
ನವದೆಹಲಿ (ನ. 10): ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯವು, ಇದಕ್ಕಾಗಿ ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ್ದ ಉತ್ಖನನದ ವರದಿಯನ್ನೇ ಪ್ರಮುಖವಾಗಿ ಪರಿಗಣಿಸಿದೆ. ‘ಬಾಬ್ರಿ ಮಸೀದಿಯು ಖಾಲಿ ಜಮೀನಿನಲ್ಲಿ ನಿರ್ಮಾಣವಾದದ್ದಲ್ಲ.
ವಿವಾದಿತ ಸ್ಥಳ ರಾಮಮಂದಿರಕ್ಕೆ ಸಿಕ್ಕಿದ್ದು ಹೇಗೆ?
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ನಡೆಸಿದ ಉತ್ಖನನದ ವೇಳೆ ಆ ಸ್ಥಳದಲ್ಲಿ ಹಿಂದೂ ಕಟ್ಟಡ ಸಂರಚನೆ ಲಭಿಸಿತ್ತು’ ಎಂದು ಕೋರ್ಟ್ ಹೇಳಿದೆ. ‘ಎಸ್‌ಎಐ ನಡೆಸಿದ ಉತ್ಖನನದ ವೇಳೆ ಅಲ್ಲಿ ಹಿಂದೂ ಕಟ್ಟಡವೊಂದು ಇದ್ದರ ಕುರುಹು ಲಭ್ಯವಾಯಿತು.
1856 ರ ಮುನ್ನ ಈ ಸ್ಥಳದ ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹಿಂದೂಗಳಿಗೆ ಕಟ್ಟಡದ (ಬಾಬ್ರಿ ಮಸೀದಿ) ಒಳಗೆ ಯಾವಾಗ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಲಿಲ್ಲವೋ ಆಗ ಅವರು ಅದರ ಹೊರಗಡೆ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದರು’ ಎಂದು ನ್ಯಾಯಪೀಠ ನುಡಿದಿದೆ.
ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?
ಆದರೆ ಇದೇ ವೇಳೆ, ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂಬುದಕ್ಕೂ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ನ್ಯಾ| ರಂಜನ್ ಗೊಗೋಯ್ ಅವರ ನೇತೃತ್ವದ ಪೀಠ ಹೇಳಿದೆ. 2 ಬಾರಿ ಎಎಸ್‌ಐ ಉತ್ಖನನ: ಎಎಸ್‌ಐ ಅಲಹಾಬಾದ್ ಹೈಕೋರ್ಟ್ ಆದೇಶದ ಮೇಲೆ ಅಯೋಧ್ಯೆಯ ವಿವಾದಿತ ಭೂಮಿಯ ಉತ್ಖನನ ನಡೆಸಿತ್ತು. ೨ ಬಾರಿ (೧೯೭೬-೭೭ ಹಾಗೂ ೨೦೦೩) ಉತ್ಖನನ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ