ಭಾರತದ ಕೇಜ್ರಿವಾಲ್ ಬಂಧನಕ್ಕೂ ಪಾಕ್ ಇಮ್ರಾನ್ ಖಾನ್ ಅರೆಸ್ಟ್‌ಗೂ ಏನು ಸಂಬಂಧ? ಸಿಂಘ್ವಿ ವಾದ

Published : Jul 18, 2024, 02:36 PM IST
ಭಾರತದ ಕೇಜ್ರಿವಾಲ್ ಬಂಧನಕ್ಕೂ ಪಾಕ್ ಇಮ್ರಾನ್ ಖಾನ್ ಅರೆಸ್ಟ್‌ಗೂ ಏನು ಸಂಬಂಧ? ಸಿಂಘ್ವಿ ವಾದ

ಸಾರಾಂಶ

ಜಾಮೀನಿಗೆ ಸಂಬಂಧಿಸಿದ ವಿಚಾರಣೆಯನ್ನು ಜುಲೈ 29ಕ್ಕೆ  ಮುಂದೂಡಿದೆ. ವಾದ ಮಂಡನೆ ವೇಳೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಪ್ರಕರಣ ಉಲ್ಲೇಖಿಸುವ ಮೂಲಕ ಅಭಿಷೇಕ್ ಮನು ಸಿಂಘ್ವಿ ಎಲ್ಲರನ್ನು ಅಚ್ಚರಿಗೊಳಿಸಿದರು.

ನವದೆಹಲಿ: ಮದ್ಯ ಹಗರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಲಯದಿಂದ ಯಾವುದೇ ರಿಲೀಫ್ ಸಿಕ್ಕಿಲ್ಲ. ಸಿಎಂ ಅರವಿಂದ್ ಕೇಜ್ರಿವಾಲ್ ಪರವಾಗಿ ದೆಹಲಿ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ಕಕ್ಷಿದಾರರಿಗೆ ಜಾಮೀನು ಕೊಡಿಸಲು ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಪ್ರಖರವಾಗಿ ವಾದ ಮಂಡಿಸಿದರು. ಎರಡು ಪರ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದರು. ಜಾಮೀನಿಗೆ ಸಂಬಂಧಿಸಿದ ವಿಚಾರಣೆಯನ್ನು ಜುಲೈ 29ಕ್ಕೆ  ಮುಂದೂಡಿದೆ. ವಾದ ಮಂಡನೆ ವೇಳೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಪ್ರಕರಣ ಉಲ್ಲೇಖಿಸುವ ಮೂಲಕ ಅಭಿಷೇಕ್ ಮನು ಸಿಂಘ್ವಿ ಎಲ್ಲರನ್ನು ಅಚ್ಚರಿಗೊಳಿಸಿದರು. ಪಾಕಿಸ್ತಾನದಲ್ಲಿ ನಡೆದಂತೆ ಭಾರತದಲ್ಲಿಯೂ ಆಗೋದು ಬೇಡ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಪ್ರಕರಣವನ್ನು ಇಮ್ರಾನ್ ಖಾನ್ ಕೇಸ್ ಜೊತೆ ಹೋಲಿಸಿ  ವಾದ ಮಂಡಿಸಿದರು.

ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ನೀನಾ ಬನ್ಸಲ್ ಕೃಷ್ಣಾ ಅವರು ಮೊಹರಂ ರಜೆಯ ನಡುವೆಯೂ ಜುಲೈ 17ರಂದು ಅರ್ಜಿಯ ವಿಚಾರಣೆಯನ್ನು ನಡೆಸಿದರು. ಅರವಿಂದ್ ಕೇಜ್ರಿವಾಲ್ ಪರವಾಗಿ ನ್ಯಾಯಾಲಯದ ಮುಂದೆ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದರು. ವಾದದ ಆರಂಭದಲ್ಲಿಯೇ ಪಾಕಿಸ್ತಾನದ ಇಮ್ರಾನ್ ಖಾನ್  ಪ್ರಕರಣವನ್ನು ಉಲ್ಲೇಖಿಸಿದರು. 

ಕೇಜ್ರಿವಾಲ್ ಮದ್ಯ ಹಗರಣದ ನೇರ ಫಲಾನುಭವಿ, ಉಳಿದ ಸಚಿವರು ನೆಪ ಮಾತ್ರ: ಇ.ಡಿ.

ಇಮ್ರಾನ್ ಖಾನ್ ಅವರಿಗೆ ಹಲವು ಪ್ರಕರಣಗಳಲ್ಲಿ ಜಾಮೀನು ಸಿಗುತ್ತಿದೆ. ಬಿಡುಗಡೆ ಆಗುತ್ತಿದ್ದಂತೆ ಹೊಸ ಕೇಸ್‌ನಲ್ಲಿ ಅವರ ಬಂಧನ ಆಗುತ್ತಿರೋದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇದೀಗ ಇಮ್ರಾನ್ ಖಾನ್ ವಿರುದ್ಧ ದೊಡ್ಡ ಪ್ರಕರಣ ದಾಖಲು ಮಾಡಲು ಅಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಂತೆ ನಮ್ಮ ದೇಶದಲ್ಲಿಯೂ ಆಗೋದು ಬೇಡ ಎಂದು ಅರವಿಂದ್ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. 

ಸಿಬಿಐ ಬಳಿ ಯಾವುದೇ ಸಾಕ್ಷ್ಯಗಳಿಲ್ಲ

ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಸಿಬಿಐ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಈ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ನನ್ನ ಕಕ್ಷಿದಾರರನ್ನು ಜೈಲಿನಲ್ಲಿಯೇ ಇರಿಸಲು ಬಂಧನ ಮಾಡಲಾಗಿದೆ ಎಂಬುವುದು ಕಂಡು ಬರುತ್ತದೆ. ಜಾಮೀನು ತಡೆಯಲು ಕೇಜ್ರಿವಾಲ್ ಬಂಧನವಾಗ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸುತ್ತಿದೆ. ಜಾಮೀನು ನೀಡಲು ನಮ್ಮ ಬಳಿ ನ್ಯಾಯಾಲಯದ ಮೂರು ಆದೇಶಗಳಿವೆ. ನನ್ನ ಕಕ್ಷಿದಾರರು ಜಾಮೀನಿನ ಹಕ್ಕುದಾರರು. ಹಾಗಾಗಿ ಜಾಮೀನು ನೀಡಬೇಕು. ಅರವಿಂದ್ ಕೇಜ್ರಿವಾಲ್ ಬಿಡುಗಡೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. 

ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಬಿಗ್ ರಿಲೀಫ್: ಜಾಮೀನು ಸಿಕ್ಕರೂ ಜೈಲೇ ಗತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು