ಲೋಕಸಭೆ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ದಕ್ಕೆ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಟೀಕಿಸಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ಸರಿಯಲ್ಲ ಎಂದು ಹೇಳಿದ್ದಾರೆ.
ನವದೆಹಲಿ (ಮಾ.29): ಮೋದಿ ಸರ್‌ನೇಮ್ ಕೇಸ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿಕ್ಷೆಗೆ ಒಳಾಗಿರುವುದು ಮಾತ್ರವಲ್ಲ ತಮ್ಮ ಲೋಕಸಭಾ ಸದಸ್ಯತ್ವ, 12ನೇ ತುಘಲಕ್ ಲೇನ್‌ನಲ್ಲಿರುವ ಅವರ ನಿವಾಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇದರ ನಡುವೆ ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ಟೀಕೆ ಮಾಡುವ ಮೂಲಕ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆಯ ಬಗ್ಗೆ ಅಸ್ಸಾಂ ವಿಧಾನಸಭೆಯಲ್ಲಿ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ. ನಾಳೆ ಕೋರ್ಟ್ ನನಗೆ ಯಾವುದೇ ವಿಚಾರದಲ್ಲಿ ದೋಷಿ ಎಂದು ತೀರ್ಪು ನೀಡಿದರೆ, ನನ್ನ ಬಿಜೆಪಿ ಶಾಸಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತಾರೆಯೇ? ಇಲ್ಲ. ಇದು ಸಾಧ್ಯವೇ ಇಲ್ಲ. ನಾನು ಹೈಕೋರ್ಟ್‌ಗೆ ಹೋಗಬೇಕು. ಸುಪ್ರೀಂ ಕೋರ್ಟ್ ಅಥವಾ ಸೆಷನ್ ಕೋರ್ಟ್‌ಗೆ ಹೋಗಬೇಕು. ಆದರೆ, ಯಾವುದೇ ಕಾರಣಕ್ಕೂ ನ್ಯಾಯಾಂಗವನ್ನು ಧಿಕ್ಕರಿಸುವ ಪ್ರಯತ್ನ ಮಾಡೋದಿಲ್ಲ. ಕಾಂಗ್ರೆಸ್ ಮಾಡುತ್ತಿರುವ ಈ ಟ್ರೆಂಡ್ ದೇಶದ ಪ್ರಜಾಪ್ರಭುತ್ವಕ್ಕೆ ಹಿತಕರವಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ವಿಧಾನಸಭೆಯ ಕಲಾಪದ ವೇಳೆ ಟೀಕೆ ಮಾಡಿದ್ದಾರೆ.
ರಾಹುಲ್ ಗಾಂಧಿ ಇಂದು ಕೋರ್ಟ್ ತೀರ್ಪಿಗೆ ಗೌರವ ನೀಡದೇ ಇರೋದು ಮಾತ್ರವಲ್ಲ. ಸುಪ್ರೀಂ ಕೋರ್ಟ್ ಹಾಗೂ ಸೂರತ್ ಕೋರ್ಟ್‌ನ ನ್ಯಾಯಾಧೀಶರಿಗೆ ಮಾಡುವ ಅವಮಾನ. ಇಬ್ಬರಲ್ಲಿ ಯಾರದ್ದೇ ಬೇಕಾದರೂ ತಪ್ಪಾಗಿರಬಹುದು. ಆದರೆ, ದೇಶದಲ್ಲೊಂದು ನ್ಯಾಯಾಂಗ ವ್ಯವಸ್ಥೆಯಿದೆ. ಮೇಲಿನ ಕೋರ್ಟ್‌ಗೆ ಹೋಗಿ ಇದನ್ನು ಅವರು ಪ್ರಶ್ನೆ ಮಾಡಬಹುದು. ದೇಶದ ವಿರೋಧ ಪಕ್ಷದಸ ನಾಯಕರೆನಿಸಿಕೊಂಡ ವ್ಯಕ್ತ, ದೇಶದ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತಾರೆ ಎಂದಲ್ಲಿ ನಾವೇನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಕೋರ್ಟ್ ತೀರ್ಪು ಅನ್ನೋದು ಎರಡು ಅಲಗಿನ ಕತ್ತಿ ಇದ್ದಹಾಗೆ. ಒಮ್ಮೊಮ್ಮೆ ನಮ್ಮ ಪರವಾದ ತೀರ್ಪು ಬರುತ್ತದೆ. ಇನ್ನೊಮ್ಮೆ ನಮ್ಮ ವಿರುದ್ಧವಾಗಿ ಬರುತ್ತದೆ. ಹಾಗೇನಾದರೂ ನಮ್ಮ ವಿರುದ್ಧ ತೀರ್ಪು ಬಂದಲ್ಲಿ ಅದನ್ನು ಪ್ರತಿಭಟಿಸಬೇಕೇ? ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಾಡುತ್ತೇವೆಯೇ? ಅಥವಾ ಈ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮಾನಹಾನಿ ಕೇಸ್‌ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಮಾನವಾದ ಬಳಿಕ ಅವರ ಸದಸ್ಯತ್ವವನ್ನು ಕಳೆದ ವಾರ ರದ್ದು ಮಾಡಲಾಗಿತ್ತು. ಈ ಕುರಿತಂತೆ ಲೋಕಸಭೆ ಕಾರ್ಯಾಲಯ ರಾಹುಲ್ ಗಾಂಧಿಗೆ ನೋಟಿಸ್ ನೀಡಿ ಮಾಹಿತಿ ನೀಡಿತ್ತು. ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಈ ತೀರ್ಪಿಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ನಾನು ದೇಶದ ದನಿಗಾಗಿ ಹೋರಾಟ ಮಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ದ ಎಂದಿದ್ದರು.
| "Tomorrow, if Court convicts me in something, will BJP MLA wear black clothes & demonstrate? No. We'll go to High Court, Supreme Court, Sessions Court but we'll never defy the judiciary. This trend is not good for Indian democracy...," Assam CM Himanta Biswa Sarma in… pic.twitter.com/IZYq8KZhhg
— ANI (@ANI)ರಾಹುಲ್‌ಗೊಂದು, ಇನ್ನೊಬ್ಬರಿಗೊಂದು ಕಾನೂನಿಲ್ಲ: ಸಿಎಂ ಬೊಮ್ಮಾಯಿ
ವಯನಾಡ್ ಕ್ಷೇತ್ರದ ಸಂಸದನಾಗಿದ್ದ ರಾಹುಲ್ ಗಾಂಧಿ, ಲೋಕಸಭೆ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದು, ಮಾತ್ರವಲ್ಲದೆ 12ನೇ ತುಘಲಕ್ ಲೇನ್‌ನಲ್ಲಿದ್ದ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನೂ ಖಾಲಿ ಮಾಡಬೇಕಾಗಿದೆ. ಏಪ್ರಿಲ್ 22ರ ಒಳಗಾಗಿ ನಿವಾಸವನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ಲೋಕಸಭೆಯ ವಸತಿ ಇಲಾಖೆ ನೋಟಿಸ್ ನೀಡಿದೆ. ಈ ನಡುವೆ ರಾಹುಲ್ ಗಾಂಧಿ ತಮ್ಮ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆ ಅಸಂವಿಧಾನಿಕ ನಡೆ : ಹಿಂದುಳಿದ ವರ್ಗಗಳ ಜಾಗೃತ ವೇದಿಕೆ
2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ಕೆಎಚ್ ಮುನಿಯಪ್ಪ ಪರವಾಗಿ ಮತಯಾಚನೆ ಮಾಡಲು ಬಂದಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ, ಮೋದಿ ಎನ್ನುವ ಸರ್‌ನೇಮ್ ಹೊಂದಿರುವವರೆಲ್ಲಾ ಕಳ್ಳರೇ ಯಾಕಾಗಿರುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಆ ಮೂಲಕ ಇತರೆ ಹಿಂದುಳಿದ ಜಾತಿಗಳ ನಿಂದನೆ ಮಾಡಿದ್ದರು. ಈ ಕುರಿತಾಗಿ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದರು.