ವಿನಂತಿ' (RFP) ಹೊರಡಿಸುವ ನಿರೀಕ್ಷೆಯಿದೆ.

2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಗುರಿ

ಭಾರತವು 2047 ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟಕೊಂಡಿದೆ. ಪ್ರಸ್ತುತ ಭಾರತದ 8.7 ಗಿಗಾವ್ಯಾಟ್ ಪರಮಾಣು ಸಾಮರ್ಥ್ಯವು ಭಾರೀ ನೀರಿನ ರಿಯಾಕ್ಟರ್‌ಗಳನ್ನು ಆಧರಿಸಿದೆ. ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಕಡಿಮೆ ಜಾಗವನ್ನು ಬಳಸಿಕೊಂಡು, ಕಾರ್ಖಾನೆಗಳಲ್ಲೇ ಬಿಡಿಭಾಗಗಳನ್ನು ತಯಾರಿಸಿ ಯೋಜನಾ ಸ್ಥಳದಲ್ಲಿ ಜೋಡಿಸಲು ಸುಲಭವಾಗಲಿದೆ. ಇದು ಉಕ್ಕು, ಸಿಮೆಂಟ್ ಹಾಗೂ ರಸಗೊಬ್ಬರ ತಯಾರಿಕೆಯಂತಹ ಭಾರೀ ಕೈಗಾರಿಕೆಗಳಿಗೆ ಕ್ಯಾಪ್ಟಿವ್ ವಿದ್ಯುತ್ ಮತ್ತು ಉಷ್ಣ ಶಕ್ತಿಯನ್ನು ಪೂರೈಸಲು ಹೆಚ್ಚು ಸೂಕ್ತವಾಗಿದೆ.

₹20,000 ಕೋಟಿಯ ರಾಷ್ಟ್ರೀಯ ಮಿಷನ್

ಈ ಯೋಜನೆಯು ಭಾರತ ಸರ್ಕಾರದ ₹20,000 ಕೋಟಿ ಮೌಲ್ಯದ ಪರಮಾಣು ಇಂಧನ ಮಿಷನ್‌ನ ಭಾಗವಾಗಿದ್ದು, 2033ರ ವೇಳೆಗೆ ಕನಿಷ್ಠ ಐದು ದೇಶೀಯ ಎಸ್‌ಎಮ್‌ಆರ್‌ಗಳನ್ನು ಸ್ಥಾಪಿಸುವ ಗುರಿ ಇದೆ. ಬಿಎಆರ್‌ಸಿ ಸಂಸ್ಥೆಯು 300 MW ರಿಯಾಕ್ಟರ್ ಜೊತೆಗೆ, 220 MW ಸಾಮರ್ಥ್ಯದ 'BSMR-200' ಹಾಗೂ 55 MW ಸಾಮರ್ಥ್ಯದ 'SMR-55' ಪ್ರದರ್ಶನ ರಿಯಾಕ್ಟರ್‌ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

ಸಂಸತ್ತಿನಲ್ಲಿ ಪರಮಾಣು ವಲಯವನ್ನು ಖಾಸಗಿಯವರನ್ನೂ ಒಳಗೊಂಡು ಮುಕ್ತಗೊಳಿಸುವ ಶಾಸಕಾಂಗ ಬದಲಾವಣೆಗಳು ಜಾರಿಗೆ ಬಂದಿರುವುದು ಈ ವಾಣಿಜ್ಯೀಕರಣಕ್ಕೆ ಬೂಸ್ಟ್ ನೀಡಿದೆ. ಆರಂಭಿಕ ಹಂತದ ಘಟಕಗಳ ವೆಚ್ಚ ಹೆಚ್ಚಾದರೂ, ಉದ್ಯಮ ಸಂಸ್ಥೆಗಳ ಬಂಡವಾಳ ಮತ್ತು ಜಾಗತಿಕ ತಾಂತ್ರಿಕ ಸಹಭಾಗಿತ್ವದೊಂದಿಗೆ ಭಾರತವು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಹೊಸತನದತ್ತ ಹೆಜ್ಜೆ ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಹುಲ್​, ಖರ್ಗೆ ಏನೆಂದು ವಿಷ್​ ಮಾಡಿದ್ರು? ಜೋಸೆಫ್​ ವಿಜಯ್​ ಹೇಳಿದ್ದೇನು
ಜಾಹೀರಾತೂ ಇಲ್ಲ, ಡಿಸ್ಕೌಂಟೂ ಇಲ್ಲ! ಆದ್ರೂ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಆಗಿದ್ದು ಹೇಗೆ ಟಾಟಾದ 'ಜುಡಿಯೋ'?