ಬಹುಪತ್ನಿತ್ವ ನಿಷೇಧಕ್ಕೆ ಮುಂದಾದ ಅಸ್ಸಾಂ ಸರ್ಕಾರ, ಮಸೂದೆ ಮಂಡನೆಗೆ ತಯಾರಿ!

Published : Jul 14, 2023, 11:44 AM IST
ಬಹುಪತ್ನಿತ್ವ ನಿಷೇಧಕ್ಕೆ ಮುಂದಾದ ಅಸ್ಸಾಂ ಸರ್ಕಾರ, ಮಸೂದೆ ಮಂಡನೆಗೆ ತಯಾರಿ!

ಸಾರಾಂಶ

ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿ ಕುರಿತು ಭಾರಿ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ಯುಸಿಸಿ ಜಾರಿಗೆ ಸಜ್ಜಾಗುತ್ತಿದೆ. ಆದರೆ ಅಸ್ಸಾಂನಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ, ಯುಸಿಸಿ ಮಸೂದೆಯಲ್ಲಿರುವ ಬಹುಪತ್ನಿತ್ವ ನಿಷೇಧವನ್ನು ಈಗಲೇ ಜಾರಿಗೊಳಿಸಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಅಂತ್ಯಹಾಡಲಾಗುತ್ತಿದೆ.

ಗುವ್ಹಾಟಿ(ಜು.14) ಏಕರೂಪ ನಾಗರೀತ ಸಂಹಿತೆ ಕಳೆದ ಕೆಲ ದಿನಗಳಿಂದ ಭಾರಿ ಚರ್ಚೆಯಾಗುತ್ತಿದೆ.  ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿರುವ ಏಕರೂಪ ನಾಗರೀಕ ಸಂಹಿತೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಎನ್‌ಡಿಎ ಕೆಲ ಮಿತ್ರ ಪಕ್ಷಗಳೇ ಅಪಸ್ವರ ಎತ್ತಿದೆ. ಇದೀಗ ಏಕರೂಪ ನಾಗರೀತ ಸಂಹಿತೆಯಲ್ಲಿರುವ ಬಹುಪತ್ನಿತ್ವ ನಿಷೇಧವನ್ನು ಇದೀಗ ಅಸ್ಸಾಂ ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ ಮಾಡುವುದಾಗಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದ ಹಲವು ಮಹಿಳೆಯರು ನೊಂದಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಸರ್ಕಾರ ಚಿಂತಿಸುತ್ತಿದೆ. ಈ ಕುರಿತ ಮಸೂದೆಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಬಹುಪತ್ನಿತ್ವ ನಿಷೇಧಕ್ಕೆ ಸಲಹೆ ಬಯಸಿ ಸರ್ಕಾರ ತಜ್ಞರ ಸಮತಿ ರಚಿಸಿತ್ತು. ಅದರ ವರದಿ ಇನ್ನೂ ಬಾಕಿ ಇದೆ. ಇದರ ನಡುವೆಯೇ ಗುರುವಾರ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ನಾವು ಸೆಪ್ಟೆಂಬರ್‌ನಲ್ಲಿ ಮುಂಬರುವ ಅಸೆಂಬ್ಲಿ ವಿಭಾಗದಲ್ಲಿ ಮಸೂದೆಯನ್ನು ಮಂಡಿಸಲು ಬಯಸುತ್ತೇವೆ. ಅಸ್ಸಾಂನಲ್ಲಿ ನಾವು ಬಹುಪತ್ನಿತ್ವವನ್ನು ತಕ್ಷಣವೇ ನಿಷೇಧಿಸುವ ಇರಾದೆ ಇದೆ. ಆದರೆ ಕೆಲವು ಕಾರಣಗಳಿಂದ ನಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಜನವರಿ ಅಧಿವೇಶನದಲ್ಲಿ ಮಾಡುತ್ತೇವೆ’ ಎಂದರು.

ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ

ಆದಾಗ್ಯೂ, ‘ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ನಾವು ಕ್ರಮ ತೆಗೆದುಕೊಳ್ಳಬೇಕಾಗಿಲ್ಲ, ಏಕೆಂದರೆ ಈ ಮಸೂದೆ ಸಂಹಿತೆಯೊಂದಿಗೆ ವಿಲೀನಗೊಳ್ಳುತ್ತದೆ’ ಎಂದರು.ಬಹುಪತ್ನಿತ್ವದ ನಿಷೇಧವನ್ನು ಒಮ್ಮತದ ಮೂಲಕ ಸಾಧಿಸಲಾಗುತ್ತದೆಯೇ ಹೊರತು ಆಕ್ರಮಣದಿಂದಲ್ಲ ಎಂದು ಶರ್ಮಾ ಈ ಹಿಂದೆ ಹೇಳಿದ್ದರು.

ಅಸ್ಸಾಂ ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ಉದ್ದೇಶಿಸಿರುವ ಏಕರೂಪ ನೀತಿ ಸಂಹಿತೆ ಜಾರಿಗೆ ಬೆಂಬಲ ನೀಡುತ್ತದೆ. ಮೆಘಾಲಯ, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಮಿತ್ರಕೂಟಗಳು ಏಕರೂಪ ಸಂಹಿತೆಗೆ ವಿರೋಧ ವ್ಯಕ್ತಪಡಿಸಿದೆ. ಆದರೆ ಅಸ್ಸಾಂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಏಕರೂಪ ಸಂಹಿತೆಗೆ ಬೆಂಬಲ ನೀಡಲಿದೆ ಎಂದು ಶರ್ಮಾ ಹೇಳಿದ್ದಾರೆ.

ನಿವೃತ್ತ ಗುವ್ಹಾಟಿ ಹೈಕೋರ್ಟ್ ಜಡ್ಜ್ ರುಮಿ ಫುಕೇನ್ ನೇತೃತ್ವದ ನಾಲ್ವರ ಸಮಿತಿಯನ್ನು ಅಸ್ಸಾಂ ಸರ್ಕಾರ ರಚಿಸಿದೆ. ಈ ಸಮಿತೆ 60 ದಿನದೊಳಗೆ ಸರ್ಕಾರಕ್ಕೆ ಬಹುಪತ್ನಿತ್ವ ನಿಷೇಧ ಕುರಿತು ವರದಿ ಸಲ್ಲಿಸಲಿದೆ. ಬಹುಪತ್ನಿತ್ವ ನಿಷೇಧದ ಸಾಧಕ ಹಾಗೂ ಬಾಧಕಗಳನ್ನು ಸಮಿತಿ ಅಧ್ಯಯನ ಮಾಡಲಿದೆ. ಈ ಸಮಿತಿಯು ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯಾ) ಕಾಯ್ದೆ, 1937 ಮತ್ತು ಭಾರತೀಯ ಸಂವಿಧಾನದ 25ನೇ ವಿಧಿಯನ್ನು ಪರಿಶೀಲಿಸಿ ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಈ ವರದಿ ಸಿದ್ಧಪಡಿಸುವ ವೇಳೆ ಸಮಿತಿಯು ಮುಸ್ಲಿಂ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಿದೆ.

ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿ: ಲೆಗ್ಗಿಂಗ್ಸ್ , ಟೀಶರ್ಟ್‌, ಜೀನ್ಸ್‌ ನಿಷೇಧ

ಸರ್ಕಾರ ರಚಿಸಿದ ಸಮಿತಿಯಲ್ಲಿ ನ್ಯಾ.ರುಮಿ ಫುಕಾನ್‌, ಅಸ್ಸಾಂ ಅಡ್ವೋಕೇಟ್‌ ಜನರಲ್‌ ದೇಬಜಿತ್‌ ಸೈಕಿಯಾ, ಅಸ್ಸಾಂ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ನಳಿನ್‌ ಕೊಹ್ಲಿ ಮತ್ತು ರಾಜ್ಯ ಹೈಕೋರ್ಚ್‌ನ ಹಿರಿಯ ವಕೀಲ ನೇಕಿಬುರ್‌ ಝಮಾನ್‌ ಸದಸ್ಯರಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು