ಭಾರತದ ಮತ್ತೊಂದು ಮೈಲಿಗಲ್ಲು, ಒಮಿಕ್ರಾನ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

By Suvarna NewsFirst Published Jun 24, 2023, 7:35 PM IST
Highlights

ಕೋವಿಡ್ ನಿಯಂತ್ರಣದಲ್ಲಿ ಭಾರತದ ಕೊಡುಗೆಯನ್ನು ಎಲ್ಲಾ ದೇಶಗಳು ಮರು ಮಾತಿಲ್ಲದೆ ಒಪ್ಪಿಕೊಳ್ಳುತ್ತದೆ. ಭಾರತ ಕೋವಿಡ್ ಸಾಂಕ್ರಾಮಿಕ ರೋಗವನ್ನ ಲಸಿಕೆ ಮೂಲಕ ನಿಯಂತ್ರಿಸಿದೆ. ಇದರ ನಡವೆ ಒಮಿಕ್ರಾನ್ ಸೇರಿದಂತೆ ಹಲವು ರೂಪಾಂತರಿಗಳು ಭಾರತದ ತಲೆನೋವು ಹೆಚ್ಚಿಸಿತ್ತು. ಇದೀಗ ಈ ಆತಂಕವನ್ನೂ ಭಾರತ ನಿವಾರಿಸಿದೆ. ಇದೀಗ ಒಮಿಕ್ರಾನ್ ವೇರಿಯೆಂಟ್ ವಿರುದ್ಧ ಹೋರಾಡಬಲ್ಲ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ನವದೆಹಲಿ(ಜೂ.24): ಭಾರತ ಕೋವಿಡ್ ಸಾಂಕ್ರಾಮಿಕ ರೋಗವನ್ನು ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸಿದೆ.  ಇದಕ್ಕೆ ಮುಖ್ಯ ಕಾರಣ ಭಾರತ ಅಭಿವೃದ್ಧಿಪಡಿಸಿದ ಲಸಿಕೆ. ಇತರ ದೇಶಗಳಿಗೂ ಲಸಿಕೆ ನೀಡುವ ಮೂಲಕ ವಿಶ್ವದಿಂದಲೇ ಕೋವಿಡ್ ಹೊಡೆದೋಡಿಸಲು ಭಾರತ ನೆರವಾಗಿದೆ. ಆದರೆ ಕೋವಿಡ್ ನಿಯಂತ್ರಣ ಬಳಿಕ ಓಮಿಕ್ರಾನ್ ಸೇರಿದಂತೆ ಹಲವು ರೂಪಾಂತರಿ ತಳಿಗಳು ಭಾರತ ಸೇರಿದಂತೆ ವಿಶ್ವದ ನಿದ್ದೆಗೆಡಿಸಿತ್ತು. ಇದೀಗ ಈ ಸಮಸ್ಯೆಗೂ ಭಾರತ ಪರಿಹಾರ ಕಂಡುಕೊಂಡಿದೆ. ಇದೀಗ ಭಾರತ  ಓಮಿಕ್ರಾನ್ ತಳಿ ವಿರುದ್ದ ಹೋರಾಡಬಲ್ಲ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ.

ಓಮಿಕ್ರಾನ್ ಹಾಗೂ ಕೋವಿಡ್ ವಿರುದ್ದ ಶಕ್ತಿಯುತವಾಗಿ ಹೋರಾಡಬಲ್ಲ mRNA ಬೂಸ್ಟರ್ ಡೋಸ್ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಈ ಲಸಿಕೆಯನ್ನು ಬಿಡುಗಡೆ ಮಾಡಿದ್ದಾರೆ.  ನೂತನ ಲಸಿಕೆಯನ್ನು GEMCOVAC-OM ಜೈವಿಕ ತಂತ್ರಜ್ಞಾನ ಇಲಾಖೆ, ಬಯೋಟೆಕ್ನಾಲಜಿ ರಿಸರ್ಚ್ ಕೌನ್ಸಿಲ್(BIRAC) ಸಹಯೋಗದಿಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಭಾರತ ಮೊದಲ mRNA ಲಸಿಕೆಯಾಗಿದೆ.

Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ

ಹೊಸ ಒಮಿಕ್ರಾನ್ ಲಸಿಕೆಗೆ ಭಾರತದ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆ ನೀಡಿದೆ. ತುರ್ತುು ಬಳಕೆಗೆ DCGI ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.  

ಭಾರತದಲ್ಲಿ ಇಂದು(ಜೂ.24) ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಕೇವಲ 55 ಹೊಸ ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಚೇತರಿಕೆ ಪ್ರಮಾಣ ಹೆಚ್ಚಿರುವ ಕಾರಣ ಸಕ್ರಿಯ ಪ್ರಕರಣಗಳು 1653ಕ್ಕೆ ಇಳಿಕೆಯಾಗಿವೆ. ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ.0.01ರಷ್ಟುದಾಖಲಾಗಿದೆ. ಕೋವಿಡ್‌ ಅಂಕಿ ಅಂಶಗಳ ಪ್ರಕಾರ ಈವರೆಗೂ 4.49 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.31 ಲಕ್ಷ ಜನ ಸಾವನ್ನಪ್ಪಿದ್ದಾರೆ. 220.66 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಮೇಡ್ ಇನ್ ಇಂಡಿಯಾ ಲಸಿಕೆ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ, ಕೋವಿಡ್ ಸಂಕಷ್ಟ ಸಮಯ ನೆನೆದ ಮೋದಿ!

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಗಣನೀಯವಾಗಿ ಇಳಿಕೆಯಾಗಿದೆ. ಯಾರೂ ರೂಡ ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ 4790 ಕೊರೋನಾ ಪರೀಕ್ಷೆ ನಡೆಸಿದ್ದು, ಶೇ.0.12 ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ. 31 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಾಲ್ವರು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ

click me!