ಸ್ವತಃ ಆಕ್ಸಿಜನ್ ಸಪೋರ್ಟ್‌ನಲ್ಲಿದ್ರೂ ಸೋಂಕಿತರಿಗೆ ಆಕ್ಸಿಜನ್ ತಲುಪಿಸೋ ಕೊರೋನಾ ಯೋಧ

By Suvarna NewsFirst Published May 11, 2021, 6:05 PM IST
Highlights
  • ತಾನೇ ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಅಸ್ತಮಾ ರೋಗಿ
  • ಹೀಗಿದ್ದರೂ ಸೋಂಕಿತರಿಗೆ ಆಕ್ಸಿಜನ್ ತಲುಪಿಸೋ ಕಾಯಕ

ಶ್ರೀನಗರ(ಮೇ.11): COVID-19 ರ ಎರಡನೇ ಅಲೆಯಲ್ಲಿ ಭಾರತ ತತ್ತರಿಸುತ್ತಿದೆ. ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆಯೇ ಕುಸಿಯುತ್ತಿರುವಾಗ, ದೇಶವು ಇನ್ನೂ ಧೈರ್ಯವಾಗಿ ವೈರಸ್ ಜೊತೆ ಹೋರಾಡುತ್ತಿದೆ.

ಹಾಸಿಗೆಗಳು, ಆಮ್ಲಜನಕ, ಔಷಧಿಗಳು, ಪ್ಲಾಸ್ಮಾ ದಾನಿಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳ ಕೊರತೆಯು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ. ಜೀವ ಉಳಿಸುವ ಆಕ್ಸಿಜನ್ ಕೊರತೆಯು ವೈರಸ್ ವಿರುದ್ಧದ ಹೋರಾಟವನ್ನು ಕುಗ್ಗಿಸುತ್ತಿದೆ. ಆದರೆ ಅವ್ಯವಸ್ಥೆಯ ಮಧ್ಯೆ, ಬಹಳಷ್ಟು ಜನ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

ಇತರರಿಗೆ ಆಕ್ಸಿಜನ್ ಕೊಳ್ಳೋಕೆ ಒಡವೆ ಮಾರಿದ ದಂಪತಿಗೆ ಜನ ಥ್ಯಾಂಕ್ಸ್ ಹೇಳಿದ್ದು ಹೀಗೆ

ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಮಂಜೂರ್ ಅಹ್ಮದ್, ಆಸ್ತಮಾ ರೋಗಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಆಮ್ಲಜನಕದ ಬೆಂಬಲವದೊಂದಿಗೇ ಬದುಕುತ್ತಿದ್ದಾರೆ. ಹೀಗಿದ್ದರೂ ಅಗತ್ಯವಿರುವ COVID ಪಾಸಿಟಿವ್ ರೋಗಿಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ತನ್ನ ಸಣ್ಣ ಟ್ರಕ್ ಚಾಲನೆ ಮಾಡುತ್ತಿರುವ ಅವರು ನಿಸ್ವಾರ್ಥವಾಗಿ ಜನರಿಗೆ ಸಾಕಷ್ಟು ಆಮ್ಲಜನಕ ಪೋರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ

ಮಾನವೀಯತೆಗಾಗಿ, ನಾನು ಯಾರಿಗಾದರೂ ಆಮ್ಲಜನಕವನ್ನು ತಲುಪಿಸಲು ಮತ್ತು ಅವರ ಜೀವವನ್ನು ಉಳಿಸಲು ಅಥವಾ ಅವರಿಗೆ ಉಪಕಾರವಾದರೆ ಅದು ನನಗೆ ದೊಡ್ಡ ನೆಮ್ಮದಿ. ನಾನೇ ಆಸ್ತಮಾ ರೋಗಿಯಾಗಿದ್ದೇನೆ ಮತ್ತು ರೋಗಿಗಳಿಗೆ ಆಮ್ಲಜನಕ ಎಷ್ಟು ಮುಖ್ಯ ಎಂಬುದು ನನಗೆ ತಿಳಿದಿದೆ ಎನ್ನುತ್ತಾರೆ ಮನ್ಸೂರ್.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCoron

click me!