ಗ್ರೀನ್ ಕಲರ್ ಆಟೋ ಓಡಿಸಿ ಅಂದ್ರೆ, ಆಟೋದ ಮೇಲೆ ಮಿನಿ ಲಾಲ್‌ಬಾಗ್ ಇಟ್ಕೊಂಡು ಬಂದ ಡ್ರೈವರ್!

Published : Oct 09, 2025, 07:16 PM IST
Go Green Auto Anji

ಸಾರಾಂಶ

ಆಟೋ ಚಾಲಕ ಅಂಜಿಯವರು ತಮ್ಮ ಆಟೋ ರಿಕ್ಷಾವನ್ನು ಚಲಿಸುವ ಉದ್ಯಾನವನವನ್ನಾಗಿ ಪರಿವರ್ತಿಸಿ, ದೇಶದ ಗಮನ ಸೆಳೆದಿದ್ದಾರೆ. ಈ 'ಗೋ ಗ್ರೀನ್ ಆಟೋ' ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ವಿಶಿಷ್ಟ ಪರಿಸರ ಪ್ರೇಮವು ಎಲ್ಲರಿಗೂ ಮಾದರಿಯಾಗಿದೆ.

ಪರಿಸರ ಸಂರಕ್ಷಣೆ ಕೇವಲ ಭಾಷಣ ಮತ್ತು ಪೋಸ್ಟ್‌ಗಳಿಗೆ ಸೀಮಿತವಾಗಿರುವ ದಿನಗಳಲ್ಲಿ, ಒಬ್ಬ ಆಟೋ ಚಾಲಕನು ತನ್ನ ಆಟೋ ರಿಕ್ಷಾವನ್ನೇ ಒಂದು ಸಣ್ಣ ಚಲಿಸುವ ಉದ್ಯಾನವನವನ್ನಾಗಿ ಪರಿವರ್ತಿಸಿ, ದೇಶದ ಗಮನ ಸೆಳೆದಿದ್ದಾನೆ. ಆಟೋ ಅಂಜಿ ಎಂದು ಗುರುತಿಸಿಕೊಂಡಿರುವ ಈ ಚಾಲಕನ ವಿಶಿಷ್ಟ ಪರಿಸರ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈತನ ಗೋ ಗ್ರೀನ್ ಆಟೋ ವಿಡಿಯೋ ವೈರಲ್ ಆಗಿದೆ.

ಆಟೋದಲ್ಲಿ 'ಮಿನಿ ಲಾಲ್‌ಬಾಗ್' ಸೃಷ್ಟಿ: ಪ್ರಯಾಣಿಕರಿಗೆ ತೋಟದ ಅನುಭವ

ಸಾಮಾನ್ಯವಾಗಿ ಕಾಣುವ ಆಟೋರಿಕ್ಷಾವನ್ನು, ಅಂಜಿ ಅವರು ಹಸಿರು ಕಂಗೊಳಿಸುವಂತೆ ಬದಲಾಯಿಸಿದ್ದಾರೆ. ಕೇವಲ ಹಸಿರು ಬಣ್ಣ ಬಳಿಯುವುದರ ಬದಲು, ಇಡೀ ಆಟೋವನ್ನು ಹಸಿರು ಹುಲ್ಲು ಮತ್ತು ಸಸ್ಯಗಳ ನೈಜ ಅಲಂಕಾರಗಳಿಂದ ಮುಚ್ಚಿದ್ದಾರೆ.

ಹಸಿರು ಕವಚ: ಆಟೋದ ಸುತ್ತಲೂ ಮತ್ತು ಮುಂಭಾಗದಲ್ಲಿ ಹಸಿರು ಮ್ಯಾಟ್ (ಗ್ರೀನ್ ಮ್ಯಾಟ್) ಅಳವಡಿಸಲಾಗಿದೆ.

ರೂಫ್‌ನಲ್ಲಿ ತೋಟ: ಆಟೋದ ಮೇಲ್ಭಾಗದಲ್ಲಿ ವಿಶೇಷವಾಗಿ ಸ್ಟ್ಯಾಂಡ್ ಮಾಡಿಸಿ, ಅದರಲ್ಲಿ ವಿವಿಧ ಬಗೆಯ ಹೂವಿನ ಗಿಡಗಳನ್ನು ಹಾಗೂ ಹುಲ್ಲಿನ ಜಾತಿಯ ಗಿಡಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಜೊತೆಗೆ, ಹಲವು ಗಿಡಿಗಳ ಪಾಟ್‌ಗಳನ್ನು ಸುತ್ತಲೂ ಅಳವಡಿಸಿದ್ದಾರೆ. ಒಟ್ಟಾರೆ ಆಟೋ ಮೇಲೆ ಸಣ್ಣದೊಂದು 'ಕೈತೋಟ'ವನ್ನೇ ನಿರ್ಮಿಸಿದ್ದಾರೆ.

ತ್ರಿವರ್ಣ ಧ್ವಜದ ಸ್ಪರ್ಶ: ಆಟೋದ ಹಿಂಭಾಗದಲ್ಲಿ ಭಾರತದ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮ್ಯಾಟ್‌ಗಳನ್ನು ಬಳಸಿ ದೇಶಭಕ್ತಿ ಮತ್ತು ಪರಿಸರ ಪ್ರೇಮದ ಸಂದೇಶ ನೀಡಿದ್ದಾರೆ.

ಈ ಆಟೋದಲ್ಲಿ ಪ್ರಯಾಣಿಸುವ ಜನರಿಗೆ ನಿಜಕ್ಕೂ ಗಾರ್ಡನ್ ಅಥವಾ ತೋಟದ ನಡುವೆ ಹೋದಂತಹ ಆಹ್ಲಾದಕರ ಅನುಭವ ಸಿಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ದಿನಕ್ಕೆ 3 ಬಾರಿ ಗಿಡಗಳಿಗೆ ನೀರು:

ಆಟೋದ ಮೇಲೆ ಗಿಡಗಳನ್ನು ಇಡುವುದಷ್ಟೇ ಅಲ್ಲ, ಅವುಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಆಟೋದ ಮೇಲ್ಭಾಗದಲ್ಲಿರುವ ಎಲ್ಲಾ ಗಿಡಗಳಿಗೆ ಅವರು ದಿನಕ್ಕೆ 3 ಬಾರಿ ತಪ್ಪದೆ ನೀರು ಹಾಕಿ ಪೋಷಿಸುತ್ತಾರೆ. ಆಟೋವನ್ನು ನಿರಂತರವಾಗಿ ಸ್ವಚ್ಛಗೊಳಿಸಿ, ಅದರ ಹಸಿರುತನ ಮತ್ತು ಅಂದವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಾರೆ. ಆಂಧ್ರ ಪ್ರದೇಶ ಮೂಲದವರಾದ ಅಂಜಿ ಅವರ ಈ ಪರಿಸರ ನಿಷ್ಠೆ ಜನರ ಮನ ಗೆದ್ದಿದೆ.

 

ನಕಲಿ ಪರಿಸರವಾದಿಗಳೇ ನಿಮ್ಮ ಹೋರಾಟ ವ್ಯರ್ಥವೆಂದ ಶೀತಲ್:

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶೀತಲ್ ಚೋಪ್ರಾ ಎನ್ನುವವರು, 'ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕೇವಲ ಪೋಸ್ಟ್ ಹಾಕಿ, ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸುವ ನಕಲಿ ಹೋರಾಟಗಾರರೇ ಇಲ್ಲಿ ನೋಡಿ. ಈ ಆಟೋ ಚಾಲಕನ ಮುಂದೆ ನಕಲಿ ಪರಿಸರವಾದಿಗಳ ಹೋರಾಟಗಳು ವ್ಯರ್ಥ (Greta Thunberg and all fake Environmentalist are waste in front of this Auto Driver) ಎಂದು ಟೀಕಿಸಿ, ಆಟೋ ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶೀತಲ್ ಅವರ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ: 

ಒಬ್ಬರು, ನಾನು ಅವರ ಪ್ರಯತ್ನಗಳನ್ನು ಮೆಚ್ಚಬಲ್ಲೆ ಆದರೆ ಅದು ಗೋ ಗ್ರೀನ್ ಆಂದೋಲನಕ್ಕೆ ಮಿತಿಮೀರಿದ ಪ್ರಚಾರ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ಈ ಆಟೋ ಎಲ್ಲಿದೆ.. ಮಾಲೀಕರು ಯಾರು? ದಯವಿಟ್ಟು ನನಗೆ ಪೂರ್ಣ ವಿವರಗಳನ್ನು ನೀಡಿ' ಎಂದು ಕೇಳಿದ್ದಾರೆ. ಇದಕ್ಕೆ ಮತ್ತೊಬ್ಬರು ತೆಲುಗು ರಾಜ್ಯಗಳು, ಬಹುಶಃ ಆಂಧ್ರಪ್ರದೇಶ ಇರಬೇಕು ಎಂದಿದ್ದಾರೆ.

ಅಂಜಿಯವರ ಈ ಸರಳ ಆದರೆ ಪರಿಣಾಮಕಾರಿ ಪ್ರಯತ್ನವು, ಪರಿಸರ ಸಂರಕ್ಷಣೆಯು ಪ್ರತಿ ನಾಗರಿಕನ ದೈನಂದಿನ ಜೀವನದ ಭಾಗವಾಗಬೇಕು ಎಂಬುದನ್ನು ಸಾರುತ್ತಿದೆ. ಈ ಗೋ ಗ್ರೀನ್ ಆಟೋ' ಇಂದು ದೇಶದಾದ್ಯಂತ ಓಡಾಡುವ ಎಲ್ಲ ವಾಹನ ಸವಾರರಿಗೂ ಮಾದರಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು