ಅಟಲ್ ಟನಲ್ ಲೋಕಾರ್ಪಣೆ| ಮನಾಲಿಯ ಸೋಲಂಗ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ| ಕಾಂಗ್ರೆಸ್ ವಿರುದ್ಧ ಪರೋಕ್ಷ ದಾಳಿ
ಮನಾಲಿ(ಅ.03): ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಅಟಲ್ ಟನಲ್ ಲೋಕಾರ್ಪಣೆಯಾಗಿದೆ. ಪಿಎಂ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಇನ್ನು ಸುರಂಗ ಮಾರ್ಗದ ಮೂಲಕ ಸಂಚರಿಸಿ ಲಾಹೌಲ್‌ನ ಸಿಸು ಹಾಗೂ ಸೋಲಂಗ್ ನಾಲಾಗೆ ಭೇಏಟಿ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇನ್ನು ಸೋಲಂಗ್ ನಾಲಾದಲ್ಲಿ ಮಾತನಾಡಿದ ಪಿಎಂ ಮೋದಿ ಇನ್ಮುಂದೆ ಗುಡ್ಡಗಾಡಿನ ಭಾರವನ್ನು ಅಡಲ್ ಸುರಂಗ ಮಾರ್ಗ ಹೊರಲಿದ್ದು, ಇದರಿಂದ ಮನಾಲಿಯ ಜನರ ಭಾರ ಕಡಿಮೆಯಾಗಲಿದೆ ಎಂದಿದ್ದಾರೆ.
ಅಟಲ್ ಸುರಂಗ ಮಾರ್ಗದಿಂದ ಅಭಿವೃದ್ಧಿ ದ್ವಾರ ತೆರೆದಿದೆ: ಮೋದಿ!
In this event, I can notice that social distancing norms are being followed properly and social distancing plan has been implemented perfectly: PM Narendra Modi at a public rally at Solang Nala in Manali, Himachal Pradesh. (Source - DD) pic.twitter.com/5veNJCfOGe
— ANI (@ANI)undefined
ಪಿಎಂ ಮೋದಿ ಭಾಷಣದ ಪ್ರಮುಖ ಅಂಶಗಳು:
* ಮನಾಲಿಯ ಪ್ರತಿ ಹಳ್ಳಿಗಳೂ ದೇವತೆಗಳ ಸ್ಥಾನವಾಗಿದೆ.
* ನಾನು ಸಂಘಟನೆ ಕೆಲಸ ಮಾಡುತ್ತಿದ್ದಾಗ ಅಟಲ್‌ಜೀ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಹೀಗಿರುವಾಗ ಇಬ್ಬರೂ ಭೇಟಿಯಾಗುತ್ತಿದ್ದೆವು. ಈ ವೇಳೆ ಹಿಮಾಚಲದ ಅಭಿವೃದ್ಧಿ ಬಗ್ಗೆ ಮಾತುಗಳನ್ನಾಡುತ್ತಿದ್ದೆವು. ಅಟಲ್‌ಜೀ ಯಾವತ್ತೂ ಇಲ್ಲಿಗೆ ಸೌಲಭ್ಯ ಒದಗಿಸುವ ಬಗ್ಗೆ ಮಾತನಾಡುತ್ತಿದ್ದರು.
* ಮನಾಲಿಯನ್ನು ಬಹಳಷ್ಟು ಪ್ರೀತಿಸುತ್ತಿದ್ದ ಅಟಲ್‌ಜೀಗೆ ಮನಾಲಿಯ ಅಭಿವೃದ್ಧಿಪಡಿಸ ಅಟಲ ಇಚ್ಛೆಯಾಗಿತ್ತು.
ಅಟಲ್ ಟನಲ್, ಲೇಹ್ ಲಡಾಖ್ ಜನರಿಗೆ ಹೊಸ ಜೀವನ ಎಂದ ಮೋದಿ: ಶಿಕ್ಷಣ, ರಕ್ಷಣಾ ಇಲಾಖೆಗೆ 2 ಟಾಸ್ಕ್!
* ಇಂದು ಬೆಟ್ಟದ ಭಾರತ ಹೊತ್ತುಕೊಂಡಿರುವ ಸುರಂಗ ಇಲ್ಲಿನ ಜನರ ಭಾರ ಕಡಿಮೆ ಮಾಡಿದೆ. ಈ ಸುರಂಗ ನಿರ್ಮಾಣದಿಂದ ಅನೇಕರ ಕಣ್ಗಳಲ್ಲಿ ಆನಂದಭಾಷ್ಪ ಕಂಡಿದ್ದೇನೆ. ಖುಷಿಯಿಂದ ಕುಣಿದಿದ್ದಾರೆ.
* ಅಟಲ್ ಟನಲ್ ಜೊತೆಗೆ ಹಿಮಾಚಲದ ಜನರಿಗಾಗಿ ಹಮೀರ್‌ಪುರದ ಹೈಡ್ರೋಪ್ರಾಜೆಕ್ಟ್ ಸ್ವೀಕೃತಿ ಪಡೆದಿದ್ದೇವೆ.
* ಇದರಿಂದ ದೇಶಕ್ಕೆ ವಿದ್ಯುತ್ ಸಿಗುವುದರೊಂದಿಗೆ ಯುವಕರಿಗೆ ಉದ್ಯೋಗ ಸಿಗಲಿದೆ.
ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!
Himachal Pradesh: Defence Minister Rajnath Singh, Himachal Pradesh Chief Minister Jairam Thakur and Union Minister Anurag Thakur also attend the public rally at Solang Nala, Manali. (Source - DD) https://t.co/8UUQXHmFGD pic.twitter.com/6s0BQwgkCz
— ANI (@ANI)* ಹಿಮಾಚಲ ಪ್ರದೇಶದ ಜನರ ಜೀವನ ಮತ್ತಷ್ಟು ಸುಲಭವಾಗಿಸಲು ಮೊಬೈಲ್ ಹಾಗೂ ಇಂಟರ್ನೆಟ್ ಕನೆಕ್ಟಿವಿಟಿ ಅತೀ ಅಗತ್ಯ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ನೆಟ್ವರ್ಕ್ ಸಮಸ್ಯೆ ಇರುತ್ತದೆ. ಇದನ್ನು ಸರಿಪಡಿಸಲು ದೇಶದ ಆರು ಲಕ್ಷ ಹಳ್ಳಿಗಳಲ್ಲಿ ಆಪ್ಟಿಟಿಕಲ್ ಕೇಬಲ್ ಅಳವಡಿಸಲಾಗುತ್ತಿದೆ. ಇನ್ಮುಂದೆ ಇದನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.
* ಇದರಿಂದ ಇಲ್ಲಿನ ಮಕ್ಕಳ ಶಿಕ್ಷಣ, ರೋಗಿಗಳಿಗೆ ಔಷಧಿ ಹಾಗೂ ಪ್ರವಾಸಿಗರ ಹಣ ಹೀಗೆ ಎಲ್ಲಾ ವಿಚಾರಗಳಲ್ಲಿ ಲಾಭವಾಗಲಿದೆ.
* ದೇಶ ಇಂದು ಬದಲಾವಣೆಯತ್ತ ಸಾಗುತ್ತಿದೆ. ಹೀಗಾಗೇ ಐತಿಹಾಸಿಕ ಕೃಷಿ ಮಸೂದೆ ಜಾರಿಗೊಳಿಸಿದ್ದೇವೆ. ಅಂದು ಅವರಲ್ಲೂ(ಕಾಂಗ್ರೆಸ್) ಇದೇ ಯೋಚನೆ ಇತ್ತು. ಅವರಿಗೂ ಇದನ್ನು ಜಾರಿಗೊಳಿಸುವ ಮನಸ್ಸಿತ್ತು. ಆದರೆ ಧೈರ್ಯವಿರಲಿಲ್ಲ, ಚುನಾವಣೆ ಎದುರಿತ್ತು. ಆದರೆ ನಮಗೆ ದೇಶವೇ ಮುಖ್ಯ. ದೇಶದ ಹಾಗೂ ರೈತರ ಅಭಿವೃದ್ಧಿಯೇ ಮುಖ್ಯ.
* ಅವರೆಷ್ಟೇ ಸ್ವಾರ್ಥದ ರಾಜಕಾರಣ ನಡೆಸಿದ್ರೂ ಈ ದೇಶದ ಅಭಿವೃದ್ಧಿ ನಿಲ್ಲುವುದಿಲ್ಲ