ಬಟ್ಟೆಗೆ ತಕ್ಕಂತೆ ಬದಲಾಗುತ್ತಿರುವ ಮಗುವಿನ ಕಣ್ಣಿನ ಬಣ್ಣ: ವಿಸ್ಮಯ ನೋಡಲು ಮನೆಗೆ ಬರುತ್ತಿರುವ ಜನ

Published : Mar 04, 2025, 03:12 PM ISTUpdated : Mar 04, 2025, 03:37 PM IST
ಬಟ್ಟೆಗೆ ತಕ್ಕಂತೆ ಬದಲಾಗುತ್ತಿರುವ ಮಗುವಿನ ಕಣ್ಣಿನ ಬಣ್ಣ: ವಿಸ್ಮಯ ನೋಡಲು ಮನೆಗೆ ಬರುತ್ತಿರುವ ಜನ

ಸಾರಾಂಶ

ಉತ್ತರ ಪ್ರದೇಶದ ಮಗುವೊಂದು ಧರಿಸಿದ ಬಟ್ಟೆಗೆ ತಕ್ಕಂತೆ ಕಣ್ಣಿನ ಬಣ್ಣ ಬದಲಾಯಿಸುತ್ತದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ವಿಸ್ಮಯವನ್ನು ನೋಡಲು ಜನರು ಆಗಮಿಸುತ್ತಿದ್ದಾರೆ, ಆದರೆ ತಜ್ಞರು ಇದು ಭ್ರಮೆ ಎಂದು ಹೇಳಿದ್ದಾರೆ.

ಕಣ್ಣಿನಲ್ಲಿ ಮನುಷ್ಯನ ಪ್ರತಿಬಿಂಬಗಳು ಕಾಣಿಸಿಕೊಳ್ಳುವುದು ಸಹ, ಇದು ಎಲ್ಲರ ಗಮನಕ್ಕೆ ಬರುತ್ತಿರುತ್ತದೆ. ಆದರೆ ಧರಿಸಿದ ಬಟ್ಟೆಗೆ ತಕ್ಕಂತೆ ಮಗುವಿನ ಕಣ್ಣಿನ ಬಣ್ಣ ಬದಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಮಗು ಧರಿಸಿದ ಬಟ್ಟೆಯ ಬಣ್ಣಕ್ಕೆ ಬದಲಾಗುವ ಕಣ್ಣು

ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದ ಒಂದೂವರೆ ವರ್ಷದ ಪುಟ್ಟ ಮಗುವೊಂದು ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣವಾಗಿದ್ದು, ಮಗುವಿನ ಕಣ್ಣಿನ ಬಣ್ಣ. ಮಗು ಬೆಕ್ಕಿನ ಕಣ್ಣನ್ನು ಹೊಂದಿದ್ದಾನೆ. ಆದರೆ ಮಗುವಿನ ಕಣ್ಣಿನ ಬಣ್ಣ ಆತ ಧರಿಸಿದ್ದ ಬಟ್ಟೆಗೆ ತಕ್ಕಂತೆ ಬದಲಾಗುತ್ತಿದೆ ಎಂದು ಭಾರಿ ಸುದ್ದಿಯಾಗುತ್ತಿದೆ. ಈ ಒಂದು ವರ್ಷ 4 ತಿಂಗಳ ಮಗು ಅರ್ಷ್‌ ಬೆಕ್ಕಿನಂತ ತಿಳಿ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿದ್ದಾನೆ. ಈತನ ಕಣ್ಣಿನ ಬಣ್ಣಗಳು ಈತ ಧರಿಸಿದ ಬಟ್ಟೆಗಳಿಗೆ ಮ್ಯಾಚ್ ಆಗುತ್ತಿವೆ ಎನ್ನಲಾಗುತ್ತಿದೆ.

ಕಣ್ಣಿನ ಬಣ್ಣ, ಆಕಾರ ವ್ಯಕ್ತಿಯ ಸ್ವಭಾವ ರಹಸ್ಯ ಹೇಳುತ್ತವೆ ಗೋತ್ತಾ..?

ಮಗುವನ್ನು ನೋಡಲು ಆಗಮಿಸುತ್ತಿರುವ ಜನ
ಈ ಸುದ್ದಿಯಿಂದಾಗಿ ಈ ವಿಸ್ಮಯವನ್ನು ನೋಡುವುದಕ್ಕೆ ಅಲ್ಲಿಗೆ ಸಮೀಪದ ಊರುಗಳಿಂದ ಕುತೂಹಲೀಗ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಈ ಪುಟ್ಟ ಬಾಲಕ ಈಗ ಆ ಊರಿನಲ್ಲಿ ಸೆಲೆಬ್ರಿಟಿಯಾಗಿದ್ದಾನೆ.  ಅರ್ಷ್‌ನ ತಾಯಿ ನಜ್ರೀನ್ ಮಗುವಿಗೆ ವಿವಿಧ ಬಣ್ಣಗಳ ಬಟ್ಟೆಯನ್ನು ತೊಡಿಸುತ್ತಿದ್ದಂತೆ ಕಣ್ಣಿನ ಬಣ್ಣ ಬದಲಾಗುತ್ತದೆ. ಮಗು ಧರಿಸಿದ ಬಟ್ಟೆಯ ಬಣ್ಣದ ಶೇಡ್ ಕಣ್ಣಿಗೂ ಬರುತ್ತದೆ. ಈತನ ಕಣ್ಣು ಗಾಢ ನೀಲಿ ಬಣ್ಣದಿಂದ ಹಸಿರು ಹಾಗೂ ಬೂದು ಬಣ್ಣಕ್ಕೆ ತಿರುಗುತ್ತದೆ. ಕಣ್ಣಿನ ಬಣ್ಣಗಳು ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಂಡು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಮಗುವಿನ ಸಂಬಂಧಿಕರು ಇದನ್ನು ಪ್ರಕೃತಿಯ ವಿಸ್ಮಯವೆಂದು ಕರೆಯುತ್ತಿದ್ದಾರೆ. ಜೊತೆಗೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಈ ಮಗುವನ್ನು ನೋಡುವುದಕ್ಕಾಗಿ ಪ್ರತಿದಿನವೂ ಅವರ ಮನೆಗೆ ಜಮಾಯಿಸುತ್ತಿದ್ದಾರೆ. ಹೀಗಾಗಿ ಪ್ರತಿದಿನವೂ ಮನೆಯಲ್ಲಿ ಜನ ತುಂಬಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಕಣ್ಣಿನ ತಜ್ಞ ಡಾ. ಅಖಿಲೇಶ್ ಅಗರ್ವಾಲ್  ಪ್ರತಿಕ್ರಿಯಿಸಿದ್ದು, ಇದಕ್ಕೆ ಸಾಕಷ್ಟು ತಾರ್ಕಿಕ ವಿವರಣೆಯನ್ನು ನೀಡಿದ್ದಾರೆ.  ಇದು ಕೇವಲ ಭ್ರಮೆ ಎಂದು ಅವರು ಹೇಳಿದ್ದಾರೆ. ಆದರೂ ಅರ್ಷ್‌ನ ಕಣ್ಣುಗಳು ಅವುಗಳ ಅದ್ಭುತ ಹಾಗೂ ವಿಭಿನ್ನವಾದ ಸೌಂದರ್ಯದಿಂದ ಅನೇಕರನ್ನು ಸೆಳೆಯುತ್ತಿದೆ. 

ಕಣ್ಣಿನ ಬಣ್ಣದಿಂದ ತಿಳಿಯುತ್ತೆ ಮನುಷ್ಯನ ರಹಸ್ಯ; ಅದು ಹೇಳುತ್ತೆ ಮನದ ಮಾತು..!

 

ನೆಟ್ಟಿಗರ ಪ್ರತಿಕ್ರಿಯೆ ಏನು? 
ಆದರೆ ಮಗುವಿನ ಕಣ್ಣಿನ ಬಣ್ಣ ಸಂಪೂರ್ಣವಾಗಿ ಬದಲಾಗುತ್ತಿದೆ ಎಂಬುದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ, ಸಹೋದರನ ಕಣ್ಣಿನ ಬಣ್ಣ ಆತ ಧರಿಸಿದ ಎಲ್ಲಾ ಬಟ್ಟೆಗೂ ಮ್ಯಾಚ್‌ ಆಗ್ತಿದೆ. ಆದರೆ ಆತ ಎಲ್ಲ ಬಟ್ಟೆ ನೀಲಿ ಬಣ್ಣದೇ ಧರಿಸಿದ್ದಾನೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ದಯವಿಟ್ಟು ಕೆಂಪು ಬಣ್ಣದ ಬಟ್ಟೆ ಧರಿಸಿ ತೋರಿಸಿ ಆಗ ನಿಜವಾಗಿಯೂ ಬಣ್ಣ ಬದಲಾಗಿದೆ ಎಂದು ನಂಬುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಮಗುವಿಗೆ ಬಿಳಿ ಬಣ್ಣದ ಬಟ್ಟೆ ತೊಡಿಸಿದರೆ ಎಲ್ಲರು ಭೂತ ಎಂದು ದೂರ ಓಡುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹಾಗಿದ್ರೆ ಮಗು ಬಟ್ಟೆನೇ ಹಾಕದಿದ್ರೆ ಟ್ರಾನ್ಸ್‌ಪರೆಂಟ್ ಬಣ್ಣಕ್ಕೆ ತಿರುಗುತ್ತದೆಯೇ ಕಣ್ಣು ಎಂದು ಮತ್ತೊಬ್ಬರು ಕೇಳಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕರು ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ