ಮೈಕ್ರೋವೇವ್‌ ಒವೆನ್‌ ಒಳಗಡೆ ಮಗುವಿನ ಶವ ಪತ್ತೆ

Suvarna News   | Asianet News
Published : Mar 22, 2022, 11:18 AM IST
ಮೈಕ್ರೋವೇವ್‌ ಒವೆನ್‌ ಒಳಗಡೆ ಮಗುವಿನ ಶವ ಪತ್ತೆ

ಸಾರಾಂಶ

ದೆಹಲಿಯಲ್ಲಿ ಎರಡು ತಿಂಗಳ ಹೆಣ್ಣು ಮಗು ಅನುಮಾನಾಸ್ಪದ ಸಾವು ಮೈಕ್ರೋವೇವ್ ಓವನ್‌ನಲ್ಲಿ ಮಗುವಿನ ಶವ ಪತ್ತೆ ದಕ್ಷಿಣ ದೆಹಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಘಟನೆ

ನವದೆಹಲಿ(ಮಾ.22): ದಕ್ಷಿಣ ದೆಹಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಸೋಮವಾರ ಎರಡು ತಿಂಗಳ ಹೆಣ್ಣು ಮಗುವಿನ ಶವ ಮೈಕ್ರೋವೇವ್ ಓವನ್‌ನಲ್ಲಿ ಪತ್ತೆಯಾಗಿದೆ. ಮಧ್ಯಾಹ್ನ 3.15ರ ಸುಮಾರಿಗೆ ಮಗುವಿನ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಾಧ್ಯವಿರುವ ಎಲ್ಲ ಕೋನಗಳಿಂದ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಬೆನಿಟಾ ಮೇರಿ ಜೈಕರ್ (Benita Mary Jaiker) ಹೇಳಿದ್ದಾರೆ. ಶಿಶುವಿನ ಪೋಷಕರಾದ ಗುಲ್ಶನ್ ಕೌಶಿಕ್ (Gulshan Kaushik) ಮತ್ತು ಡಿಂಪಲ್ ಕೌಶಿಕ್ (Dimple Kaushik) ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಮುಖ ಶಂಕಿತೆಯಾಗಿರುವ ಮಗುವಿನ ತಾಯಿ ಹೆಣ್ಣು ಮಗುವಿನ ಜನನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಮಗು ಅನನ್ಯಾ (Ananya) ಈ ವರ್ಷದ ಜನವರಿಯಲ್ಲಿ ಜನಿಸಿದರು ಮತ್ತು ಅಂದಿನಿಂದ ಮಗುವಿನತಾಯಿ ಡಿಂಪಲ್‌ ಕೌಶಿಕ್ ಅಸಮಾಧಾನಗೊಂಡಿದ್ದರು. ಅವರು ಈ ವಿಷಯದ ಬಗ್ಗೆ ತಮ್ಮ ಪತಿಯೊಂದಿಗೆ ಜಗಳವಾಡಿದರು ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಮಗು ಸಾವು

ಗುಲ್ಷನ್‌ ಹಾಗೂ ಡಿಂಪಲ್ ದಂಪತಿಗೆ ನಾಲ್ಕು ವರ್ಷದ ಮಗನೂ ಇದ್ದಾನೆ. ಮಗು ಅನನ್ಯ ಸಾವಿನ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಈ ವೇಳೆ ಡಿಂಪಲ್‌ ಕೌಶಿಕ್ ಮನೆಯೊಳಗೆ ಲಾಕ್‌ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಅತ್ತೆ ಎಚ್ಚರಿಸಿದಾಗ ನಾವು ಗಾಜು ಒಡೆದು ಕೋಣೆಗೆ ಪ್ರವೇಶಿಸಿದೆವು. ಈ ವೇಳೆ ಮಹಿಳೆ ತನ್ನ ಮಗನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಎರಡು ತಿಂಗಳ ಮಗು ಅನನ್ಯಾ ಕಾಣೆಯಾಗಿರುವುದು ತಿಳಿದು ಬಂತು ಎಂದು ಅವರು ಹೇಳಿದರು.

ಅನನ್ಯಾಳ ಅಜ್ಜಿ ಮತ್ತು ಕೆಲವು ನೆರೆಹೊರೆಯವರು ನಂತರ ಮನೆಯಾದ್ಯಂತ ನೋಡಿದಾಗ ಮೈಕ್ರೋವೇವ್ ಓವನ್‌ನಲ್ಲಿ (microwave oven) ಶಿಶು ಪತ್ತೆಯಾಗಿದೆ. ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ಈ  ಮೈಕ್ರೋವೇವ್ ಓವನ್‌ ಇಡಲಾಗಿತ್ತು. ಘಟನೆಯ ಸಮಯದಲ್ಲಿ, ಮಗುವಿನ ತಂದೆ ಗುಲ್ಷನ್ ಕೌಶಿಕ್‌ ಹತ್ತಿರದ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಹರಪನಹಳ್ಳಿ: ಗೋಲಿ ನುಂಗಿ 14 ತಿಂಗಳ ಮಗು ಸಾವು

ಇತ್ತೀಚೆಗೆ ತುಮಕೂರಿನ ಕೊರಟಗೆರೆಯಲ್ಲಿ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಹೆಣ್ಣುಶಿಶು ಶವ ಪತ್ತೆಯಾಗಿತ್ತು. ಆಸ್ಪತ್ರೆಯ ಶೌಚಾಲಯವನ್ನು  ಸ್ವಚ್ಛಗೊಳಿಸಲು ಸಿಬ್ಬಂದಿ ಹೋದಾಗ ನವಜಾತ ಶಿಶು(Baby) ಶವ ಅಲ್ಲಿ ಪತ್ತೆಯಾಗಿತ್ತು. 

ಇದಲ್ಲದೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗೂಡ್ಸ್‌ ಆಟೋ ಚಕ್ರ ಹರಿದು ಐದು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಎರಡು ದಿನಗಳ ಹಿಂದಷ್ಟೇ ನಡೆದಿತ್ತು. ಕಾಮಾಕ್ಷಿಪಾಳ್ಯ ಕಾವೇರಿಪುರದ ನಿವಾಸಿ ಭುವನಾ (5) ಮೃತ ಬಾಲಕಿ. ಮಾ.17ರಂದು ಬೆಳಗ್ಗೆ 10.30ರ ಸುಮಾರಿಗೆ ಕಾವೇರಿಪುರದ 2ನೇ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಭುವನಾ ಹಾಗೂ ಅವರ ತಾಯಿ ಅನಿತಾ ಅವರು ರಸ್ತೆ ಬದಿ ಸೈಕಲ್‌ನಲ್ಲಿ ಮಾರಾಟ ಮಾಡುವ ಎಳೆನೀರು ಕುಡಿಯುತ್ತಿದ್ದರು.

ಈ ವೇಳೆ ಗ್ಯಾಸ್‌ ಸಿಲಿಂಡರ್‌ ತುಂಬಿದ್ದ ಆಟೋವೊಂದು ಪಟ್ಟೇಗಾರಪಾಳ್ಯ ಕಡೆಯಿಂದ ಅದೇ ಮಾರ್ಗದಲ್ಲಿ ಬಂದಿದೆ. ಈ ವೇಳೆ ಆಟೋ ಚಾಲಕ ಆಟೋ ನಿಲ್ಲಿಸಿಕೊಂಡು ಮಹಿಳೆಯೊಬ್ಬರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾನೆ. ಈ ವೇಳೆ ಆಟೋ ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೆ ಆಟೋದಿಂದ ಕೆಳಗೆ ಇಳಿದಿದ್ದಾನೆ. ರಸ್ತೆ ಕೊಂಚ ಇಳಿಜಾರು ಇದ್ದಿದ್ದರಿಂದ ಆಟೋ ಮುಂದಕ್ಕೆ ಚಲಿಸಿದೆ. ಈ ವೇಳೆ ಎದುರಿಗೇ ನಿಂತಿದ್ದ ಬಾಲಕಿ ಭುವನಾ ಹಾಗೂ ಅನಿತಾ ಅವರಿಗೆ ಆಟೋ ಡಿಕ್ಕಿಯಾಗಿ ಈ ದುರಂತ ಸಂಭವಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌