ಭಾರತೀಯರ ಗೃಹ ಬಳಕೆ ವೆಚ್ಚ ಏರಿಕೆ; 2011ಕ್ಕಿಂತ ಶೇ.188ರಷ್ಟು ಹೆಚ್ಚಳ

By Kannadaprabha News  |  First Published Dec 28, 2024, 8:22 AM IST

ಕಳೆದ ದಶಕದಲ್ಲಿ ಬಳಕೆಯ ವೆಚ್ಚದಲ್ಲಿ ಸುಧಾರಣೆಯ ಸಕಾರಾತ್ಮಕ ಪ್ರವೃತ್ತಿ ಇದೆ ಎಂದು ಸಮೀಕ್ಷೆಯು ತೋರಿಸಿದೆ. ನಗರ-ಗ್ರಾಮೀಣ ಅಂತರವು ಮತ್ತಷ್ಟು ಕಡಿಮೆಯಾಗುತ್ತಿದೆ.


ನವದೆಹಲಿ: 2011-12 ರಲ್ಲಿ ಸರಾಸರಿ ಮಾಸಿಕ ತಲಾ ಬಳಕೆ ವೆಚ್ಚ (ಎಂ.ಪಿ.ಸಿ.ಇ) ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 2023-24ರಲ್ಲಿ 4,122 ರು. ಮತ್ತು ನಗರ ಪ್ರದೇಶಗಳಲ್ಲಿ 6,996 ರು. ಹೆಚ್ಚಿದೆ. ಏರಿಕೆ ಪ್ರಮಾಣ ಕ್ರಮವಾಗಿ 188% ಮತ್ತು 166% ರಷ್ಟಿದೆ ಎಂದು ‘ಕುಟುಂಬದ ಗೃಹಬಳಕೆಯ ವೆಚ್ಚ ಸಮೀಕ್ಷೆ-2023-24’ ಹೇಳಿದೆ. ತಲಾ ಬಳಕೆ ವೆಚ್ಚ 2022-23ರಲ್ಲಿ ಗ್ರಾಮೀಣದಲ್ಲಿ 3,773 ಹಾಗೂ ನಗರದಲ್ಲಿ 6,459 ರು. ಇತ್ತು.

ಇದೇ ವೇಳೆ, 2023ರ ಆಗಸ್ಟ್‌ನಿಂದ 2024ರ ಜುಲೈನಲ್ಲಿ ಅವಧಿಯಲ್ಲಿ ಅದಕ್ಕಿಂತ 1 ವರ್ಷ ಹಿಂದಿನ ಅಂಕಿ ಅಂಶಕ್ಕೆ ಹೋಲಿಸಿದರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ತಲಾ ಬಳಕೆ ವೆಚ್ಚದ ಅಸಮಾನತೆ ತಗ್ಗಿದೆ. ಗ್ರಾಮೀಣ ಹಾಗೂ ನಗರಗಳ ನಡುವಿನ ಅಸಮಾತನತೆ ಪ್ರಮಾಣ ಶೇ.0.266 ಇತ್ತು. ಅದು ಶೇ.237ಕ್ಕೆ ತಗ್ಗಿದೆ. ಇನ್ನು ನಗರ ಪ್ರದೇಶದಲ್ಲಿ ಶೇ.0.314 ಇದ್ದದ್ದು ಶೇ.0.284ಕ್ಕೆ 1 ವರ್ಷದಲ್ಲಿ ತಗ್ಗಿದೆ ಎಂದೂ ಸಮೀಕ್ಷೆ ವಿವರಿಸಿದೆ.

Tap to resize

Latest Videos

undefined

ಇದರಿಂದಾಗಿ ಕಳೆದ ದಶಕದಲ್ಲಿ ಬಳಕೆಯ ವೆಚ್ಚದಲ್ಲಿ ಸುಧಾರಣೆಯ ಸಕಾರಾತ್ಮಕ ಪ್ರವೃತ್ತಿ ಇದೆ ಎಂದು ಸಮೀಕ್ಷೆಯು ತೋರಿಸಿದೆ. ನಗರ-ಗ್ರಾಮೀಣ ಅಂತರವು ಮತ್ತಷ್ಟು ಕಡಿಮೆಯಾಗುತ್ತಿದೆ. ಅಲ್ಲದೆ ಈ ಮಹತ್ವದ ಏರಿಕೆಯು ದೇಶದಾದ್ಯಂತ ಭಾರತೀಯ ಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಹೆಚ್ಚಿದ ಖರೀದಿ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: Union Budget 2025: ವಾರ್ಷಿಕ 15 ಲಕ್ಷ ವೇತನದ ಉದ್ಯೋಗಿಗಳಿಗೆ ಇರೋದಿಲ್ಲ ಆದಾಯ ತೆರಿಗೆ?

click me!