ದೆಹಲಿ ದಂಗೆ: ಶಾರ್ಜೀಲ್‌, ಉಮರ್‌ ಬೇಲಿಲ್ಲ

Kannadaprabha News   | Kannada Prabha
Published : Jan 06, 2026, 06:09 AM IST
Sharjeel Imam and Umar Khalid

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆ ಹಿಂದಿನ ಷಡ್ಯಂತ್ರದ ಪ್ರಮುಖ ಆರೋಪಿಗಳಾದ ಉಮರ್‌ ಖಾಲಿದ್‌ ಹಾಗೂ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ದಂಗೆ ಹಿಂದಿನ ಷಡ್ಯಂತ್ರದ ಪ್ರಮುಖ ಆರೋಪಿಗಳಾದ ಉಮರ್‌ ಖಾಲಿದ್‌ ಹಾಗೂ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆದರೆ, ಪ್ರಕರಣದಲ್ಲಿ ಇತರೆ ಐವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಸೋಮವಾರ ಆದೇಶ ಹೊರಡಿಸಿದೆ.

‘ಉಮರ್‌ ಹಾಗೂ ಶರ್ಜೀಲ್‌ ವಿರುದ್ಧದ ಆರೋಪಗಳಿಗೆ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಉಳಿದ ಆರೋಪಿಗಳಿಗೆ ಹೋಲಿಸಿದರೆ ಇವರಿಬ್ಬರ ಮೇಲಿನ ಆರೋಪ ಗಂಭೀರವಾಗಿವೆ. ದಂಗೆಗೆ ಸಂಬಂಧಿಸಿ ಯೋಜನೆ, ಜನರ ಸೇರಿಸುವಿಕೆ, ಸಮಗ್ರ ಕಾರ್ಯತಂತ್ರದ ನಿರ್ದೇಶವನ್ನು ನೋಡಿದರೆ ಇದೊಂದು ಸಾಮಾನ್ಯ, ಸಣ್ಣ ಅಥವಾ ಸ್ಥಳೀಯ ಘಟನೆಯಂತಿರದೆ ವ್ಯವಸ್ಥಿತ ಮತ್ತು ವಿಸ್ತಾರವಾದಂತಿದೆ’ ಎಂದ ನ್ಯಾ। ಅರವಿಂದ ಕುಮಾರ್‌ ಮತ್ತು ಎನ್‌.ವಿ.ಅಂಜಾರಿಯಾ ಅವರ ಪೀಠ ಜಾಮೀನು ನಿರಾಕರಿಸಿದೆ. ಜತೆಗೆ, ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಬಳಿಕ ಅಥವಾ 1 ವರ್ಷದ ನಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ.

ಅತ್ತ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್‌, ಜಾಮೀನು ಪಡೆದ ಆರೋಪಿಗಳಿಗೆ 12 ಷರತ್ತುಗಳನ್ನು ವಿಧಿಸಿದೆ. ಒಂದು ವೇಳೆ ಅವರೇನಾದರೂ ಆ ಷರತ್ತುಗಳನ್ನು ಉಲ್ಲಂಘಿಸಿದರೆ ಅವರ ಜಾಮೀನು ರದ್ದುಗೊಳ್ಳಲಿದೆ ಎಂದೂ ಎಚ್ಚರಿಸಿದೆ.

ಏನಿದು ಪ್ರಕರಣ?:

ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ 2020ರ ಫೆ.20ರಂದು ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಧಂಗೆಯಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉಮರ್‌ ಖಾಲಿದ್‌ ಸೇರಿ ಇತರೆ ಆರೋಪಿಗಳನ್ನು ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ವಿಚಾರಣಾ ನ್ಯಾಯಾಲಯಲ್ಲಿ ನಡೆಯುತ್ತಿದೆ.

ಇನ್ನು ಜೈಲೇ ನನ್ನ ಬದುಕು: ಖಾಲಿದ್‌

ಜಾಮೀನು ನಿರಾಕರಣೆ ಸುದ್ದಿ ಕೇಳಿ ಉಮರ್‌ ಬೇಸರ ವ್ಯಕ್ತಪಡಿಸಿದ್ದು, ‘ಇನ್ನು ನನಗೆ ಜೈಲೇ ಬದುಕಾಗಿದೆ. ಆದರೆ, ಇತರರಿಗೆ ಜಾಮೀನು ಸಿಕ್ಕಿದ್ದು ಖುಷಿಯಾಗಿದೆ. ನಾನು ಸ್ವಲ್ಪ ಹಗುರವಾಗಿದ್ದೇನೆ’ ಎಂದು ಜೆಎನ್‌ಯು ವಿವಿಯಲ್ಲಿ ತನ್ನ ಸಹವರ್ತಿಯಾಗಿದ್ದ ಬನೊಜೋತ್‌ಸ್ನಾ ಲಾಹಿರಿ ಮುಂದೆ ಹೇಳಿಕೊಂಡಿದ್ದಾನೆ. ಈ ಬಗ್ಗೆ ಲಾಹಿರಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೆನಿಜುವೆಲಾದಲ್ಲಿ ಅಮೆರಿಕ ಆಟ : ಭಾರತಕ್ಕೆ 9,000 ಕೋಟಿ ಲಾಭ!
ಹೈಬ್ರಿಡ್‌ ಯುದ್ಧಕ್ಕೆ ಸಿದ್ಧವಾಗಿದೆ ಭೈರವ ಪಡೆ!