
ವಾಷಿಂಗ್ಟನ್ (ಜೂ.24): ಇರಾನ್‌ನ ಫೊರ್ಡೋ ಸೇರಿದಂತೆ 3 ಅಣು ಕ್ರೇಂದ್ರಗಳ ಮೇಲಿನ ದಾಳಿಗೆ ಅಮೆರಿಕದಿಂದ ಹೊರಟಿದ್ದ ಬಿ-2 ಸ್ಟೆಲ್ತ್ ಬಾಂಬರ್‌ಗಳಲ್ಲಿ, ಆಹಾರ, ಆರಾಮದಿಂದ ಹಿಡಿದು ಶೌಚದವರೆಗೆ ಪೈಲಟ್‌ಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದವು ಎಂದು ತಿಳಿದುಬಂದಿದೆ.
ಅಮೆರಿಕದ ಮಿಸೌರಿ ನೆಲೆಯಿಂದ ಇರಾನ್‌ನತ್ತ ರವಾನೆಯಾಗಿ, ಮತ್ತೆ ಮರಳಬೇಕಿದ್ದ 14 ಬಾಂಬರ್‌ಗಳು ನಿರಂತರ 37 ತಾಸುಗಳ ಕಾಲ ಹಾರಾಟ ನಡೆಸಬೇಕಿದ್ದ ಕಾರಣ, ಆ ಅವಧಿಯಲ್ಲಿ ಪೈಲಟ್‌ಗಳ ಅನುಕೂಲಕ್ಕಾಗಿ ವಿಮಾನಗಳೊಳಗೇ ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್, ಅದನ್ನು ಶೇಖರಿಸಿಡಲು ರೆಫ್ರಿಜರೇಟರ್, ವಿಶ್ರಾಂತಿ ಕೊಠಡಿಗಳು, ಶೌಚಾಲಯ ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿತ್ತು. ಅಂತೆಯೇ, ಹಾರಾಟದ ವೇಳೆಯೇ ಹಲವು ಬಾರಿ ಇವುಗಳಿಗೆ ಇಂಧನವನ್ನೂ ಮಾರ್ಗಮಧ್ಯವೇ ತುಂಬಿಸಲಾಗಿತ್ತು.
ಬಿ-2ಗಳ ಸುದೀರ್ಘ ಕಾರ್ಯಾಚರಣೆ:
ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯನ್ನು, ಇದುವರೆಗಿನ ಬಿ-2 ಬಾಂಬರ್‌ಗಳ ಸುದೀರ್ಘಕಾಪರೇಷನ್ ಎನ್ನಲಾಗಿದೆ. ಈ ಮೊದಲು, 2001ರ 9/11 ಉಗ್ರದಾಳಿಯ ಬಳಿಕ ಇವುಗಳನ್ನು ಆಫ್ಘಾನಿಸ್ತಾನದ ವಿರುದ್ಧ ಬಳಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ