ಯುಪಿ: ಜೀವಕ್ಕೆ ಬೆದರಿಕೆ ಇದೆ ಅಂದಿದ್ದ ಪತ್ರಕರ್ತ 2 ದಿನಕ್ಕೇ ಸಾವು!

Published : Jun 15, 2021, 08:33 AM ISTUpdated : Jun 15, 2021, 10:08 AM IST
ಯುಪಿ: ಜೀವಕ್ಕೆ ಬೆದರಿಕೆ ಇದೆ ಅಂದಿದ್ದ ಪತ್ರಕರ್ತ 2 ದಿನಕ್ಕೇ ಸಾವು!

ಸಾರಾಂಶ

* ಮದ್ಯ ಮಾಫಿಯಾದಿಂದ ತನ್ನ ಜೀವಕ್ಕೆ ಬೆದರಿಕೆಯಿದೆ ಎಂದು ಪೊಲೀಸರಿಗೆ ದೂರು * ಜೀವಕ್ಕೆ ಬೆದರಿಕೆ ಇದೆ ಅಂದಿದ್ದ ಪತ್ರಕರ್ತ 2 ದಿನಕ್ಕೇ ಸಾವು * ಪ್ರತಿಪಕ್ಷಗಳ ಪ್ರಕಾರ ಇದು ಕೊಲೆ: ಯೋಗಿ ಸರ್ಕಾರದ ವಿರುದ್ಧ ಕಿಡಿ

ಲಖನೌ(ಜೂ.15): ಮದ್ಯ ಮಾಫಿಯಾದಿಂದ ತನ್ನ ಜೀವಕ್ಕೆ ಬೆದರಿಕೆಯಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ ಪತ್ರಕರ್ತನೊಬ್ಬ ಎರಡೇ ದಿನದಲ್ಲಿ ‘ಅಪಘಾತದಲ್ಲಿ’ ಮೃತಪಟ್ಟಘಟನೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ನಡೆದಿದೆ

ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ವಕ್ತಾರರು ಉತ್ತರ ಪ್ರದೇಶವು ಬಿಜೆಪಿ ಆಳ್ವಿಕೆಯಲ್ಲಿ ಜಂಗಲ್‌ ರಾಜ್‌ ಆಗಿದೆ ಎಂದು ಕಿಡಿಕಾರಿದ್ದಾರೆ. ಮೊದಲು ಅಪಘಾತ ಪ್ರಕರಣ ದಾಖಲಿಸಿದ್ದ ಪೊಲೀಸರು, ರಾಜಕೀಯ ಒತ್ತಡದ ಬಳಿಕ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಜೀವದ ಹಂಗು ತೊರೆದು ಸಾಧನೆ: ಭಾರತ ಮೂಲದ ಮೇಘಾಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ!

ಎಬಿಪಿ ನ್ಯೂಸ್‌ ವಾಹಿನಿಯ ಪತ್ರಕರ್ತ ಸುಲಭ್‌ ಶ್ರೀವಾಸ್ತವ ಎಂಬುವರು ಎರಡು ದಿನದ ಹಿಂದಷ್ಟೇ ತಾನು ಅಕ್ರಮ ಮದ್ಯ ದಂಧೆಯ ಕುರಿತು ಮಾಡುತ್ತಿರುವ ವರದಿಗಳಿಂದ ಮದ್ಯ ಮಾಫಿಯಾ ಕ್ರುದ್ಧಗೊಂಡಿದೆ. ಆ ಮಾಫಿಯಾದಿಂದ ತನಗೆ ಜೀವ ಬೆದರಿಕೆಯಿದೆ ಎಂದು ಪ್ರಯಾಗರಾಜ್‌ ಎಡಿಜಿಗೆ ಲಿಖಿತವಾಗಿ ದೂರು ನೀಡಿದ್ದರು. ಭಾನುವಾರ ರಾತ್ರಿ ಅವರು ಘಟನೆಯೊಂದರ ವರದಿಗೆ ತೆರಳಿ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಮಳೆಯಿಂದ ಕೊಚ್ಚೆಯಾಗಿದ್ದ ರಸ್ತೆಯಲ್ಲಿ ಜಾರಿಬಿದ್ದು, ಕಂಬಕ್ಕೆ ಹಾಗೂ ಹ್ಯಾಂಡ್‌ ಪಂಪ್‌ಗೆ ತಲೆ ಬಡಿದು ಸಾವನ್ನಪ್ಪಿದ್ದಾರೆ.

ಶ್ರೀರಾಮ ಸ್ತುತಿ ಹಾಡಿನ ಮೂಲಕ ಹೊಸ ಉತ್ಸಾಹ ತುಂಬಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

ಈ ಕುರಿತು ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ‘ಉತ್ತರ ಪ್ರದೇಶದಲ್ಲಿ ಅಲಿಗಢದಿಂದ ಹಿಡಿದು ಪ್ರತಾಪಗಢದವರೆಗೆ ಲಿಕ್ಕರ್‌ ಮಾಫಿಯಾ ಅಟ್ಟಹಾಸ ತೀವ್ರವಾಗಿದೆ. ಆದರೆ ಸರ್ಕಾರ ಮೌನವಾಗಿದೆ. ಜಂಗಲ್‌ ರಾಜ್‌ಗೆ ಪೋಷಣೆ ನೀಡುತ್ತಿರುವ ಯುಪಿ ಸರ್ಕಾರ ಸುಲಭ್‌ ಶ್ರೀವಾಸ್ತವ ಅವರ ಕುಟುಂಬದ ಕಣ್ಣೀರಿಗೆ ಉತ್ತರ ನೀಡುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್