ಸದಾ ಕಾವಿ ಬಟ್ಟೆ ಧರಿಸೋ ಯೋಗ ಗುರು ಬಾಬಾ ರಾಮ್ ದೇವ್ ಐಷಾರಾಮಿ ಬಂಗಲೆ ಹೇಗಿದೆ ನೋಡಿ

Published : Dec 26, 2024, 09:14 PM ISTUpdated : Dec 27, 2024, 08:19 AM IST
ಸದಾ ಕಾವಿ ಬಟ್ಟೆ ಧರಿಸೋ ಯೋಗ ಗುರು ಬಾಬಾ ರಾಮ್ ದೇವ್ ಐಷಾರಾಮಿ ಬಂಗಲೆ ಹೇಗಿದೆ ನೋಡಿ

ಸಾರಾಂಶ

ಬಾಬಾ ರಾಮದೇವ್ ಅವರ ಮುಂಬೈನ ವರ್ಲಿಯಲ್ಲಿರುವ ಐಷಾರಾಮಿ ಮನೆ ಸುಮಾರು 4 ಕೋಟಿ ರೂ. ಮೌಲ್ಯದ್ದಾಗಿದೆ.  ಐಷಾರಾಮಿ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ಕನ್ನಡಿ ಗೋಡೆಗಳು ಮನೆಯ ಸೌಂದರ್ಯವನ್ನು ಹೆಚ್ಚಿಸಿವೆ. ಯೂಟ್ಯೂಬರ್ ಕಾಮಿಯಾ ಜಾನಿ ಇತ್ತೀಚೆಗೆ ಈ ಮನೆಯಲ್ಲಿ ರಾಮದೇವ್ ಅವರ ಸಂದರ್ಶನ ಮಾಡಿದ್ದಾರೆ.

ಯೋಗ ಗುರು ಬಾಬಾ ರಾಮದೇವ್ (Yoga Guru Baba Ramdev) ಅವರ ಜೀವನಶೈಲಿ ದೊಡ್ಡ ಕಾರ್ಪೊರೇಟ್ಗಿಂತ ಕಡಿಮೆಯಿಲ್ಲ. ಮುಂಬೈನಲ್ಲಿ ಅವರ ಐಷಾರಾಮಿ ಮನೆಯನ್ನು ನೋಡಿದ್ರೆ ನೀವು ಅಚ್ಚರಿ ಪಡೋದು ಖಂಡಿತಾ. ಬಹುಶಃ ಜನರು ಈ ಐಷಾರಾಮಿ ಮನೆಯ (Luxury look) ಲುಕ್ ಇದೇ ಫಸ್ಟ್ ಟೈಮ್ ನೋಡುವಿರಿ. ಸಮುದ್ರ ತೀರದಲ್ಲಿ ನಿರ್ಮಿಸಲಾದ ಈ ಮನೆ ಲಕ್ಸುರಿಗೆ ಹೆಸರುವಾಸಿಯಾಗಿರೋದಲ್ಲದೇ, ಮನೆಯ ಅಲಂಕಾರಕ್ಕಾಗಿ ಎಕ್ಸ್’ಪೆನ್ಸಿವ್ ವಸ್ತುಗಳನ್ನು ಬಳಸಲಾಗಿದೆ. 

90 ರ ದಶಕದಲ್ಲಿ ಹರಿದ್ವಾರದಲ್ಲಿ ಸ್ಕೂಟರ್ನಲ್ಲಿ ಮನೆ ಮನೆಗೆ ಹೋಗಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ರಾಮ್ ದೇವ್ ಬಾಬಾ ಅವರಿಗೆ ಈಗ ಯಾವುದೇ ಪರಿಚಯದ ಅಗತ್ಯವಿಲ್ಲ. ಯೋಗ ಗುರುವಾಗಿ ಯಶಸ್ಸನ್ನು ಸಾಧಿಸುವುದರ ಹೊರತಾಗಿ, ಅವರು ಐಷಾರಾಮಿ ಜೀವನವನ್ನು ನಡೆಸುವ ಜನರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕೇಸರಿ ಬಟ್ಟೆಗಳು, ಪರ್ಸನಲ್ ಕಮಾಂಡೋಗಳನ್ನು (personal commando) ಸೆಕ್ಯೂರಿಟಿಯಲ್ಲಿ ಹೊಂದಿರುವ ಬಾಬಾ ಬಳಿ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅವರ ಐಷಾರಾಮಿ ಮನೆ ಬಾಲಿವುಡ್ ಸೆಲೆಬ್ರಿಟಿಗಳ (bollywood celebreties) ಮನೆಗಿಂತ ಕಡಿಮೆಯಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಬಾಬಾ ರಾಮದೇವ್ ಮುಂಬೈನ ವರ್ಲಿಯಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದನ್ನು 2006 ರಲ್ಲಿ ಖರೀದಿಸಲಾಯಿತು, ಇದರ ಬೆಲೆ ಸುಮಾರು 4 ಕೋಟಿ ರೂ ಅನ್ನೋದು ತಿಳಿದು ಬಂದಿದೆ. 

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಇನ್’ಫ್ಲುಯ್ಯೆನ್ಸರ್ ಮತ್ತು ಪ್ರಸಿದ್ಧ ಯೂಟ್ಯೂಬರ್ (youtuber) ಕಾಮಿಯಾ ಜಾನಿ ರಾಮ್ ದೇವ್ ಅವರ ಸಂದರ್ಶನವನ್ನು ಅವರ ಮನೆಯಲ್ಲಿಯೇ ಮಾಡಿದ್ದು, ಈ ವಿಡಿಯೋದಲ್ಲಿ ಬಾಬಾ ರಾಮ್ದೇವ್ ಅವರ ಐಷಾರಾಮಿ ಮನೆಯ ಒಂದು ನೋಟವನ್ನು ಸಹ ಕಾಣಬಹುದು. ಬಾಬಾ ರಾಮದೇವ್ ಅವರ ಸಾದ ಲುಕ್ ಹಾಗೂ ಅವರ ಐಷಾರಾಮಿ ಮನೆಯ ನೋಟವನ್ನು ನೋಡಿದ್ರೆ ಶಾಕ್ ಆಗೋದು ಖಚಿತಾ. 

 ಮುಂಬೈನಲ್ಲಿರುವ ಬಾಬಾ ರಾಮ್ ದೇವ್ ಮನೆಯ ಮೌಲ್ಯವೂ ತುಂಬಾನೆ ದುಬಾರಿ ಏಕೆಂದರೆ ಅದು ವರ್ಲಿಯಲ್ಲಿದೆ. ಈ ಪ್ರದೇಶವು ಸೀ ಫೇಸಿಂಗ್ ಮನೆಗಳಿಗೆ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಅಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗಳ ಮನೆ ಅಂದರೆ ಇಶಾ ಅಂಬಾನಿಯ ಮನೆ ಕೂಡ ಇದೆ. ಇದಲ್ಲದೆ, ಬಾಲಿವುಡ್ ತಾರೆಯರು ಮತ್ತು ಪ್ರಸಿದ್ಧ ಕ್ರಿಕೆಟಿಗರು ಮುಂಬೈನ ದಕ್ಷಿಣ ಬಾಂಬೆ ಪ್ರದೇಶಗಳಲ್ಲಿ ಒಂದಾದ ವರ್ಲಿಯಲ್ಲಿ ವಾಸಿಸುತ್ತಿದ್ದಾರೆ.  

ಬಾಬಾ ರಾಮದೇವ್ ಅವರ ಐಷಾರಾಮಿ ಮನೆ
ಕಾಮಿಯಾ ಜಾನಿ (Kamiya Jani)ಅವರ ಸಂದರ್ಶನದಲ್ಲಿ ಬಾಬಾ ರಾಮ್ದೇವ್ ಅವರ ಐಷಾರಾಮಿ ಮನೆಯ ಮೂಲೆ ಮೂಲೆಯನ್ನು ತೋರಿಸಲಾಗಿದೆ. ಬಾಲ್ಕನಿ ಬಳಿ ಅವರ ಲಿವಿಂಗ್ ರೂಮ್ ಇರೋದರಿಂದ ಕ್ಲಾಸಿ ವೈಬ್ರೇಶನ್ ನೀಡುತ್ತೆ.  ಮನೆಯ ಒಳಾಂಗಣಕ್ಕೆ ಲೈಟ್ ಶೇಡ್ ನೀಡಲಾಗಿದೆ.  ಒಳಗಡೆ ಸಾಫ್ಟ್ ಆಗಿರುವ ಸುಂದರ ಸೋಫಾಗಳಿವೆ, ಇವು ಬೆಳ್ಳಿ ಮತ್ತು ಆಫ್-ವೈಟ್ ಬಣ್ಣಗಳಲ್ಲಿವೆ. ಲಿವಿಂಗ್ ರೂಮ್ ನಲ್ಲಿಯೇ ಕಪ್ಪು ವೈಂಡಿಂಗ್ ಮೆಟ್ಟಿಲುಗಳಿವೆ. ಬಾಲ್ಕನಿ ಬಳಿಯ ಗೋಡೆಗಳು ಕನ್ನಡಿಗಳಿಂದ ಮಾಡಲ್ಪಟ್ಟಿವೆ,  ಬಾಲ್ಕನಿ ಮತ್ತು ಮುಂಬೈನ ಸುಂದರ ನೋಟವು ಲಿವಿಂಗ್ ರೂಮ್ ನಿಂದಲೇ ಗೋಚರಿಸುತ್ತದೆ.

 ಮನೆಯ ಅಲಂಕಾರವು ಅದ್ಭುತವಾಗಿದೆ
ಬಾಬಾ ರಾಮದೇವ್ ಅವರ ಮನೆಯಲ್ಲಿ, ಐಷಾರಾಮಿ ಶೋಪೀಸ್ ಅನ್ನು ಅವರ ಪ್ರೀತಿಪಾತ್ರರ ಚಿತ್ರಗಳೊಂದಿಗೆ ಬಹಳ ಸುಂದರವಾಗಿ ಅಲಂಕರಿಸಲಾಗಿದೆ. ಒಂದು ಗೋಡೆಯ ಮೇಲೆ ಕುಟುಂಬ ಮತ್ತು ಗುರುಗಳ ಫೋಟೋ ಮತ್ತು ಇನ್ನೊಂದು ಗೋಡೆಯ ಮೇಲೆ ಹೂವಿನ ವರ್ಣಚಿತ್ರವಿದೆ. ಬೆಳ್ಳಿಯ ಕುದುರೆ ಮತ್ತು ದೊಡ್ಡ ಶಾಂಡ್ಲಿಯರ್ ಅನ್ನು ಶೋಪೀಸ್ ಗಳಾಗಿ ಇರಿಸಲಾಗಿದೆ. ಇದಲ್ಲದೆ, ಬಾಬಾ ಅವರ ಮನೆಯಲ್ಲಿ ದೊಡ್ಡ ಊಟದ ಮೇಜು ಇದೆ, ಅದರ ಕುರ್ಚಿಗಳು ಚಿನ್ನದ ಬಣ್ಣದ್ದಾಗಿವೆ ಮತ್ತು ಮನೆ ರಾಜಮನೆತನದಂತೆ ಕಾಣುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ