ಪ್ರಣಬ್ ದಾ ನಿಧನ ಹಿನ್ನೆಲೆ, ಬಾಂಗ್ಲಾದಲ್ಲಿ 1 ದಿನ ರಾಷ್ಟ್ರೀಯ ಶೋಕಾಚರಣೆ!

By Suvarna News  |  First Published Sep 1, 2020, 9:23 AM IST

ಮುಖರ್ಜಿ ನಿಧನ ಹಿನ್ನೆಲೆ ಬಾಂಗ್ಲಾದಲ್ಲಿ ಒಂದು ದಿನ ಶೋಕಾಚರಣೆ| ಮೋದಿಗೆ ಪತ್ರ ಬರೆದು ಸಂತಾಪ ವ್ಯಕ್ತಪಡಿಸಿದ ಬಾಂಗ್ಲಾ ಪ್ರಧಾನಿ| ಮುಖರ್ಜಿ ಬಾಂಗ್ಲಾದ ನಿಜವಾದ ಸ್ನೇಹಿತ


ಢಾಕಾ(ಸೆ.01): ಮಾಜಿ ರಾಷ್ಟ್ರಪತಿ, 84 ವರ್ಷದ ಪ್ರಣಬ್ ಮುಖರ್ಜಿ ಸೋಮವಾರದಂದು ದೆಹಲಿಯ ಆರ್ಮಿ ಹಾಸ್ಪಿಟಲ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.  ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಮುಖರ್ಜಿಗೆ ಕೊರೋನಾ ಸೋಂಕು ತಗುಲಿರುವುದೂ ದೃಢಪಟ್ಟಿತ್ತು. ಈ ನಡುವೆ ಮೆದುಳಿನ ಸರ್ಜರಿ ನಡೆದಿತ್ತಾದರೂ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ದಿಗ್ಗಜ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. 

ಹೀಗಿರುವಾಗ ಮುಖರ್ಜಿಯವರಿಗೆ ಆತ್ಮೀಯರಾಗಿದ್ದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮೋದಿ ಪತ್ರ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ನಿಧನ ಹಿನ್ನೆಲೆ ಬಾಂಗ್ಲಾದಲ್ಲಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.

Tap to resize

Latest Videos

ಮೋದಿಗೆ ಪತ್ರ ಬರೆದಿರುವ ಶೇಖ್ ಹಸೀನಾ ಸಂತಾಪವ್ಯಕ್ತಪಡಿಸುತ್ತಾ ಪ್ರಣಬ್‌ ದಾ ಓರ್ವ 'ನಿಜವಾದ ಸ್ನೇಹಿತ' ಎಂದಿದ್ದಾರೆ. ಅವರು ಬಾಂಗ್ಲಾದ ಓರ್ವ ನೈಜ ಗೆಳೆಯರಾಗಿದ್ದರು. ಹೀಗಾಗಿ ಬಾಂಗ್ಲಾ ನಿವಾಸಿಗರು ಅವರನ್ನು ಗೌರವಿಸುತ್ತಿದ್ದರು. ಅವರಿಗೆ 2013ರಲ್ಲಿ ಅವರಿಗೆ ಬಾಂಗ್ಲಾ ಮುಕ್ಕ್ತಿಯುದ್ಧ ಸನ್ಮಾನ ಮಾಡಿತ್ತು. 

ಇನ್ನು ಭಾರತದಲ್ಲಿ ಭಾರತರತ್ನ ಪ್ರಣಬ್ ನಿಧನ ಹಿನ್ನೆಲೆ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಮುಖರ್ಜಿಯವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ಲೋಧಿ ರೋಡ್‌ ಸ್ಮಶಾನದಲ್ಲಿ ನಡೆಯಲಿದೆ.

click me!