ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹೊಸ ಮಣ್ಣಿನ ಬುನಾದಿ!

Published : May 01, 2022, 10:33 PM IST
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹೊಸ ಮಣ್ಣಿನ ಬುನಾದಿ!

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಮಾಡಲು ಆರಂಭಿಸುವ ಮುನ್ನ ಮಣ್ಣು ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ನಿರ್ಮಾಣ ಸಮಿತಿ ಅಚ್ಚರಿಯ ಸತ್ಯವೊಂದನ್ನು ಕಂಡುಕೊಂಡಿತ್ತು. ಭವ್ಯ ರಾಮಮಂದಿರ ನಿರ್ಮಾಣವಾಗಬೇಕಾದಲ್ಲಿ ಇಲ್ಲಿರುವ ಮಣ್ಣನ್ನು ತೆಗೆದು ಬೇರೆ ಮಣ್ಣನ್ನು ಹಾಕಬೇಕಿತ್ತು ಎನ್ನುತ್ತಾರೆ ಸಮಿತಿಯ ಅಧ್ಯಕ್ಷ.  

ಅಯೋಧ್ಯೆ (ಮೇ.1): ರಾಮಮಂದಿರ ನಿರ್ಮಾಣದ (Ram Mandir construction) ವಿಚಾರದಲ್ಲಿ ಕೋರ್ಟ್ ನಲ್ಲಿ ನಡೆದಿದ್ದು ಒಂದು ಹಂತದ ಹೋರಾಟವಾದರೆ, ಮಂದಿರ ನಿರ್ಮಾಣದ ವೇಳೆ ಎದುರಾದ ಸವಾಲು ಬೇರೆಯದೇ ರೀತಿಯದ್ದು. ಏಷಿಯಾನೆಟ್‌ ನ್ಯೂಸ್‌ನ (Asianet News) ರಾಜೇಶ್‌ ಕಾಲ್ರಾ (Rajesh Kalra) ಅವರು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರ (PM Modi) ಮಾಜಿ ಪ್ರಧಾನ ಕಾರ್ಯದರ್ಶಿಯೂ ಆದ ನೃಪೇಂದ್ರ ಮಿಶ್ರಾ (Ram Mandir Construction Committee Chairman Nripendra Mishra) ಅವರ ಸಂದರ್ಶನ ಮಾಡಿದ್ದಾರೆ. 

ಸಂದರ್ಶನದಲ್ಲಿ ರಾಮಮಂದಿರ ಕಟ್ಟಡ ನಿರ್ಮಾಣ ಕಾರ್ಯ ಯಾವ ಹಂತಕ್ಕೆ ಬಂದಿದೆ ಮತ್ತು ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟಗಳೇನು ಎನ್ನುವುದನ್ನೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. 

ಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಿದಾಗ ಬಂದ ಸವಾಲುಗಳ ಬಗ್ಗೆ ನೃಪೇಂದ್ರ ಮಿಶ್ರಾ ಅವರು ಪ್ರತಿಕ್ರಿಯಿಸಿ ಬುನಾದಿ (foundation laying for ram mandir) ಹಾಕುವುದೇ ದೊಡ್ಡ ಸವಾಲಾಗಿತ್ತು ಎಂದರು. ವಿವರಿಸಿದ ಅವರು, 'ಈ ಸ್ಥಳದ ಮಣ್ಣು ಪರೀಕ್ಷೆ (Soil Test) ಮಾಡಿದಾಗ ನಮಗೆ ಗೊತ್ತಾಗಿದ್ದು, ಭದ್ರವಾದ ಅಡಿಪಾಯ ಹಾಕಬೇಕು ಎನ್ನುವುದು. ನಾವು ಕಡೆಗೂ ಈ ಸವಾಲನ್ನು ಸಾಧ್ಯವಾಗಿಸಿದ್ದೇವೆ. ಆದರೆ, ಬುನಾದಿಗೂ ಮುನ್ನ ಈ ಮಣ್ಣು ಪರೀಕ್ಷೆ ಮಾಡಿಸಿದಾಗ ನಮಗೆ ಗೊತ್ತಾಗಿದ್ದು, ಇಲ್ಲಿನ ಮಣ್ಣನ್ನು ಮತ್ತೊಂದು ಕಡೆ ಸಾಗಿಸಬೇಕಿತ್ತು. ನೀವು ಒಮ್ಮೆ ಈ ಬಗ್ಗೆ ಕಲ್ಪಿಸಿಕೊಳ್ಳಿ. ಭೂಮಿಯನ್ನು ಸುಮಾರು ಆಳವಾಗಿ ಅಗೆದಿದ್ದೇವೆ. ಆಳವಾಗಿ ತೆಗೆದ ಮಣ್ಣನ್ನು ಬೇರೆಡೆ ಸಾಗಿಸುವುದು ಸುಲಭವಾಗಿರಲಿಲ್ಲ' ಎಂದರು.

"

'50 ಮೀಟರ್ ಆಳವಾಗಿ ನಾವು ಭೂಮಿಯನ್ನು ಅಗೆದಿದ್ದೇವೆ. ನಮಗೆ ಆಮೇಲೆ ಸವಾಲಾಗಿದ್ದು, ಇಲ್ಲಿನ ಮಣ್ಣನ್ನು ಆಚೆ ಸಾಗಿಸಬೇಕಾಗಿತ್ತು.  ನಾವು ಇದನ್ನು ಮಳೆಗಾಲ ಆರಂಭವಾಗುವ ಮುನ್ನವೇ ಮಾಡಿ ಮುಗಿಸಿದೆವು. ಇಲ್ಲದಿದ್ದರೆ, ಈ ಮಣ್ಣು ಮತ್ತೆ ಗುಂಡಿಯಲ್ಲಿ ಬಿದ್ದು ಸಮಸ್ಯೆ ಆಗುತ್ತಿತ್ತು. ಆದರೆ, ನಾವು ಈ ಕಾರ್ಯದಲ್ಲಿ ಯಶಸ್ವಿ ಆಗಿದ್ದೇವೆ. ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ, ಎಲ್ಲವೂ ಚೆನ್ನಾಗಿ ನಿಮಗೆ ತಿಳಿಯುತ್ತದೆ. ಆದರೆ, ನಾವು ಅಗೆದಿದ್ದ ಸ್ಥಳದಲ್ಲಿ ಅಲ್ಲಿ ಹೊಸದಾಗಿ ಫಲವತ್ತಾದ ಮಣ್ಣು ಹಾಕಬೇಕಿತ್ತು. ಬುನಾದಿಗೆ ಫಲವತ್ತಾದ ಮಣ್ಣು ಹಾಕಿದಲ್ಲಿ ಮಾತ್ರವೇ ಅದು ಗಟ್ಟಿಯಾಗಿ ನಿಲ್ಲುತ್ತದೆ. ನಮ್ಮ ಉದ್ದೇಶವೇ ಗಟ್ಟಿಯಾದ ಅಡಿಪಾಯ ಹಾಕುವುದು ಆಗಿತ್ತು' ಎಂದರು. 

ಅಯೋಧ್ಯೆ ರಾಮಮಂದಿರ ಗರ್ಭಗುಡಿ 2023ರ ಡಿಸೆಂಬರ್‌ನಲ್ಲಿ ಪೂರ್ಣ: ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ

'ನಾವು ಹಾಗೆಯೇ ಫಲವತ್ತಾದ ಮಣ್ಣು ಹಾಕಿ ಭದ್ರವಾದ ಬುನಾದಿ ಹಾಕಿದ್ದೇವೆ. ಹಾಗೆಯೇ ನಿಮಗೂ ಗೊತ್ತು ಈ ಕಾಮಗಾರಿ ಮಾಡುತ್ತಿರೋ ಏಜೆನ್ಸಿಯವರೂ ಕೂಡ ತಿಳುವಳಿಕೆ ಇದ್ದವರು. ನಮ್ಮ ಈ ಪ್ರಾಜೆಕ್ಟ್ ನೋಡಿಕೊಳ್ತಿರೋದು ಟಾಟಾ ಕನ್ಸ್ಟಕ್ಟರ್ ಇಂಜಿನಿಯರ್ ಗಳು (tata construction Engineers). ಬಹಳ ಒಳ್ಳೆಯ ಕೆಲಸಗಾರರು, ತುಂಬಾ ಚೆನ್ನಾಗಿ ಸಹಕರಿಸುತ್ತಿದ್ದಾರೆ. ಇದು ಅವರಿಗೆ ಸಲ್ಲಬೇಕಾದ ಕ್ರೆಡಿಟ್' ಎನ್ನುತ್ತಾರೆ ಮಿಶ್ರಾ. 

ಎಲ್ಲಿವರೆಗೆ ಬಂತು ರಾಮಮಂದಿರ ನಿರ್ಮಾಣ ಕಾರ್ಯ? ಏಷ್ಯಾನೆಟ್ ನ್ಯೂಸ್‌ ನಲ್ಲಿ Exclusive

50 ಮೀಟರ್ ಬುನಾದಿ ಅಗೆಯೋ ಮುನ್ನ ಬಲ್ಲ ಇಂಜನಿಯರ್ಗಳಿಂದ ಪರೀಕ್ಷಿಸಿ, ಅವರಿಂದ ಅಭಿಪ್ರಾಯ ಪಡೆಯಲಾಗಿದೆ. ಜತೆಗೆ ವಿಶೇಷ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದ್ದು, 5 ಐಐಟಿಯ ಹಿರಿಯ ತಜ್ಞರು ಈ ತಂಡದಲ್ಲಿದ್ದಾರೆ. ಮದ್ರಾಸ್ ನಲ್ಲಿರುವ ಐಐಟಿಯ ಸಿವಿಲ್ ಇಂಜನಿಯರಿಂಗ್, ಮತ್ತು ಐಐಟಿ ದೆಹಲಿಯ ಸಿವಿಲ್ ಇಂಜನಿಯರಿಂಗ್ ಪ್ರೊಫೆಸರ್‌ಗಳು ಇದ್ದಾರೆ. ಮತ್ತು ಐಐಟಿ ಸೂರತ್, ಐಐಟಿ ಕಾನ್ಪುರದವರು ಇದ್ದಾರೆ. ಎಲ್ಲಾ ಪರಿಣಿತರು ಸೇರಿ ನಿರ್ಧಾರ ತೆಗೆದುಕೊಂಡು ಎದುರಾದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು