ಉದ್ಯಮಿ ಬಿ. ಆರ್‌. ಶೆಟ್ಟಿಯ ವಿಶ್ವದೆಲ್ಲೆಡೆ ಆಸ್ತಿ ಜಪ್ತಿ ಆದೇಶ!

By Suvarna News  |  First Published Feb 16, 2021, 2:12 PM IST

ಉದ್ಯಮಿ ಬಿ.ಆರ್‌.ಶೆಟ್ಟಿಯ ವಿಶ್ವದೆಲ್ಲೆಡೆ ಆಸ್ತಿ ಜಪ್ತಿ ಆದೇಶ| ಎಡಿಬಿಸಿ ಬ್ಯಾಂಕಿಗೆ 7000 ಕೋಟಿಗೂ ಅಧಿಕ ವಂಚನೆ ಆರೋಪ| ಸಂಸ್ಥೆಯ ಇಬ್ಬರು ಮಾಜಿ ಅಧಿಕಾರಿಗಳ ಆಸ್ತಿ ಜಪ್ತಿಗೂ ಆದೇಶ


ದುಬೈ(ಫೆ.16): ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ಎನ್‌ಎಂಸಿ ಆರೋಗ್ಯ ಸೇವಾ ಸಂಸ್ಥೆಯ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್‌. ಶೆಟ್ಟಿಅವರು ವಿಶ್ವದೆಲ್ಲೆಡೆ ಹೊಂದಿರುವ ಆಸ್ತಿ ಮುಟ್ಟುಗೋಲಿಗೆ ಬ್ರಿಟನ್‌ನ ಕೋರ್ಟ್‌ ಆದೇಶಿಸಿದೆ.

ಅನಿವಾಸಿ ಕನ್ನಡಿಗ ಬಿ. ಆರ್. ಶೆಟ್ಟಿಗೆ ಸಂಕಷ್ಟ: ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರಕ್ಕೆ!

Latest Videos

undefined

ಅಬುಧಾಬಿ ಕಮರ್ಷಿಲ್‌ ಬ್ಯಾಂಕ್‌ (ಎಡಿಬಿಸಿ)ಯ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಅಬುಧಾಬಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಎನ್‌ಎಂಸಿ ಆರೋಗ್ಯ ಸೇವಾ ಕಂಪನಿಯಲ್ಲಿನ ಹಣಕಾಸು ಅವ್ಯವಹಾರ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಎನ್‌ಎಂಸಿ ಆಸ್ಪತ್ರೆಗಳ ಸಮೂಹ ಎಡಿಬಿಸಿ ಬ್ಯಾಂಕಿಗೆ 7000 ಕೋಟಿಗೂ ಅಧಿಕ ಸಾಲ ಮರುಪಾವತಿ ಮಾಡಬೇಕಿದೆ. ಅಲ್ಲದೇ ಇತರ ಸ್ಥಳೀಯ ಬಾಂಕುಗಳಿಗೆ ನೀಡಬೇಕಿರುವ ಸಾಲದ ಹಣ ಸೇರಿ ಒಟ್ಟು 28,000 ಕೋಟಿ ರು.ಗಿಂತಲೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರದಲ್ಲಿ ಭಾಗಿ ಆಗಿರುವ ಆರೋಪವನ್ನು ಎನ್‌ಎಂಸಿ ಆಸ್ಪತ್ರೆಗಳ ಸಮೂಹದ ವಿರುದ್ಧ ಹೊರಿಸಲಾಗಿದೆ.

ಈ ಸಂಬಂಧ ಸಂಸ್ಥೆಯ ಮಾಜಿ ಸಿಇಒ ಪ್ರಶಾಂತ್‌ ಮಂಗತ್‌ ಹಾಗೂ ಇರರ ಇಬ್ಬರು ಮಾಜಿ ಅಧಿಕಾರಿಗಳ ಆಸ್ತಿ ಜಪ್ತಿಗೂ ಬ್ರಿಟನ್‌ ಕೋರ್ಟ್‌ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಸಿಬಿ ಬ್ಯಾಂಕ್‌ 2020 ಏ.15ರಂದು ಕ್ರಿಮಿನಲ್‌ ದೂರ ದಾಖಲಿಸಿತ್ತು.

ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್‌. ಶೆಟ್ಟಿ ಫಿಲ್ಮ್‌ ಸಿಟಿ ಸ್ಥಾಪನೆ!

ಮೂಲತಃ ಉಡುಪಿ ಮೂಲದವರಾದ ಬಿ.ಆರ್‌. ಶೆಟ್ಟಿ1975ರಲ್ಲಿ ಎನ್‌ಎಂಸಿ ಆರೋಗ್ಯ ಸೇವೆ ಸಂಸ್ಥೆಯನ್ನು ಆರಂಭಿಸಿದ್ದರು. ಇದು ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ಅತಿದೊಡ್ಡ ಖಾಸಗಿ ಆರೋಗ್ಯ ಸೇವಾ ಸಂಸ್ಥೆ ಎನಿಸಿಕೊಂಡಿದೆ.

click me!