ಹಿಂದೂ ಹಬ್ಬ ಹರಿದಿನಗಳ ಮೇಲೆ ಕಲ್ಲು ತೂರಾಟ ನಡೆದಾಗ ರಾಹುಲ್ ಗಾಂಧಿಯಂತಹ ಮಹಾನ್ ನಾಯಕರು ಯಾಕೆ ಮೌನವಾಗಿರುತ್ತಾರೆ? ಈ ರೀತಿ ಕಲ್ಲು ತೂರಾಟ ನಡೆಸಲು ಹಿಂದೆ ದೇಶ ವಿಭಜನೆ ಮಾಡಲಾಗಿತ್ತೇ? ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿ (ಅ.14): ಹಿಂದೂ ಹಬ್ಬ ಹರಿದಿನಗಳ ಮೇಲೆ ಕಲ್ಲು ತೂರಾಟ ನಡೆದಾಗ ರಾಹುಲ್ ಗಾಂಧಿಯಂತಹ ಮಹಾನ್ ನಾಯಕರು ಯಾಕೆ ಮೌನವಾಗಿರುತ್ತಾರೆ? ಈ ರೀತಿ ಕಲ್ಲು ತೂರಾಟ ನಡೆಸಲು ಹಿಂದೆ ದೇಶ ವಿಭಜನೆ ಮಾಡಲಾಗಿತ್ತೇ? ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಭಾನುವಾರ (ಅಕ್ಟೋಬರ್ 13, 2024) ದುರ್ಗಾ ವಿಗ್ರಹ ನಿಮಜ್ಜನದ ವೇಳೆ ನಡೆದ ಹಿಂಸಾಚಾರ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಕೇಂದ್ರ ಸಚಿವರು, ವಾಸ್ತವವಾಗಿ, ಅಕ್ಟೋಬರ್ 13 ರಂದು, ಬಹ್ರೈಚ್‌ನ ಮಹ್ಸಿ ಪ್ರದೇಶದಲ್ಲಿ ದುರ್ಗಾ ಪೂಜೆಯ ವಿಗ್ರಹ ವಿಸರ್ಜನೆ ನಡೆದಿತ್ತು. ಈ ವೇಳೆಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಗೋಪಾಲ ಮಿಶ್ರಾ ಮೃತಪಟ್ಟಿದ್ದಾನೆ. ಈ ಸಾವಿನಿಂದ ಕೋಪಗೊಂಡ ಗುಂಪು ಹಲವೆಡೆ ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿತು. ನಿಮಜ್ಜನ ಯಾತ್ರೆ ವೇಳೆ ಧಾರ್ಮಿಕ ಸ್ಥಳದ ಹೊರಗೆ ಜನಸಂದಣಿ ಡಿಜೆ ಬಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
undefined
ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ
ಇತ್ತೀಚೆಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಧಾರ್ಮಿಕ ಘರ್ಷಣೆಗಳು ನಡೆದವು. ಹೈದರಾಬಾದ್‌ನ ಮುತ್ಯಾಲಮ್ಮ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಮಾತೆ ಮಾತೆಯ ವಿಗ್ರಹಕ್ಕೆ ಹಾನಿ ಮಾಡಲಾಗಿತ್ತು. ಈ ಬಗ್ಗೆ ಪ್ರತಿಭಟನೆಗಳು ನಡೆದಿದ್ದು, ಬಿಜೆಪಿ ನಾಯಕಿ ಮಾಧವಿ ಲತಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ರಾತ್ರಿ ಜಾರ್ಖಂಡ್‌ನ ಗರ್ವಾದಲ್ಲಿ ವಿಗ್ರಹ ವಿಸರ್ಜನೆ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ವಾಸ್ತವವಾಗಿ, ವಿಗ್ರಹ ವಿಸರ್ಜನೆಗೆ ಪೊಲೀಸರು ವಿವಾದಿತ ಮಾರ್ಗಕ್ಕೆ ಬ್ಯಾರಿಕೇಡ್ ಮಾಡಿದ್ದರು, ಅದೇ ಕಾರಣಕ್ಕೆ ನಂತರ ವಿವಾದ ಹುಟ್ಟಿಕೊಂಡಿತು.
ಇನ್ನು ಪಶ್ಚಿಮ ಬಂಗಾಳದಲ್ಲಿ, ಭಾನುವಾರ ರಾತ್ರಿಯೇ, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರು ಹೌರಾ ಜಿಲ್ಲೆಯ ಶ್ಯಾಮ್‌ಪುರ ಪ್ರದೇಶದ ದುರ್ಗಾ ಪಂದಳವನ್ನು ಧ್ವಂಸಗೊಳಿಸಿದ್ದಾರೆ, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೊಲ್ಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ವಿಗ್ರಹಕ್ಕೆ ಅವಮಾನ ಮಾಡಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಎರಡು ಬೈಕ್ ಮತ್ತು ಕಾರಿಗೆ ಹಾನಿಯಾಗಿದೆ.
ಹಿಂದೂಗಳ ಹತ್ಯೆಗೆ ದಾವಣಗರೆ ಗಣೇಶ ಉತ್ಸವದಲ್ಲಿ ಸಂಚು..!
ದೇಶಾದ್ಯಂತ ಹಿಂದೂ ಹಬ್ಬಗಳಲ್ಲಿ ಯಾಕೆ ಘರ್ಷಣೆಯಾಗುತ್ತಿದೆ? ಯಾಕೆ ಹಿಂದೂ ದೇವರು ಮೂರ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಹಿಂದೂಗಳ ಮೆರವಣಿಗೆಯಲ್ಲಿ ಯಾಕೆ ಕಲ್ಲು ತೂರಾಟ ನಡೆಸಲಾಗುತ್ತದೆ? ಈ ಬಗ್ಗೆ ಮಹನಾನ್ ನಾಯಕ ರಾಹುಲ್ ಗಾಂಧಿ ಯಾಕೆ ಮೌನವಾಗಿರುವುದು ಎಂದು ಹರಿಹಾಯ್ದರು.