ಸಂತ್ರಸ್ತೆ ಕುಟುಂಬ ಮಂದಿ ಭೇಟಿಯಾಗಲು ಮತ್ತೆ ಹತ್ರಾಸ್‌ಗೆ ರಾಹುಲ್ ಗಾಂಧಿ!

By Suvarna News  |  First Published Oct 3, 2020, 1:57 PM IST

ಹತ್ರಾಸ್‌ನ ಪೈಶಾಚಿಕ ವಿರುದ್ಧ ಭುಗಿಲೆದ್ದ ಆಕ್ರೋಶ| ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲಿದ್ದಾರೆ ರಾಹುಲ್ ಗಾಂಧಿ| ಗುರುವಾರದಂದು ಭೇಟಿಯಾಗುವ ವೇಳೆ ತಡೆದಿದ್ದ ಪೊಲೀಸರು


ಹತ್ರಾಸ್(ಅ.03): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ಯುವತಿ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಪಕ್ಷಗಳು ಕೃತ್ಯದ ವಿರುದಸ್ಧ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿ ಕಾರಿವೆ. ಹೀಗಿರುವಾಗ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತೊಂದು ಬಾರಿ ಸಂತ್ರಸ್ತೆಯ ಮನೆಗೆ ಹೋಗುವ ಯತ್ನ ನಡೆಸಲಿದ್ದಾರೆ. ಗುರುವಾರದಂದೂ ಇವರು ಈ ಯತ್ನ ನಡೆಸಿದ್ದರು. ಆದರೆ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು, ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದಿದ್ದರು.

"

Tap to resize

Latest Videos

undefined

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿನಿಧಿ ಮಂಡಲ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಕುಟುಂಬದ ದೂರು ಆಲಿಸಿ, ಸಂಸತ್ರೆಸ್ತೆಗೆ ನ್ಯಾಯ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ.

ಹತ್ರಾಸ್‌ನಲ್ಲಿ ನಡೆದ ಈ ಅತ್ಯಾಚಾರ ಪ್ರಕರಣಕ್ಕೆ ದೇಶದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೂಗೆದ್ದಿತ್ತು. ಹೀಗಿರುವಾಗಲೇ ಆಡಳಿತಾಧಿಕಾರಿಗಳು ಸಂಸತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ್ದರು. ಈ ಬಗ್ಗೆಯೂ ತೀವ್ರ ವಿರೋಧ ವ್ಯಕ್ತವಾಗಿತ್ತು.

Delhi: Congress leader Rahul Gandhi and Priyanka Gandhi Vadra reach Delhi-Noida flyway.

They are en route to in Uttar Pradesh to meet the family of the alleged gangrape victim. pic.twitter.com/VLWrj6vCPX

— ANI (@ANI)

"

Delhi: Congress leader Priyanka Gandhi Vadra on her way to meet the family of the alleged gangrape victim in (UP), with Congress leader Rahul Gandhi (Source-Congress) pic.twitter.com/TSy7gLaxPL

— ANI (@ANI)

ಇನ್ನು ಗುರುವಾರದಂದು ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾರ ಜೊತೆ ಹತ್ರಾಸ್‌ಗೆ ಪಗ್ರಯಾಣ ಆರಂಭಿಸಿದ್ದರು. ಆದರೆ ಅವರನ್ನು ಪೊಲೀಸರು ತಡೆದಿದ್ದರು ಇದನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು. ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಪರಿಸ್ಥಿತಿ ಹದಗೆಟ್ಟಿತ್ತು. ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ನೂಕುನುಗ್ಗಲಿನಿಂದಾಗಿ ರಾಹುಲ್ ಗಾಂಧಿ ರಸ್ತೆಯಲ್ಲಿ ಬಿದ್ದಿದ್ದರು.

"

click me!