
ನವದೆಹಲಿ(ಜೂ.19): ಭಾರತ ಸರ್ಕಾರ ರೂಪಿಸಿದ ಮಾಹಿತಿ ತಂತ್ರಜ್ಞಾನದ ಕಾನೂನು ಜಾರಿಗೊಳಿಸದ ಟ್ವೀಟರ್ ಅಧಿಕಾರಿಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ವಿಚಾರಣೆಗೊಳಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಮಾಧ್ಯಮ ದುರ್ಬಳಕೆ ತಡೆ ಹೇಗೆ ಎಂದು ಪ್ರಶ್ನಿಸಲು ಟ್ವೀಟರ್‌ಗೆ ಸ್ಥಾಯಿ ಸಮಿತಿ ಬುಲಾವ್ ನಿಡಿತ್ತು. ಸಭೆಗೆ ಹಾಜರಾಗಿದ್ದ ಟ್ವೀಟರ್ ಭಾರತದ ಪಬ್ಲಿಕ್ ಪಾಲಿಸಿ ವ್ಯವಸ್ಥಾಪಕ ಶಗುಫ್ತಾ ಕಮ್ರಾನ್ ಮತ್ತು ವಕೀಲ ಆಯುಷಿ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಮಿತಿ ಸದಸ್ಯರು, ‘ನಿಮ್ಮ ಪಾಲಿಸಿಗಳು ದೇಶದ ಕಾನೂನುಗಳಿಗಿಂತ ಮಿಗಿಲು ಎಂದು ಅರ್ಥೈಸಿಕೊಂಡಿದ್ದೀರಾ? ಈ ನೆಲದ ಶ್ರೇಷ್ಠವಾದ ಕಾನೂನುಗಳನ್ನು ಪಾಲಿಸಲೇಬೇಕು’ ಎಂದು ಕಿಡಿಕಾರಿದರು.
‘ದೇಶದ ಕಾನೂನುಗಳನ್ನು ಪಾಲಿಸದ ಟ್ವೀಟರ್ ತನ್ನ ದಾರ್ಷ್ಟ್ಯತನ ಮುಂದುವರಿಸಿದರೆ ಭಾರೀ ದಂಡ ವಿಧಿಸಬೇಕು’ ಎಂದು ಕೆಲವು ಸದಸ್ಯರು ಆಗ್ರಹಿಸಿದರು ಎಂದು ತಿಳಿದುಬಂದಿದೆ.
ಕೋವಿಡ್ ಕಾರಣಕ್ಕೆ ಪಾಲನೆ ವಿಳಂಬ: ಟ್ವೀಟರ್
ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಟ್ವೀಟರ್ ಅಧೀಕಾರಿಗಳು, ‘ನಾವು ಭಾರತ ಸರ್ಕಾರ ರೂಪಿಸಿದ ಕಾನೂನುಗಳ ಜಾರಿಗೆ ಬದ್ಧರಾಗಿದ್ದೇವೆ. ಆದರೆ ಕೋವಿಡ್ ಕಾರಣಕ್ಕೆ ಅನುಸರಣಾ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ಕುಂದುಕೊರತೆಗಳ ನಿರ್ವಹಣೆಗೆ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ವಿಳಂಬವಾಗಿದೆ’ ಎಂದು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ