ಕೊರೋನಾ ಮತ್ತೆ ದಾಖಲೆ ಕೇಸ್‌: ಒಂದೇ ದಿನ ದೇಶದಲ್ಲಿ 1.15 ಲಕ್ಷ ಪ್ರಕರಣ, 630 ಜನರ ಸಾವು!

By Kannadaprabha NewsFirst Published Apr 8, 2021, 10:04 AM IST
Highlights

ಕೊರೋನಾ ಮತ್ತೆ ದಾಖಲೆ ಕೇಸ್‌| ಎಚ್ಚರ ಎಚ್ಚರ| ಮೊನ್ನೆ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಭಾರತದಲ್ಲಿ| ನಿನ್ನೆ ಒಂದೇ ದಿನ ದೇಶದಲ್ಲಿ 1.15 ಲಕ್ಷ ಪ್ರಕರಣ ಪತ್ತೆ, 630 ಜನರ ಸಾವು

ನವದೆಹಲಿ(ಏ.08): ಕೊರೋನಾ 2ನೇ ಅಲೆಯ ಪ್ರತಾಪ ಮುಂದುವರೆದಿದ್ದು, ಬುಧವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 1.15 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಯಾವುದೇ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಜೊತೆಗೆ ಮಂಗಳವಾರ ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಕೇಸು ದಾಖಲಾಗಿದ್ದು ಕೂಡಾ ಭಾರತದಲ್ಲೇ ಎಂಬುದು ವಿಶೇಷ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.28 ಕೋಟಿಗೆ ತಲುಪಿದೆ.

ಸತತ 28 ದಿನ ಕೂಡಾ ಸೋಂಕು ಏರುಗತಿಯಲ್ಲೇ ಇದ್ದು, ಮಂಗಳವಾರ ಮಹಾರಾಷ್ಟ್ರದಲ್ಲಿ ದಾಖಲೆಯ 55460, ಛತ್ತೀಸ್‌ಗಢದಲ್ಲಿ 9027, ಕರ್ನಾಟಕದಲ್ಲಿ 6150, ಉತ್ತರ ಪ್ರದೇಶದಲ್ಲಿ 5928 ಮತ್ತು ದೆಹಲಿಯಲ್ಲಿ 5100 ಪ್ರಕರಣಗಳು ದಾಖಲಾಗಿದ್ದವು.

ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ 630 ಜನರು ವೈರಸ್‌ಗೆ ಬಲಿಯಾಗುವುದರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 1.66 ಲಕ್ಷವನ್ನು ಮುಟ್ಟಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 297, ಪಂಜಾಬ್‌ನಲ್ಲಿ 61, ಛತ್ತೀಸ್‌ಗಢದಲ್ಲಿ 53, ಕರ್ನಾಟಕದಲ್ಲಿ 39, ಉತ್ತರಪ್ರದೇಶದಲ್ಲಿ 20 ಜನರು ಸಾವನ್ನಪ್ಪಿದ್ದಾರೆ.

ಇದೇ ವೇಳೆ ಸಕ್ರಿಯ ಕೇಸುಗಳ ಸಂಖ್ಯೆ 8.43 ಲಕ್ಷವನ್ನು ಮುಟ್ಟಿದೆ. ಇದು ಒಟ್ಟು ಸೋಂಕಿತರ ಪೈಕಿ ಶೇ.6.59ರಷ್ಟಾಗಿದೆ. ಮತ್ತೊಂದೆಡೆ ಚೇತರಿಕೆ ಪ್ರಮಾಣ ಕೂಡಾ ಶೇ.92.11ಕ್ಕೆ ಇಳಿಕೆ

click me!