ಮಾರಿಷಸ್‌ನಲ್ಲಿ ಹಿಂದೂಗಳ ಸಂಖ್ಯೆ ಸಾಕಷ್ಟಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ವಿದೇಶಗಳಲ್ಲೂ ಪ್ರತಿಷ್ಠಾಪನೆ ಸಂಭ್ರಮ ಮನೆ ಮಾಡಿದೆ.
ಮಾರಿಷಸ್ (ಜನವರಿ 13, 2024): ಮಾರಿಷಸ್ ಸರ್ಕಾರವು ಜನವರಿ 22 ರಂದು ಹಿಂದೂ ಧರ್ಮೀಯ ಉದ್ಯೋಗಿಗಳಿಗೆ ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಲು 2 ಗಂಟೆಗಳ ಸಮಯಾವಕಾಶ ಘೋಷಿಸಿದೆ. ಇದು ಮಂದಿರದ ಪ್ರಾಣ ಪ್ರತಿಷ್ಠೆ ಪ್ರಾರ್ಥನೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.
ಮಾರಿಷಸ್‌ನಲ್ಲಿ ಹಿಂದೂಗಳ ಸಂಖ್ಯೆ ಸಾಕಷ್ಟಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ವಿದೇಶಗಳಲ್ಲೂ ಪ್ರತಿಷ್ಠಾಪನೆ ಸಂಭ್ರಮ ಮನೆ ಮಾಡಿದೆ.
ಇದನ್ನು ಓದಿ: ದೇಗುಲ ಸ್ವಚ್ಛತೆಗೆ ಮೋದಿ ಕರೆ: ನಾಸಿಕ್ ದೇಗುಲ ನೆಲ ಒರೆಸಿದ ಪ್ರಧಾನಿ ಮೋದಿ
ಪ್ರಾಣ ಪ್ರತಿಷ್ಠೆಗೆ ಆಗಮಿಸುವ 11,000 ಮಂದಿಗೆ ಪವಿತ್ರ ಮೃತ್ತಿಕೆ
ಅಯೋಧ್ಯೆ: ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸುವ ಅತಿಥಿಗಳಿಗೆ ಕೊಡುಗೆಯಾಗಿ ರಾಮ ಜನ್ಮಭೂಮಿಯ ಪುಣ್ಯ ಮೃತ್ತಿಕೆಯನ್ನು ನೀಡುವುದಾಗಿ ಜನ್ಮಭೂಮಿ ಟ್ರಸ್ಟ್ ತಿಳಿಸಿದೆ. ಈ ಮೃತ್ತಿಕೆ ದೇಗುಲದ ಅಡಿಪಾಯ ತೆಗೆದಾಗ ಸಿಕ್ಕ ಮಣ್ಣಾಗಿದೆ.
ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸುವ 11,000 ಅತಿಥಿಗಳಿಗೆ ಎರಡು ಡಬ್ಬಿಯಲ್ಲಿ ಪ್ರಸಾದ ನೀಡಲಾಗುತ್ತದೆ. ಅದರಲ್ಲಿ ಒಂದರಲ್ಲಿ ಮೃತ್ತಿಕೆ ಹಾಗೂ ಸರಯೂ ನದಿ ನೀರು ಇದ್ದರೆ, ಮತ್ತೊಂದರಲ್ಲಿ 100 ಗ್ರಾಂ ಮೋತಿಚೂರು ಲಾಡು ಹಾಗೂ ತುಳಸಿ ದಳಗಳು ಇರಲಿವೆ. ಈ ಡಬ್ಬಿಗಳನ್ನು ಸೆಣಬಿನ ಚೀಲದಲ್ಲಿ ವಿತರಿಸಲಾಗುತ್ತದೆ. ಇದರ ಜತೆಗೆ ಇನ್ನು ಕೆಲವು ಕೊಡುಗೆಗಳನ್ನು ನೀಡಲಾಗುತ್ತದೆ ಎಂದು ರಾಮಜನ್ಮಭೂಮಿ ಟ್ರಸ್ಟ್ ತಿಳಿಸಿದೆ.
ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳು ಹೇಗೆ ನಡೆಯುತ್ತೆ? ಪ್ರಧಾನ ಅರ್ಚಕರು ಹೇಳಿದ್ದೀಗೆ..
ಪ್ರಾಣ ಪ್ರತಿಷ್ಠಾಪನೆಗೆ ಗೈರು: ಕಾಂಗ್ರೆಸ್ ತೀರ್ಮಾನಕ್ಕೆ ಕಾಂಗ್ರೆಸ್ಸಿಗ ಸಿಂಗ್ ಅಪಸ್ವರ
ನವದೆಹಲಿ: ರಾಮ ಮಂದಿರದ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ ಹಾಕಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಕರಣ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಮ ಮಂದಿರದ ಪರ ಸುಪ್ರೀಂಕೋರ್ಟ್ ತೀರ್ಪು ನೀಡಿದ ಮೇಲೆ ಉದ್ಘಾಟನೆಗೆ ತೆರಳಲು ಹಿಂಜರಿಕೆ ಬೇಡ. ರಾಮ ಮಂದಿರ ಉದ್ಘಾಟನೆಯ ಸುಂದರ ಆಮಂತ್ರಣ ನನಗೂ ಬಂದಿದೆ. ರಾಮ ಮಂದಿರ ಉದ್ಘಾಟನೆ ಕೋಟ್ಯಾಂತರ ಹಿಂದುಗಳ ಕನಸಾಗಿದ್ದು, ಇದೊಂದು ಐತಿಹಾಸಿಕ ಘಳಿಗೆಯಾಗಲಿದೆ’ ಎಂದರು.
ರಾಷ್ಟ್ರಪತಿಗೆ ಆಹ್ವಾನ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮತ್ತು ಆರ್‌ಎಸ್‌ಎಸ್ ಮುಖಂಡ ರಾಮ್ ಲಾಲ್ ಅವರು ಶುಕ್ರವಾರ ಆಹ್ವಾನ ನೀಡಿದರು.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ವಿರೋಧ: ಕಾರ್ಯಕ್ರಮಕ್ಕೆ ಪುರಿ, ಬದರಿ ಸ್ವಾಮೀಜಿ ಗೈರು