ಅಯೋಧ್ಯೆಯ ಧನ್ನಿಪುರ ಗ್ರಾಮದ ಐದು ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಮಸೀದಿಯ ವಿನ್ಯಾಸವನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲು ಸಿದ್ಧವಾಗಿದ್ದ ನೀಲನಕ್ಷೆಯನ್ನು ಬದಲಾವಣೆ ಮಾಡಿ ಮಧ್ಯಪ್ರಾಚ್ಯ ದೇಶದ ವಿನ್ಯಾಸವನ್ನು ಅಳವಡಿಸಲಾಗಿದೆ.
ಉತ್ತರ ಪ್ರದೇಶ (ಅ.13): ರಾಮ ಜನ್ಮಭೂಮಿ-ಬಾಬರಿ ಮಸೀದಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮುಸ್ಲಿಂ ಧರ್ಮದವರಿಗೆ ನೀಡಿದ ಅಯೋಧ್ಯೆಯ ಧನ್ನಿಪುರ ಗ್ರಾಮದ ಐದು ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಮಸೀದಿಯ ವಿನ್ಯಾಸವನ್ನು ಬದಲಾವಣೆ ಮಾಡಲಾಗಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಗುರುವಾರ ಬಹಿರಂಗಪಡಿಸಿದೆ.
ಮಸೀದಿ ಮತ್ತು ಸಮುದಾಯಕ್ಕೆ ಇತರ ಸೌಲಭ್ಯಗಳನ್ನು ನೀಡುವಲ್ಲಿ ರಚಿಸಲಾದ ಐಐಸಿಎಫ್ ಟ್ರಸ್ಟ್ (indo islamic cultural foundation trust) ಇದೀಗ ಮಧ್ಯಪ್ರಾಚ್ಯ ದೇಶಗಳಲ್ಲಿ ಅಳವಡಿಸಿಕೊಂಡಿರುವಂತಹ "ಗ್ರ್ಯಾಂಡ್" ವಿನ್ಯಾಸಕ್ಕೆ ಬದಲಾಯಿಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಜುಫರ್ ಫಾರೂಕಿ ಹೇಳಿದ್ದಾರೆ.
ಅಯೋಧ್ಯೆ ಬ್ರಹ್ಮಕಲಶಕ್ಕೆ ಕನ್ನಡಿಗನ ಪೌರೋಹಿತ್ಯ
ಮಧ್ಯಪ್ರಾಚ್ಯ ದೇಶದ ವಿನ್ಯಾಸವನ್ನು ತೀರ್ಮಾನಿಸಿಸುವುದಕ್ಕೂ ಮುನ್ನ ಸಿದ್ಧವಾಗಿದ್ದ ನೀಲನಕ್ಷೆಯಲ್ಲಿ ಮಸೀದಿಯ ವಿನ್ಯಾಸವು ಭಾರತದಲ್ಲಿ ನಿರ್ಮಿಸಲಾದ ವಿನ್ಯಾಸವನ್ನು ಆಧರಿಸಿತ್ತು. ಇದಕ್ಕೆ ಪ್ರವಾದಿ 'ಮೊಹಮ್ಮದ್ ಬಿನ್ ಅಬ್ದುಲ್ಲಾ' ಹೆಸರಿಡಲು ಟ್ರಸ್ಟ್ ನಿರ್ಧರಿಸಿದೆ ಎಂದು ಫಾರೂಕಿ ಪಿಟಿಐಗೆ ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಸಭೆಯಲ್ಲಿ ಪುಣೆ ಮೂಲದ ವಾಸ್ತುಶಿಲ್ಪಿ ಸಿದ್ಧಪಡಿಸಿದ ಹೊಸ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಈ ಮಸೀದಿಯು ಹಿಂದಿನ ಯೋಜನೆಯಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಪೂರ್ಣಗೊಂಡ ನಂತರ, ಹೊಸ ಮಸೀದಿಯು 5,000 ಕ್ಕೂ ಹೆಚ್ಚು ಜನರಿಗೆ ಇರುವಷ್ಟು ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು.
ಆಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ವಾಪಸ್‌ಗೆ ಮುಸ್ಲಿಮರ ಪಟ್ಟು, ವಿವಾದ ಶುರು!
ಈ ಸಭೆಯಲ್ಲಿ ಸುನ್ನಿ, ಶಿಯಾ, ಬರೇಲ್ವಿ ಮತ್ತು ದೇವಬಂದಿ ಸೇರಿದಂತೆ ಎಲ್ಲಾ ಪಂಗಡಗಳ ಧರ್ಮಗುರುಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿದರು.
ನಾವು 300 ಹಾಸಿಗೆಗಳ ಚಾರಿಟೇಬಲ್ ಕ್ಯಾನ್ಸರ್ ಆಸ್ಪತ್ರೆಯನ್ನು ಸಹ ಇದರಲ್ಲಿ ನಿರ್ಮಿಸುತ್ತೇವೆ. ಫಾರ್ಮಾ ಕಂಪನಿ ವೊಕಾರ್ಡ್ ಗ್ರೂಪ್‌ನ ಅಧ್ಯಕ್ಷರಾದ ಡಾ ಹಬಿಲ್ ಖೋರಕಿವಾಲಾ ಅವರು ಆಸ್ಪತ್ರೆಯನ್ನು ಚಾರಿಟಿಯನ್ನು ಸ್ಥಾಪಿಸಲು ಮತ್ತು ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಫಾರೂಕಿ ಹೇಳಿದರು. ಐಐಸಿಎಫ್ ಟ್ರಸ್ಟ್ ಉತ್ತರ ಪ್ರದೇಶ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದೆ, ನಾವು ಶೀಘ್ರದಲ್ಲೇ ಅಯೋಧ್ಯೆಯಲ್ಲಿ ಭವ್ಯವಾದ ಮಸೀದಿ ನಿರ್ಮಾಣವನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ಇದೆಲ್ಲದರ ನಡುವೆ ಪ್ರಸ್ತಾವಿತ ಮಸೀದಿ ಮತ್ತು ಆಸ್ಪತ್ರೆಯ ನಕ್ಷೆಯು ಇನ್ನೂ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಬಳಿ ಇದೆ. ಏಕೆಂದರೆ ಟ್ರಸ್ಟ್ ಅಭಿವೃದ್ಧಿ ಶುಲ್ಕ ಎಂದು ಪ್ರಾಧಿಕಾರಕ್ಕೆ 1 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದೆ ಎಂದು ಫಾರೂಕಿ ಹೇಳಿದ್ದಾರೆ.
ಧನ್ನಿಪುರ ಗ್ರಾಮದಲ್ಲಿ ಮಸೀದಿ ಸಂಕೀರ್ಣ ನಿರ್ಮಾಣಕ್ಕೆ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಉತ್ತರ ಪ್ರದೇಶ ಸರಕಾರ ಭೂಮಿಯನ್ನುನೀಡಿದೆ. ಧನ್ನಿಪುರ ಗ್ರಾಮವು ಅಯೋಧ್ಯೆಯ ರಾಮಮಂದಿರದ ಸ್ಥಳದಿಂದ ಸುಮಾರು 22 ಕಿಮೀ ದೂರದಲ್ಲಿದೆ. ಆಸ್ಪತ್ರೆ ಜೊತೆಗೆ ಗ್ರಂಥಾಲಯ, ಸಮುದಾಯ ಅಡುಗೆಮನೆ ಮತ್ತು ಸಂಶೋಧನಾ ಸಂಸ್ಥೆ ನಿರ್ಮಾಣವಾಗಲಿದೆ.