ಷಹಜಹಾನ್‌-ಮಮ್ತಾಜ್‌ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್‌ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!

By Santosh NaikFirst Published Apr 6, 2023, 1:35 PM IST
Highlights

ತಾಜ್‌ಮಹಲ್‌ ಹಾಗೂ ಕುತುಬ್‌ ಮಿನಾರ್‌ಅನ್ನು ಕೇಂದ್ರ ಸರ್ಕಾರ ಧ್ವಂಸ ಮಾಡಬೇಕು. ಮೊಘಲ್‌ ಕಾಲದ ಸ್ಮಾರಕಗಳ ಸ್ಥಳದಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಬೇಕು ಎಂದು ಅಸ್ಸಾಂನ ಬಿಜೆಪಿ ಶಾಸಕ ರೂಪಜ್ಯೋತಿ ಕುರ್ಮಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
 

ನವದೆಹಲಿ (ಏ.6): ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) 12ನೇ ತರಗತಿಯ ಪಠ್ಯಕ್ರಮದಲ್ಲಿ ಮೊಘಲ್‌ ಇತಿಹಾಸಕ್ಕೆ ಸಂಬಂಧಪಟ್ಟ ಕೆಲವು ಚಾಪ್ಟರ್‌ಗಳನ್ನು ಕೈಬಿಡಲು ನಿರ್ಧಾರ ಮಾಡಿರುವುದು ವಿವಾದಕ್ಕೆ ಈಡಾಗಿರುವ ನಡುವೆಯೇ ಅಸ್ಸಾಂನ ಬಿಜೆಪಿ ಶಾಸಕ ರೂಪಜ್ಯೋತಿ ಕುರ್ಮಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕೇಂದ್ರ ಸರ್ಕಾರ ತಾಜ್‌ಮಹಲ್‌ ಹಾಗೂ ಕುತುಬಲ್‌ ಮಿನಾರ್‌ ಅನ್ನು ಧ್ವಂಸ ಮಾಡಬೇಕು. ಮೊಘಲ್‌ ಸ್ಮಾರಕವಿದ್ದ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಅವರು ಹೇಳಿದ್ದರೆನ್ನಲಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಅದಲ್ಲದೆ, ಮೊಘಲ್‌ ಚಕ್ರವರ್ತಿ ಷಹ ಜಹಾನ್‌ ತನ್ನ ಪತ್ನಿ ಮುಮ್ತಾಜ್‌ಅನ್ನು ನಿಜವಾಗಿಯೀ ಅಷ್ಟು ಪ್ರೀತಿ ಮಾಡ್ತಿದ್ದನೇ ಅನ್ನೋದನ್ನೂ ಕೂಡ ತನಿಖೆ ಮಾಡಬೇಕಿದೆ ಎಂದು ಹೇಳಿದ್ದಾರೆ. ಮೊಘಲರ ಕಾಲದ ಎರಡು ಸ್ಮಾರಕಗಳ ಬದಲಿಗೆ ಅದೇ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಹಾಗೇನಾದರೂ ಸರ್ಕಾರ ಈ ಸ್ಥಳಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ನಿರ್ಧಾರ ಮಾಡಿದಲ್ಲಿ ತಮ್ಮ ಒಂದು ವರ್ಷದ ವೇತನವನ್ನು ಅದಕ್ಕೆ ನೀಡಲು ಸಿದ್ದ ಎಂದು ಮರಿಯಾನಿ ಕ್ಷೇತ್ರದ ಶಾಸಕ ಆ ವಿಡಿಯೋದಲ್ಲಿ ಹೇಳಿದ್ದಾರೆ. 

“ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ತಕ್ಷಣವೇ ಕೆಡವಲು ನಾನು ಪ್ರಧಾನಿಯನ್ನು ಒತ್ತಾಯಿಸುತ್ತೇನೆ. ಈ ಎರಡು ಸ್ಮಾರಕಗಳ ಜಾಗದಲ್ಲಿ ಜಗತ್ತಿನ ಸುಂದರ ದೇವಾಲಯಗಳನ್ನು ನಿರ್ಮಿಸಬೇಕು. ಆ ಎರಡು ದೇವಾಲಯಗಳ ವಾಸ್ತುಶೈಲಿಯು ಬೇರೆ ಯಾವುದೇ ಸ್ಮಾರಕಗಳು ಅವುಗಳಿಗೆ ಹತ್ತಿರವಾಗದಂತೆ ಇರಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಪ್ರೀತಿ ಹೆಂಡತಿ ಮುಮ್ತಾಜ್‌ಗಾಗಿ ತಾಜ್‌ಮಹಲ್‌ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಮುಮ್ತಾಜ್‌ ಸಾವಿನ ಬಳಿಕ 17ನೇ ಶತಮಾನದ ರಾಜ ಮೂರು ಬಾರಿ ಮದುವೆಯಾಗಿದ್ದೇಕೆ? ವಿಶ್ವದ ಏಳು ಅದ್ಭುತಗಳಲ್ಲಿ ಒಂದನ್ನು ಹಿಂದೂ ರಾಜಮನೆತನದ ಸಂಪತ್ತಿನಿಂದ ನಿರ್ಮಿಸಲಾಗಿದೆ ಎಂದು ಕುರ್ಮಿ ಹೇಳಿದ್ದಾರೆ.

Assam
Bharatiya Janta Party (BJP) MLA Rupjyoti Kurmi urges Prime Minister Narendra Modi to demolish the , Qutub Minar, and build temples instead. pic.twitter.com/w1LM2AlEci

— Inaya Saba (@InayaSaba)

ಷಹಜಹಾನ್‌ ಪುಣ್ಯತಿಥಿ: ನಾಳೆಯಿಂದ 3 ದಿನಗಳ ಕಾಲ ತಾಜ್‌ ಮಹಲ್‌ಗೆ ಉಚಿತ ಪ್ರವೇಶ..!

"1526 ರಲ್ಲಿ, ಮೊಘಲರು ಭಾರತಕ್ಕೆ ಬಂದರು ಮತ್ತು ನಂತರ ತಾಜ್ ಮಹಲ್ ಕಟ್ಟಿದರು. ಷಹಜಹಾನ್ ಹಿಂದೂ ರಾಜರಿಂದ ತೆಗೆದುಕೊಂಡ ಹಣದಿಂದ ತಾಜ್ ಮಹಲ್ ಅನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ಹಣದಲ್ಲಿ ಕಟ್ಟಿದ ಸ್ಮಾರಕ ತಾಜ್‌ಮಹಲ್‌. ಅವನು ತನ್ನ ನಾಲ್ಕನೇ ಹೆಂಡತಿಗಾಗಿ ತಾಜ್ ಮಹಲ್ ನಿರ್ಮಾಣ ಮಾಡಿದ್ದ. ಒಟ್ಟು ಏಳು ಬಾರಿ ಮದುವೆಯಾಗಿದ್ದ ರಾಜ ಆತ. ಮುಮ್ತಾಜ್‌ ಆತನ ನಾಲ್ಕನೇ ಹೆಂಡತಿ. ಅದರರ್ಥ ಮುಮ್ತಾಜ್‌ ಸಾವಿನ ಬಳಿಕವೂ ಅತ ಮೂರು ಮದುವೆಯಾಗಿದ್ದಾನೆ. ಅಷ್ಟು ಪ್ರೀತಿ ಮಾಡ್ತಿದ್ದ ಹೆಂಡತಿಯ ಸಾವು ಬಳಿಕ ಆತ ಮೂರು ಮದುವೆಯಾಗಿದ್ದರೆ ಇದೆಂಥಾ ಪ್ರೀತಿ ಎಂದು ಕುರ್ಮಿ ಹೇಳಿದ್ದಾರೆ.

ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ತಾಜ್ ಮಹಲ್ ಪ್ರೀತಿಗೆ ಸಾಕ್ಷಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ, ಇದು 'ಪ್ರೀತಿಯ ಸಂಕೇತವಲ್ಲ' ಎಂದು ನಾಲ್ಕು ಬಾರಿಯ ಶಾಸಕರೂ ಆಗಿರುವ ಕುರ್ಮಿ ಹೇಳಿದ್ದಾರೆ.

click me!