
ಮಧ್ಯಪ್ರದೇಶ (ಜ.20) : ಜನೆವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶಾದ್ಯಂತ ಕೋಟ್ಯಂತರ ಭಕ್ತರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಅನೇಕರು ಭಗವಾನ್ ರಾಮನ ಮೇಲಿನ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ಕೆಲವರು ಸಾವಿರಾರು ಕಿಮೀ ದೂರದ ಅಯೋಧ್ಯೆಗೆ ಬರಿಗಾಲಲ್ಲಿ ಪಾದಯಾತ್ರೆ ಹೊರಟು ನಿಂತರೆ, ಇನ್ನೂ ಹಲವರು ಸೈಕಲ್ ಏರಿ ಹೊರಟಿದ್ದಾರೆ. ಆದರೆ ಮಧ್ಯಪ್ರದೇಶದ ಸ್ವಾಮೀಜಿಯೊಬ್ಬರು ತಲೆಗೂದಲಿಗೆ ಹಗ್ಗ ಕಟ್ಟಿ ರಾಮರಥವನ್ನು ಅಯೋಧ್ಯೆವರೆಗೆ ಎಳೆದು ಎಲ್ಲೆಡೆ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದ ದಾಮೋಹ್‌ನ ಸ್ವಾಮೀಜಿ ಬದ್ರಿ ಎಂಬುವವರು ತಮ್ಮ ಕೂದಲಿಗೆ ರಾಮರಥವನ್ನು ಕಟ್ಟಿ ಮಧ್ಯಪ್ರದೇಶದ ದಾಮೋಹ್‌ನಿಂದ ಅಯೋಧ್ಯೆ ರಾಮಮಂದಿರದವರೆಗೆ ಅಂದರೆ ಸುಮಾರು 566 ಕಿಮೀ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಜನವರಿ 22 ರಂದು ರಾಮ್ ಲಲ್ಲಾನ ಮಹಾ ಪ್ರಾಣ ಪ್ರತಿಷ್ಠಾ ಸಮಾರಂಭಕದಂದು ರಾಮಮಂದಿರ ಮುಟ್ಟು ಸಂಕಲ್ಪ ತೊಟ್ಟು ಪ್ರಯಾಣ ಪ್ರಾರಂಭಿಸಿದ್ದಾರೆ.
ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ಸಿನ ಪುರಾತನ ದ್ವಂದ್ವ; ನೆಹರುವಿನಿಂದ ಸೋನಿಯಾ ಗಾಂಧಿವರೆಗೆ ಸ್ಪಷ್ಟ ನಿಲುವಿಲ್ಲ!
ದಿನಕ್ಕೆ 50ಕಿಮೀ ಪ್ರಯಾಣ: ಮಧ್ಯಪ್ರದೇಶದಿಂದ ಅಯೋಧ್ಯಾ ರಾಮಮಂದಿರವರೆಗೆ 566 ಕಿಮೀ ದೂರದ ಪ್ರಯಾಣವನ್ನು ಜನೆವರಿ 11ರಂದು ಆರಂಭಿಸಿರುವ ಸ್ವಾಮೀಜಿ, ದಿನಕ್ಕೆ 50ಕಿಮೀ ನಂತೆ ರಾಮರಥವನ್ನು ತಲೆಗೂದಲಿಗೆ ಕಟ್ಟಿ ಎಳೆಯುತ್ತ ಕ್ರಮಿಸಿದ್ದಾರೆ. ಶುಕ್ರವಾರದ ವೇಳೆಗೆ ಉತ್ತರ ಪ್ರದೇಶದ ರಾಯ್‌ಬರೇಲಿ, ಫತೇಪುರ ತಲುಪಿರುವ ಸ್ವಾಜೀಜಿ ಅಲ್ಲಿ ಕೆಲವೊತ್ತು ವಿಶ್ರಾಂತಿ ಪಡೆದುಕೊಂಡಿದ್ದಾರೆ ಈ ವೇಳೆ ಅಲ್ಲಿನ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಬೆಹ್ತಾ ಛೇದಕದಲ್ಲಿರುವ ಹನುಮಾನ್ ದೇವಾಲಯದ ಸಂಕೀರ್ಣದಿಂದ ಮತ್ತೆ ಅಯೋಧ್ಯೆಯತ್ತ ಪ್ರಯಾಣ ಪ್ರಾರಂಭಿಸಿರುವ ಸ್ವಾಮೀಜಿ.
ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರವನ್ನು ನಿರ್ಮಿಸಿ ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಿದರೆ ರಾಮನ ರಥವನ್ನು ತನ್ನ ಜಡೆ ಕೂದಲಿಗೆ ಕಟ್ಟಿಕೊಂಡು ಅಯೋಧ್ಯೆಗೆ ಹೋಗುವುದಾಗಿ 1992 ರಲ್ಲೇ ಪ್ರತಿಜ್ಞೆ ಮಾಡಿದ್ದ ಸ್ವಾಮೀಜಿ. ಅದರಂತೆಯೇ ಇಂದು ಇನ್ನೆರಡು ದಿನಗಳಲ್ಲಿ ಅಯೋಧ್ಯೆ ಭವ್ಯ ರಾಮಮಂದಿರ ಉದ್ಘಾಟನೆಯಾಗಲಿರುವುದರಿಂದ ರಾಮರಥ ಕೂದಲಿನಿಂದ ಎಳೆದುಕೊಂಡು ಪ್ರಯಾಣ ಆರಂಭಿಸಿರುವ ಸ್ವಾಮೀಜಿ.
ಅಯೋಧ್ಯೆ ರಾಮಮಂದಿರ ಪೂರ್ಣವಾಗಿಲ್ಲ ಎನ್ನುವವರಿಗೆ ಪರಿಪೂರ್ಣ ಜ್ಞಾನವಿಲ್ಲ: ಸಂಸದ ಪ್ರತಾಪ್ ಸಿಂಹ ಕಿಡಿ
ಜನವರಿ 22 ರಂದು ಪ್ರಭು ಶ್ರೀರಾಮನ‘ಪ್ರಾಣ ಪ್ರತಿಷ್ಠಾನ’ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಮುಖ ಧಾರ್ಮಿಕ ವಿಧಿಗಳನ್ನು ನಡೆಸಲಿದೆ. ಸಮಾರಂಭಕ್ಕೆ ಹಲವಾರು ಸೆಲೆಬ್ರಿಟಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಸಹ ಆಹ್ವಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ