ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ, ಚುನಾವಣಾ ಆಯೋಗದ ವೆಬ್‌ಸೈಟ್ ಕ್ರ್ಯಾಶ್!

By Gowthami KFirst Published Dec 3, 2023, 9:49 AM IST
Highlights

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು, ಭಾರತದ ಚುನಾವಣಾ ಆಯೋಗದ  ವೆಬ್‌ಸೈಟ್ ಅನೇಕ ಬಳಕೆದಾರರಿಗೆ ಕ್ರ್ಯಾಶ್ ಆಗುತ್ತಿದೆ.

ನವದೆಹಲಿ (ನ.3): ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು, ಭಾರತದ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅನೇಕ ಬಳಕೆದಾರರಿಗೆ ಕ್ರ್ಯಾಶ್ ಆಗುತ್ತಿದೆ. ಇಸಿಐ ವೆಬ್‌ಸೈಟ್ ತೆರೆಯುತ್ತಿಲ್ಲ ಅಥವಾ ಕ್ರ್ಯಾಶ್ ಆಗಿದೆ ಎಂದು ಬಳಕೆದಾರರು ದೂರುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬೈಯುತ್ತಿದ್ದಾರೆ.

 ಬೆಳಗ್ಗೆ 9 ಗಂಟೆಯಾದರೂ ವೆಬ್‌ಸೈಟ್ ನಲ್ಲಿ ಯಾವುದೇ ಟ್ರೆಂಡ್‌ಗಳನ್ನು ತೋರಿಸುತ್ತಿಲ್ಲ. ಅಪ್ಡೇಟ್ ಕೂಡ ಬರುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಪ್ರಶ್ನಿಸುತ್ತಿದ್ದಂತೆಯೇ  ಚುನಾವಣಾ ಆಯೋಗವು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಸಂಕಷ್ಟದಲ್ಲಿ ಕೆಸಿಆರ್‌; ನನಸಾಗಲ್ಲ ಹ್ಯಾಟ್ರಿಕ್‌ ಕನಸು! ಮ್ಯಾಜಿಕ್‌ ನಂಬರ್‌ ದಾಟಿದ ಕಾಂಗ್ರೆಸ್‌

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ 2023 ರ ಅಸೆಂಬ್ಲಿ ಚುನಾವಣೆಗಳಿಗೆ ಭಾನುವಾರ ಎಣಿಕೆ ನಡೆಯುತ್ತಿದ್ದು, ನಾಳೆ ಅಂದರೆ ಡಿಸೆಂಬರ್ 4ರಂದು ಮಿಜೋರಾಂ ರಾಜ್ಯದ ಎಣಿಕೆ ನಡೆಯಲಿದೆ. ಬೆಳಗ್ಗೆಯಿಂದಲೇ ಎಣಿಕೆ ಕಾರ್ಯ  ಬಗ್ಗೆ ಮಾಧ್ಯಮಗಳು ಲೈವ್‌ ನೀಡುತ್ತಿದ್ದರೂ ಜನ ಚುನಾವಣಾ ಆಯೋಗದ ವೆಬ್‌ಸೈಟ್‌ ನೋಡುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ನಾಳೆಯಿಂದ ಡಿ.22ರವರೆಗೆ 15 ದಿನಗಳ ಕಾಲ ಚಳಿಗಾಲದ ಸಂಸತ್‌ ಅಧಿವೇಶನ

ಎಕ್ಸಿಟ್‌ ಸಮೀಕ್ಷೆಗಳು ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಕ್ಕೆ   2-2 ಗೆಲುವಿನ ಮುನ್ಸೂಚನೆ ನೀಡಿದ್ದರೂ, ಟ್ರೆಂಡ್‌ಗಳು ಇದೇ ಸಂಖ್ಯೆಯನ್ನು ಸೂಚಿಸಿವೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಚುನಾವಣಾ ಫಲಿತಾಂಶ ನೋಡಲು ಅಧಿಕೃತ ವೆಬ್‌ತಾಣ https://results.eci.gov.in/AcResultGenDecNew2023/index.htm ಇಲ್ಲಿ ನೋಡಿ.

click me!