ಜಮ್ಮು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ!
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಇಎಂಎಸ್‌ಸಿ ತಿಳಿಸಿದೆ.
ನವದೆಹಲಿ (ಜೂ.13): ದೆಹಲಿಯ ರಾಷ್ಟ್ರ ರಾಜಧಾನಿ ವಲಯ ಹಾಗೂ ಉತ್ತರ ಭಾರತದ ಹಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ.ಭೂಕಂಪವು 60 ಕಿಮೀ (37.28 ಮೈಲುಗಳು) ಆಳದಲ್ಲಿತ್ತು ಮತ್ತು ಭೂಕಂಪದ ಕೇಂದ್ರವು ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಉತ್ತರಕ್ಕೆ 99 ಕಿಮೀ ದೂರದಲ್ಲಿದೆ ಎಂದು ಇಎಂಎಸ್‌ಸಿ ತಿಳಿಸಿದೆ. ಮಧ್ಯಾಹ್ನ 1:30ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಇದುವರೆಗೆ ಯಾವುದೇ ಆಸ್ತಿ-ಪಾಸ್ತಿ ಹಾನಿ ಮತ್ತು ಪ್ರಾಣ ಹಾನಿ ವರದಿಯಾಗಿಲ್ಲ. ಮಂಗಳವಾರ ಮುಂಜಾನೆ, ಮ್ಯಾನ್ಮಾರ್‌ನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಮ್ಯಾನ್ಮಾರ್‌ನಲ್ಲಿ ಮಂಗಳವಾರ ಮುಂಜಾನೆ 2:53 ಕ್ಕೆ (IST) ಮತ್ತು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಹೇಳಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಎನ್‌ಸಿಎಸ್ "3.7 ತೀವ್ರತೆಯ ಭೂಕಂಪ, ಜೂನ್ 13ರಂದು ಸಂಭವಿಸಿದೆ, ಲ್ಯಾಟ್: 26.31 ಮತ್ತು ಉದ್ದ: 95.20, ಆಳ: 10 ಕಿಮೀ, ಸ್ಥಳ: ಮ್ಯಾನ್ಮಾರ್' ಎಂದು ಬರೆದಿದೆ.
ಇದಕ್ಕೂ ಮೊದಲು ಮೇ 31 ರಂದು ಮ್ಯಾನ್ಮಾರ್‌ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿತ್ತು. ರಿಕ್ಟರ್ ಮಾಪಕದಲ್ಲಿ 5.4 ರ ತೀವ್ರತೆಯ ಭೂಕಂಪವು ಇಂದು ಮಧ್ಯಾಹ್ನ 1:33ಕ್ಕೆ ಜಮ್ಮು ಕಾಶ್ಮೀರದ ದೋಡಾದಲ್ಲಿ ದಾಖಲಾಗಿದೆ.
ಭಯಾನಕವಾಗಿತ್ತು: "ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದರು. ಅಂಗಡಿಗಳಲ್ಲಿದ್ದ ಜನರು ಹೊರಗೆ ಓಡಿಬಂದಿದ್ದರು. ಇದು ಭಯಭೀತವಾಗಿತ್ತು. ಇದು ಕಳೆದ ವಾರದ ಕಂಪನಗಳಿಗಿಂತ ಹೆಚ್ಚು ತೀವ್ರವಾಗಿತ್ತು' ಎಂದು ಶ್ರೀನಗರದ ಸ್ಥಳೀಯರೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಕೆಲವು ಭಾಗಗಳಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾದ ಮಧ್ಯಮರೀತಿಯ ಭೂಕಂಪ ಸಂಭವಿಸಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ, ಜನ ಮನೆಗಳಿಂದ ಓಡಿ ಹೋಗು ಸುರಕ್ಷಿತ ನೆಲೆಗಳಲ್ಲಿ ನಿಂತಿದ್ದರು. ಪಾಕಿಸ್ತಾನದ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪವು ಸ್ಥಳೀಯವಾಗಿ ಮಧ್ಯಾಹ್ನ 1:04 ಕ್ಕೆ ಅನುಭವವಾಯಿತು, ಅದರ ಆಳವು 10 ಕಿಲೋಮೀಟರ್ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದುವು ಪೂರ್ವ ಕಾಶ್ಮೀರವಾಗಿದೆ ಎಂದು ಪಿಎಂಡಿ ಹೇಳಿದೆ, ಅದರ ರೇಖಾಂಶವು 75.97 E ಮತ್ತು ಅಕ್ಷಾಂಶ 33.32 N ನಲ್ಲಿದೆ. ಲಾಹೋರ್, ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ ಕಂಪನದ ಅನುಭವವಾಗಿದ್ದು, ಜನರು ತಮ್ಮ ಕಚೇರಿಗಳು ಹಾಗೂ ಮನೆಗಳಿಂದ ಓಡಿಬಂದಿದ್ದರು. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಯಾಗಿಲ್ಲ.
ಭೂಮಿಯಡಿ ಎವರೆಸ್ಟ್‌ಗಿಂತ 4 ಪಟ್ಟು ಎತ್ತರದ ಪರ್ವತ ಪತ್ತೆ: ಅಂಟಾರ್ಟಿಕಾದ ಆಳದಲ್ಲಿ ಭಾರಿ ಗಾತ್ರದ ಪರ್ವತಗಳು
ಪಂಜಾಬ್‌ನಲ್ಲಿ ಶಕರ್ ಗಢ್, ಚಿಚಾವತ್ನಿ, ಸಿಯಾಲ್‌ಕೋಟ್, ಮಂಡಿ ಬಹೌದ್ದೀನ್, ರಾವಲ್ಪಿಂಡಿ, ಝೇಲಂ, ಹಫೀಜಾಬಾದ್ ಮತ್ತು ಜಫರ್ವಾಲ್‌ನಲ್ಲಿ ಕಂಪನದ ಅನುಭವವಾಗಿದೆ. ಖೈಬರ್ ಪಖ್ತುಂಖ್ವಾದ ಅಬೋಟಾಬಾದ್, ಸ್ವಾಬಿ ಮತ್ತು ಸ್ವಾತ್ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ.
ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ, ಆತಂಕದಿಂದ ಹೊರಬಂದ ಜನ!
ಏತನ್ಮಧ್ಯೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಬಾಗ್, ಧೀರ್ ಕೋಟ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ಕಂಪನದ ಅನುಭವವಾಯಿತು. ಪಾಕಿಸ್ತಾನವು ಆಗಾಗ್ಗೆ ವಿವಿಧ ಪ್ರಮಾಣದ ಭೂಕಂಪಗಳಿಗೆ ಸಾಕ್ಷಿಯಾಗಿದೆ. 2005ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 74,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.