Historic Agreement ಏನಿದು 50 ವರ್ಷ ಹಳೆಯ ಅಸ್ಸಾಂ ಮೇಘಾಲಯ ಗಡಿ ವಿವಾದ?

By Kannadaprabha NewsFirst Published Mar 30, 2022, 4:21 AM IST
Highlights

- 50 ವರ್ಷಗಳಷ್ಟುಹಳೆಯ ಬಿಕ್ಕಟ್ಟು ಇತ್ಯರ್ಥಕ್ಕೆ ಶಾಂತಿಯುತ ಪರಿಹಾರ
- ಯಶಸ್ವಿಯಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಧಾನ ಮಾತುಕತೆ
- ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳು ಒಪ್ಪಂದಕ್ಕೆ ಸಹಿ

ನವದೆಹಲಿ(ಮಾ.30): 1972ರಲ್ಲಿ ಅಸ್ಸಾಂ ರಾಜ್ಯವನ್ನು ವಿಭಜಿಸಿ ಮೇಘಾಲಯ ರಾಜ್ಯ ಸ್ಥಾಪನೆ ಬಳಿಕ ಉಭಯ ರಾಜ್ಯಗಳ ನಡುವೆ ಉದ್ಭವವಾಗಿದ್ದ ಗಡಿ ಸಮಸ್ಯೆಗೆ ಕೊನೆಗೂ ಶಾಂತಿಯುತ ಪರಿಹಾರ ಸಿಕ್ಕಿದೆ. ಉಭಯ ರಾಜ್ಯಗಳ ನಡುವೆ 12 ಸ್ಥಳಗಳ ಕುರಿತು ವಿವಾದ ಇದ್ದು, ಈ ಪೈಕಿ ಮೊದಲ ಹಂತದಲ್ಲಿ ಕಡಿಮೆ ಸಂಕೀರ್ಣವಾಗಿರುವ 6 ಸ್ಥಳಗಳಲ್ಲಿನ ವಿವಾದವನ್ನು ಬಗೆಹರಿಸಿಕೊಂಡು ಉಭಯ ರಾಜ್ಯಗಳು ಒಪ್ಪಂದಕ್ಕೆ ಸಹಿಹಾಕಿವೆ.

ಮಂಗಳವಾರ ಕೇಂದ್ರ ಗೃಹ ಸಚಿವಾಲಯದ ಕಚೇರಿಯಲ್ಲಿ ಸಚಿವ ಅಮಿತ್‌ ಶಾ ಉಪಸ್ಥಿತಿಯಲ್ಲಿ ಉಭಯ ರಾಜ್ಯಗಳು ಈ ಒಪ್ಪಂದಕ್ಕೆ ಸಹಿ ಹಾಕಿದವು. ಅಸ್ಸಾಂ ಪರವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಮೇಘಾಲಯದ ಪರವಾಗಿ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಸಹಿ ಹಾಕಿದರು.

ಅಸ್ಸಾಂನ ಹಲವು ಜಿಲ್ಲೆಗಳಲ್ಲೂ ಹಿಂದೂಗಳು ಅಲ್ಪಸಂಖ್ಯಾತರು

ಈ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ‘ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಬಿಕ್ಕಟ್ಟಿನಲ್ಲಿ ಶೇ.70ರಷ್ಟುಇತ್ಯರ್ಥವಾದಂತಾಗಿದೆ. ಈಶಾನ್ಯ ರಾಜ್ಯಗಳ ಪಾಲಿಗೆ ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು.

ಒಪ್ಪಂದದ ಅನ್ವಯ ವಿವಾದಕ್ಕೆ ಕಾರಣವಾಗಿದ್ದ 36 ಹಳ್ಳಿಗಳನ್ನು ಒಳಗೊಂಡ 36.79 ಚದರ ಕಿ.ಮೀ ಜಾಗದ ಪೈಕಿ 18.52 ಚ.ಕಿ.ಮೀ ಅಸ್ಸಾಂಗೆ ಮತ್ತು 18.28 ಚ.ಕಿ.ಮೀ ಮೇಘಾಲಯದ ಪಾಲಾಗಲಿದೆ. ಹೆಚ್ಚು ಸಂಕೀರ್ಣವಾಗಿರುವ ಉಳಿದ 6 ಸ್ಥಳಗಳ ಕುರಿತ ವಿವಾದವನ್ನು ಎರಡನೇ ಹಂತದಲ್ಲಿ ಬಗೆಹರಿಸಿಕೊಳ್ಳಲು ಉಭಯ ರಾಜ್ಯಗಳು ಸಮ್ಮತಿಸಿವೆ.

Kashmir Files ಸಿನಿಮಾ ನೋಡಲು ಬಯಸುವವರಿಗೆ ರಜೆ ನೀಡಿದ ಸರ್ಕಾರ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆಯಂತೆ ಗಡಿ ವಿವಾದ ಇತ್ಯರ್ಥಕ್ಕೆ ಉಭಯ ರಾಜ್ಯಗಳು ಕಳೆದ ಆಗಸ್ಟ್‌ನಲ್ಲಿ 3 ಸಮಿತಿ ರಚಿಸಿದ್ದವು. ಈ ಸಮಿತಿಯಗಳು ಎರಡು ಹಂತದ ಮಾತುಕತೆ ನಡೆಸಿದ ಬಳಿಕ ವಿವಾದ ಇತ್ಯರ್ಥಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ವಿವಾದ ಏನಿತ್ತು?
ಅಸ್ಸಾಂ-ಮೇಘಾಲಯ ಗಡಿಯ 6 ಪ್ರದೇಶಗಳಲ್ಲಿನ 36 ಹಳ್ಳಿಗಳ ವ್ಯಾಪ್ತಿಯ ಪ್ರದೇಶಗಳು ಯಾರಿಗೆ ಸೇರಿದ್ದವು ಎಂಬ ವಿವಾದ 50 ವರ್ಷದಿಂದ ಇತ್ತು.

ಒಪ್ಪಂದ ಏನು?
ವಿವಾದಕ್ಕೆ ಕಾರಣವಾಗ್ದಿ 36 ಹಳ್ಳಿಗಳನ್ನು ಒಳಗೊಂಡ 36.79 ಚದರ ಕಿ.ಮೀ ಜಾಗದ ಪೈಕಿ 18.52 ಚ.ಕಿ.ಮೀ ಅಸ್ಸಾಂ ಪಾಲಾಗಲಿದೆ. ಉಳಿದ 18.28 ಚ.ಕಿ.ಮೀ ಮೇಘಾಲಯದ ಪಾಲಾಗಲಿದೆ.

ಆಗಿದ್ದೇನು?: ಮಿಜೋರಾಂನ ಕೊಲಾಸಿಬ್‌ ಜಿಲ್ಲೆಯ ವೈರೆಂಗ್ಟೆಗ್ರಾಮ ಮತ್ತು ಅಸ್ಸಾಂ ಕಾಚರ್‌ ಜಿಲ್ಲೆಯ ಲೈಲಾಪುರ ಗ್ರಾಮಗಳು ಉಭಯ ರಾಜ್ಯದ ಗಡಿಯನ್ನು ಹಂಚಿಕೊಂಡಿವೆ. ಶನಿವಾರ ಸಂಜೆ ಗಡಿ ಬಳಿಯ ಹೆದ್ದಾರಿಯಲ್ಲಿ ವೈರೆಂಗ್ಟೆಗ್ರಾಮಸ್ಥರ ಗುಂಪಿನ ಮೇಲೆ ಅಸ್ಸಾಂ ಗಡಿ ಗ್ರಾಮಸ್ಥರು ಲಾಠಿ ಪ್ರಹಾರ ಹಾಗೂ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕ್ರೋಧಗೊಂಡ ವೈರೆಂಗ್ಟೆಗ್ರಾಮಸ್ಥರು ಗುಂಪು-ಗುಂಪಾಗಿ ಅಸ್ಸಾಂ ಲೈಲಾಪುರ ಗ್ರಾಮಕ್ಕೆ ನುಗ್ಗಿ 20 ಬಿದುರಿನ ಗುಡಿಸಲುಗಳು ಹಾಗೂ ಅಂಗಡಿಗಳಿಗೆ ಬೆಂಕಿ ಇಟ್ಟಿದ್ದಾರೆ. ಹಲವು ತಾಸು ನಡೆದ ಈ ಮಾರಾಮಾರಿಯಲ್ಲಿ ಎರಡೂ ಪಕ್ಷಗಳ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇಗುಲ ಗಲಾಟೆ: ಮತ್ತೊಂದೆಡೆ ತ್ರಿಪುರಾ ಮತ್ತು ಮಿಜೋರಾಂ ನಡುವೆಯೂ ಗಡಿ ಪ್ರದೇಶ ಸಂಬಂಧ ವಿವಾದ ಉಂಟಾಗಿದೆ. ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಬರುವ ಪೂಲ್‌ಡುಂಗ್ಸಾಯ್‌ ಎಂಬ ಗ್ರಾಮದಲ್ಲಿ ತ್ರಿಪುರಾದ ಆದಿವಾಸಿಗಳ ಸಮುದಾಯದ ಜನ ದೇಗುಲವೊಂದರ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಇದು ತನಗೆ ಸೇರಿದ ಪ್ರದೇಶವಾಗಿದ್ದು, ಅಲ್ಲಿ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಮಿಜೋರಾಂ ಸರ್ಕಾರ, ತ್ರಿಪುರಾ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ.

click me!